• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದೇ ಜಿಎಸ್ ಟಿ ದರ ವಿಧಿಸಲು ಚಿಂತನೆ; ಎಲೆಕ್ಷನ್ ಗೂ ಮುನ್ನ ಜೇಟ್ಲಿ ಹೊಸ ಯೋಚನೆ

|

ನವದೆಹಲಿ, ಡಿಸೆಂಬರ್ 24: 12 ಹಾಗೂ 18% ಎಂದು ಎರಡು ದರ ವಿಧಿಸುವ ಬದಲು ಭವಿಷ್ಯದಲ್ಲಿ ಒಂದೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಹಾಕುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸೋಮವಾರ ಹೇಳಿದ್ದಾರೆ. ಈ ಎರಡೂ ದರದ ಮಧ್ಯದಲ್ಲಿ ಮತ್ತೊಂದು ದರ ಕೂಡ ಇರಬಹುದು ಎಂಬ ಸೂಚನೆ ಕೂಡ ನೀಡಿದ್ದಾರೆ.

ಖಂಡಿತಾ ಇದಕ್ಕೆ ಸಮಯ ಹಿಡಿಯಲಿದೆ. ದೇಶದಲ್ಲಿ ಸೊನ್ನೆ ಹಾಗೂ ಐದು ಪರ್ಸೆಂಟ್ ಮಾತ್ರ ತೆರಿಗೆ ದರ ಇರಲಿದೆ. ಇವೆರಡನ್ನು ಹೊರತುಪಡಿಸಿದರೆ ವಿಲಾಸಿ ವಸ್ತುಗಳಿಗೆ ಪ್ರತ್ಯೇಕ ತೆರಿಗೆ ದರ ಇರಲಿದೆ ಎಂದು ಅವರು ಹೇಳಿದ್ದಾರೆ.

ಜನವರಿ ನಂತರ ಅಪಾರ್ಟ್ಮೆಂಟ್ ಖರೀದಿಸಿ, ಜಿಎಸ್ಟಿ ತಗ್ಗಲಿದೆ!

ಜಿಎಸ್ ಟಿ ಬದಲಾವಣೆಗೆ ಪೂರ್ಣಗೊಂಡ ನಂತರ ಮೊದಲ ಹಂತದ ದರ ನಿಗದಿ ಪ್ರಕ್ರಿಯೆ ಶುರು ಮಾಡುತ್ತೇವೆ. ಅದೇನೆಂದರೆ ಇಪ್ಪತ್ತೆಂಟು ಪರ್ಸೆಂಟ್ ಸ್ಲ್ಯಾಬ್ ವಿಲಾಸಿ ವಸ್ತುಗಳಿಗೆ ಹಾಗೂ ಪಾಪದ ವಸ್ತುಗಳಿಗೆ (ಸಿಗರೇಟ್ ಇತ್ಯಾದಿ) ಮಾತ್ರ ಇರಲಿವೆ. ಯಾರು ದೇಶದ ಮೇಲೆ 31% ಪರೋಕ್ಷ ತೆರಿಗೆ ಹಾಕಿದರೋ ಅಂಥವರು ಈಗಿನ ದರ ವಿಚಾರವಾಗಿ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದಿದ್ದಾರೆ.

ಹೊಸವರ್ಷಕ್ಕೆ ಜಿಎಸ್ಟಿ ಇಳಿಕೆ ಕೊಡುಗೆ, ಈಡೇರಿಲ್ಲ ಇನ್ನು 5 ಬೇಡಿಕೆ

ಜಿಎಸ್ ಟಿ ಕೌನ್ಸಿಲ್ ರಚನೆಯಾದ ದಿನದಿಂದಲೂ ಬಹಳ ಜವಾಬ್ದಾರಿಯಿಂದ ವರ್ತಿಸಿದೆ. ಈ ಹಿಂದೆ ಭಾರತದಲ್ಲಿ ಇದ್ದದ್ದು ಜಗತ್ತಿನಲ್ಲೇ ಅತ್ಯಂತ ಕೆಟ್ಟ ಪರೋಕ್ಷ ತೆರಿಗೆ ಹಾಕುವ ವಿಧಾನ. ರಾಜ್ಯ್ ಹಾಗೂ ಕೇಂದ್ರ ಸರಕಾರ ಸೇರಿ ಹದಿನೇಳು ಬಗೆಯ ತೆರಿಗೆ ಹಾಕುತ್ತಿದ್ದವು. ಆದ್ದರಿಂದ ಹದಿನೇಳು ಆಯುಕ್ತರು, ಅಷ್ಟೇ ಸಂಖ್ಯೆಯ ರಿಟರ್ನ್ಸ್, ಅಸೆಸ್ ಮೆಂಟ್ ಎಲ್ಲವನ್ನೂ ವ್ಯಾಪಾರಿಗಳು ಎದುರುಗೊಳ್ಳಬೇಕಿತ್ತು ಎಂದು ಜೇಟ್ಲಿ ಹೇಳಿದ್ದಾರೆ.

ತೆರಿಗೆ ತಪ್ಪಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು

ತೆರಿಗೆ ತಪ್ಪಿಸುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು

ಈ ಹಿಂದೆ ವ್ಯಾಪಾರಸ್ಥರು ಅತಿ ಹೆಚ್ಚು ತೆರಿಗೆ ಪಾವತಿ ಮಾಡಬೇಕಿತ್ತು ಅಥವಾ ತಪ್ಪಿಸಬೇಕಿತ್ತು. ಆದ್ದರಿಂದಲೇ ತೆರಿಗೆ ತಪ್ಪಿಸುವವರೇ ಹೆಚ್ಚಿದ್ದರು. ತೆರಿಗೆ ದರವು ಪ್ರತ್ಯೇಕವಾದ್ದರಿಂದ ಪ್ರತಿ ರಾಜ್ಯವೂ ಪ್ರತ್ಯೇಕ ಮಾರುಕಟ್ಟೆಯಂತೆ ಇತ್ತು. ಅಂತರರಾಜ್ಯ ಮಾರಾಟವಂತೂ ಬಹಳ ಕಷ್ಟವಾಗಿತ್ತು. ರಾಜ್ಯಗಳ ಗಡಿಯಲ್ಲಿ ಗಂಟೆಗಳಿಂದ ದಿನಗಳ ತನಕ ಕಾಯಲೇಬೇಕಿತ್ತು ಎಂದಿದ್ದಾರೆ.

ಹದಿನೇಳು ವಿವಿಧ ತೆರಿಗೆಗಳು ಸೇರಿ ಒಂದೇ ತೆರಿಗೆ

ಹದಿನೇಳು ವಿವಿಧ ತೆರಿಗೆಗಳು ಸೇರಿ ಒಂದೇ ತೆರಿಗೆ

ಜಿಎಸ್ ಟಿ ಜಾರಿಯಾದ ದಿನದಿಂದ ಕೃಪಾಪೋಷಿತ ಟೀಕೆಗಳನ್ನು ಎದುರಿಸುತ್ತಲೇ ಇದೆ. ಆದರೂ ಪರಿಸ್ಥಿತಿ ಸುಧಾರಿಸುವಲ್ಲಿ ಜಿಎಸ್ ಟಿ ಯಶಸ್ಸು ಸಾಧಿಸಿದೆ. ಹದಿನೇಳು ತೆರಿಗೆಗಳು ಒಟ್ಟಾಗಿ ಒಂದು ತೆರಿಗೆ ಪದ್ಧತಿ ಬಂದಿದೆ. ಇಡೀ ಭಾರತ ಒಂದು ಮಾರುಕಟ್ಟೆ ಆಗಿದೆ. ಅಂತರರಾಜ್ಯ ತಡೆಗಳು ಕಣ್ಮರೆಯಾಗಿವೆ. ನಗರಗಳಿಗೆ ಪ್ರವೇಶ ಸುಲಭವಾಗಿದೆ ಎಂದು ಹೇಳಿದ್ದಾರೆ.

ಜಿಎಸ್ಟಿ ತೆರಿಗೆ ದರದಲ್ಲಿ ಭಾರೀ ಇಳಿಕೆ: ಜನಸಾಮಾನ್ಯ ಫುಲ್ ಖುಷ್

ಮನರಂಜನಾ ತೆರಿಗೆ ಸದ್ಯದಲ್ಲೇ ಇಳಿಕೆ

ಮನರಂಜನಾ ತೆರಿಗೆ ಸದ್ಯದಲ್ಲೇ ಇಳಿಕೆ

ರಾಜ್ಯಗಳು ಮನರಂಜನಾ ತೆರಿಗೆ ಮೂವತ್ತೈದರಿಂದ ನೂರಾಹತ್ತು ಪರ್ಸೆಂಟ್ ತೆರಿಗೆ ಹಾಕಲಾಗುತ್ತಿದೆ. ಅದು ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಲಿದೆ. 235 ವಸ್ತುಗಳಿಗೆ 31% ಅಥವಾ ಅದಕ್ಕಿಂತ ಹೆಚ್ಚಿನ ದರ ವಿಧಿಸಲಾಗುತ್ತಿತ್ತು. ಆನಂತರ ಅಂಥ 10 ವಸ್ತುಗಳು ಹೊರತುಪಡಿಸಿ ಉಳಿದವಕ್ಕೆ ತಕ್ಷಣದಿಂದಲೇ 28%ಗೆ ಇಳಿಸಲಾಗಿದೆ. ಹತ್ತು ವಸ್ತುಗಳಿಗೆ 18% ವಿಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಜನಸಾಮಾನ್ಯರ ಅಗತ್ಯ ವಸ್ತುಗಳಿಗೆ 0%ನಿಂದ 5% ತೆರಿಗೆ

ಜನಸಾಮಾನ್ಯರ ಅಗತ್ಯ ವಸ್ತುಗಳಿಗೆ 0%ನಿಂದ 5% ತೆರಿಗೆ

ಯಾವುದೇ ವಸ್ತುಗಳ ಮೇಲೆ ಅನಗತ್ಯವಾಗಿ ಹೆಚ್ಚಿನ ದರದ ತೆರಿಗೆ ವಿಧಿಸಬಾರದು ಎಂಬ ಕಾರಣಕ್ಕೆ ಕೂಲಂಕಶ ಪರಿಶೀಲನೆ ಮಾಡಿದ್ದೇವೆ. ಇದರಲ್ಲಿ ಹಣದುಬ್ಬರದ ಪ್ರಭಾವ ಕೂಡ ಇದೆ. ಜನಸಾಮಾನ್ಯರಿಗೆ ಅಗತ್ಯ ಇರುವ ವಸ್ತುಗಳು 0%ನಿಂದ 5% ತೆರಿಗೆ ವ್ಯಾಪ್ತಿಯಲ್ಲೇ ಇವೆ. ರಿಟರ್ನ್ಸ್ ಆನ್ ಲೈನ್ ಆಗಿವೆ, ಅಸೆಸ್ ಮೆಂಟ್ ಆನ್ ಲೈನ್ ಆಗಿವೆ, ಹಲವು ಆಯುಕ್ತರಿದ್ದವರು ಈಗಿಲ್ಲ ಎಂದು ಜೇಟ್ಲಿ ತಮ್ಮ ಬ್ಲಾಗ್ ನಲ್ಲಿ ತಿಳಿಸಿದ್ದಾರೆ.

ಜಿಎಸ್ ಟಿ ಜಾರಿಗೆ ದಿನಬಳಕೆ ವಸ್ತು ಬೆಲೆ ಇಳಿಕೆ, ಗ್ರಾಹಕ ಖುಷ್ ಹುವಾ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Union minister Arun Jaitley hints single standard GST rate in future. So, to implement this rules road work towards it, Jailey writes in blog.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more