• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿ ಬಿಗ್ ಬಿಲಿಯನ್ ಡೇಸ್‌ನಿಂದ ಫ್ಲಿಪ್‌ಕಾರ್ಟ್‌ಗೆ ಶೇ 40ರಷ್ಟು ಪ್ರಗತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 4: ಫ್ಲಿಪ್‌ಕಾರ್ಟ್‌ನ ವಾರ್ಷಿಕ ಪ್ರಮುಖ ಕಾರ್ಯಕ್ರಮವಾದ ದಿ ಬಿಗ್ ಬಿಲಿಯನ್ ಡೇಸ್ ನ 8 ನೇ ಆವೃತ್ತಿ ಪರಿಣಾಮಕಾರಿಯಾಗಿ ಆರಂಭವಾಗಿದೆ. ಆರಂಭಿಕ ದಿನಗಳಲ್ಲಿ ದೇಶದಲ್ಲಿನ ಗ್ರಾಹಕರಲ್ಲಿ ಉತ್ಸಾಹಭರಿತವಾದ ಭಾವನೆಗಳು ವ್ಯಕ್ತವಾಗುತ್ತಿವೆ. ಈ ದಿಸೆಯಲ್ಲಿ ಗ್ರಾಹಕರಿಗೆ ಮತ್ತಷ್ಟು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್‌ ಎಂಎಸ್ಎಂಇಗಳು ಮತ್ತು ಮಾರಾಟಗಾರರನ್ನು ಚುರುಕುಗೊಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಫ್ಲಿಪ್ ಕಾರ್ಟ್ ಪ್ಲಸ್ ಅನ್ನು ಆರಂಭಿಕ ಅಕ್ಸೆಸ್ ಮಾಡಿಕೊಳ್ಳುವ ಗ್ರಾಹಕರ ಸಂಖ್ಯೆಯಲ್ಲಿ ಶೇ.40 ರಷ್ಟು ಪ್ರಗತಿ ಕಂಡುಬಂದಿದೆ. ವಿಶೇಷವೆಂದರೆ 3 ನೇ ಶ್ರೇಣಿಯ ನಗರಗಳಲ್ಲಿ ಶೇ.45 ರಷ್ಟು ಗ್ರಾಹಕರಿಂದ ಬೇಡಿಕೆ ಬಂದಿದೆ. ಈ ಬಾರಿ ಹೆಚ್ಚಿನ ಮೌಲ್ಯದ ಸರಕು/ಉತ್ಪನ್ನಗಳಿಗೆ ಬಲವಾದ ಆದ್ಯತೆಯನ್ನು ನೀಡಲಾಗುತ್ತಿದೆ ಎಂಬುದನ್ನು ಈ ಸಂಖ್ಯೆಯಿಂದ ತಿಳಿದುಕೊಳ್ಳಬಹುದಾಗಿದೆ. ಈ ಬಾರಿಯ ಹಬ್ಬದ ಸಂದರ್ಭದಲ್ಲಿ 2 ಮಿಲಿಯನ್‌ಗೂ ಹೆಚ್ಚಿನ ಗ್ರಾಹಕರು ಮುಂಚಿನ ಪ್ರವೇಶಕ್ಕೆ ಮುನ್ನವೇ ಕೇವಲ 1 ರೂಪಾಯಿ ಪಾವತಿಸಿ 5 ಮಿಲಿಯನ್ ಉತ್ಪನ್ನಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದಾರೆ.

ಭಾರತೀಯ ಹಬ್ಬದ ಸ್ಪೂರ್ತಿಯನ್ನು ಗಮನದಲ್ಲಿಟ್ಟುಕೊಂಡು, ಫ್ಲಿಪ್ ಕಾರ್ಟ್ ಈ ವರ್ಷ ಬಿಬಿಡಿ ಶಗುನ್' (ವಿಶೇಷ ಕೊಡುಗೆ)ಯನ್ನು ವಿನ್ಯಾಸಗೊಳಿಸಿ, ವಿತರಿಸಿದೆ. ಅರ್ಲಿ ಅಕ್ಸೆಸ್ ಅಂದರೆ ಮುಂಚಿತವಾಗಿ ಮುಂಗಡ ಕಾಯ್ದಿರಿಸುವ ಪ್ರಕ್ರಿಯೆಯಲ್ಲಿ 2,50,000 ಅಧಿಕ ಗ್ರಾಹಕರು ಈ ಕೊಡುಗೆಯಡಿ ಮೊದಲ 12 ಗಂಟೆಗಳಲ್ಲೇ 2 ಕೋಟಿ ರೂಪಾಯಿಗೂ ಹೆಚ್ಚಿನ ಹಣವನ್ನು ರಿಡೀಮ್ ಮಾಡಿಕೊಂಡಿದ್ದಾರೆ. ಈ ''ಬಿಬಿಡಿ ಸ್ಪೆಷಲ್ಸ್'' ಗ್ರಾಹಕರ ನೆಚ್ಚಿನ ಕೊಡುಗೆಯಾಗಿದ್ದು, ಅರ್ಲಿ ಅಕ್ಸೆಸ್ ಆರಂಭದ ಮೊದಲ 12 ಗಂಟೆಗಳಲ್ಲಿ 1,00,000 ಅಧಿಕ ಗ್ರಾಹಕರು ಈ ಉತ್ಪನ್ನಗಳಿಗೆ ಆರ್ಡರ್ ಮಾಡಿದ್ದಾರೆ.

 ನಂದಿತಾ ಸಿನ್ಹಾ ಮಾತನಾಡಿ

ನಂದಿತಾ ಸಿನ್ಹಾ ಮಾತನಾಡಿ

ಫ್ಲಿಪ್ ಕಾರ್ಟ್ ನ ಕಸ್ಟಮರ್ ಅಂಡ್ ಗ್ರೋತ್ ವಿಭಾಗದ ಉಪಾಧ್ಯಕ್ಷರಾದ ನಂದಿತಾ ಸಿನ್ಹಾ ಅವರು ಈ ಬಗ್ಗೆ ಮಾತನಾಡಿ, ''ಈ ವರ್ಷ ಟಿಬಿಬಿಡಿಯಲ್ಲಿ ಗ್ರಾಹಕರು ಮತ್ತು ಮಾರಾಟಗಾರರು ಅಭೂತಪೂರ್ವವಾದ ರೀತಿಯಲ್ಲಿ ಪಾಲ್ಗೊಳ್ಳಲು ಆರಂಭಿಸಿದ್ದಾರೆ. ಇ-ಕಾಮರ್ಸ್ ಅನ್ನು ಜನರು ಹೆಚ್ಚು ಹೆಚ್ಚು ಸ್ವೀಕಾರ ಮಾಡುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಹೀಗಾಗಿ ಇ-ಕಾಮರ್ಸ್ ಬಳಕೆ ಹೆಚ್ಚಳ ಕಾಣುತ್ತಿದೆ. ಇದು ಬಳಕೆದಾರ ಸ್ನೇಹಿ ತಾಂತ್ರಿಕತೆ ಮತ್ತು ಆರ್ಥಿಕ ನಿರ್ಮಾಣಗಳ ಅಳವಡಿಕೆಗೆ ಚಾಲನೆ ದೊರೆತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ. ಮುಂಬರುವ ವರ್ಷಗಳಲ್ಲಿ ನಾವು ಉತ್ತಮವಾದುದನ್ನೇ ಮುಂದುವರಿಸುತ್ತೇವೆ- ಉತ್ತಮ ಮೌಲ್ಯವನ್ನು ನೀಡುವ ಉತ್ಪನ್ನಗಳನ್ನು ನೀಡುತ್ತೇವೆ ಮತ್ತು ಗ್ರಾಹಕರಿಗೆ ನಮ್ಮ ಪ್ಲಾಟ್ ಫಾರ್ಮ್ ಅನ್ನು ಮತ್ತಷ್ಟು ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡುವ ವೈಶಿಷ್ಟ್ಯತೆಗಳನ್ನು ಮತ್ತು ಪರಿಹಾರಗಳನ್ನು ಪರಿಚಯಿಸಲಿದ್ದೇವೆ. ನಾವು ನಮ್ಮ ಮಾರಾಟಗಾರರು ಮತ್ತು ಎಂಎಸ್ಎಂಇಗಳ ಪರಿಸರ ವ್ಯವಸ್ಥೆಯನ್ನು ವಿಸ್ತರಣೆ ಮತ್ತು ಮತ್ತಷ್ಟು ಸಶಕ್ತಗೊಳಿಸಲಿದ್ದೇವೆ. ಈ ಮೂಲಕ ಮಿಲಿಯನ್ ಗಟ್ಟಲೆ ಜೀವನೋಪಾಯಗಳು ಮತ್ತು ಆದಾಯವನ್ನು ಉತ್ತಮಗೊಳಿಸಲಿದ್ದೇವೆ ಹಾಗೂ ದೇಶಾದ್ಯಂತ ನಮ್ಮ ತಲುಪುವಿಕೆಯನ್ನು ವಿಸ್ತಾರಗೊಳಿಸಲಿದ್ದೇವೆ. ಈ ದಿಸೆಯಲ್ಲಿ ನಾವು ಎಲ್ಲರಿಗೂ ಸಮೃದ್ಧಿಯ ವರ್ಷವನ್ನು ಎದುರುನೋಡುತ್ತಿದ್ದೇವೆ'' ಎಂದು ತಿಳಿಸಿದರು.

ಸ್ಮಾರ್ಟ್‌ಫೋನ್ ವಿನಿಮಯ

ಸ್ಮಾರ್ಟ್‌ಫೋನ್ ವಿನಿಮಯ

ಪ್ರತಿ ಐದು ಗ್ರಾಹಕರಲ್ಲಿ ಒಬ್ಬರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಹೊಸ ಮೊಬೈಲ್‌ಗೆ ವಿನಿಮಯ ಮಾಡಿಕೊಳ್ಳುವುದನ್ನು ಆಯ್ದುಕೊಂಡಿದ್ದಾರೆ. ಈ ಪೈಕಿ ಶೇ.82.60 ರಷ್ಟು ಗ್ರಾಹಕರು ಪ್ರೀಪೇಯ್ಡ್ ಪಾವತಿಯ ಆಯ್ಕೆಗಳ ಮೂಲಕ ತಮ್ಮ ಮುಂದಿನ ಸ್ಮಾರ್ಟ್‌ಫೋನ್‌ಗೆ ಪಾವತಿ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. Apple 12 ಮತ್ತು Apple 12 Mini ಪ್ರಸ್ತುತ ನೆಚ್ಚಿನ ಸ್ಮಾರ್ಟ್ ಫೋನ್ ಮಾಡೆಲ್ ಗಳಾಗಿವೆ. ಇದುವರೆಗೆ ಬಹುತೇಕ 2 ಲಕ್ಷ Apple iPhone 12 ಸಾಧನಗಳು ಮಾರಾಟವಾಗಿವೆ. ಹೋಂ ಅಪ್ಲಾಯನ್ಸ್‌ನಲ್ಲಿ ಅತ್ಯಧಿಕ ಮಾರಾಟವಾಗುತ್ತಿರುವ ಉತ್ಪನ್ನಗಳೆಂದರೆ ಟಿವಿಗಳು. ಅದೇ ರೀತಿ ದೊಡ್ಡ ಅಪ್ಲಾಯನ್ಸಸ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇನ್ನು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ದಾಖಲೆಯ ಪ್ರಮಾಣದ ಮಾರಾಟದಲ್ಲಿ ಲ್ಯಾಪ್‌ಟಾಪ್‌ಗಳು ಸೇರಿವೆ. ಇದರೊಂದಿಗೆ ವೈರ್ ಲೆಸ್ ಇಯರ್ ಫೋನ್‌ಗಳಿಗೆ ಗಮನಾರ್ಹವಾದ ಬೇಡಿಕೆ ಬಂದಿದೆ. ಸ್ಪೋರ್ಟ್ಸ್ ಶೂಗಳು, ಔಟ್ ಡೋರ್‌ವೇರ್ ಮತ್ತು ಪುರುಷರ ಬಟ್ಟೆಗಳ ಮಾರಾಟ ಹೆಚ್ಚಾಗಿದೆ. ಈ ಮೂಲಕ ಫ್ಯಾಷನ್ ವಿಭಾಗದಲ್ಲಿನ ಮಾರಾಟದಲ್ಲಿ ಏರಿಕೆಯಾಗಿದೆ. ಸುಮಾರು ಒಂದು ವರ್ಷದ ನಿರ್ಬಂಧಗಳ ನಂತರ ಜನರು ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಲು ಹೊರ ಹೋಗುತ್ತಿರುವುದಕ್ಕೆ ಸಿದ್ಧವಾಗಿರುವುದನ್ನು ಈ ಬೇಡಿಕೆಗಳು ಸೂಚಿಸುತ್ತವೆ.

ಫ್ಲಿಪ್‌ಕಾರ್ಟ್ ಪೇ ಲೇಟರ್

ಫ್ಲಿಪ್‌ಕಾರ್ಟ್ ಪೇ ಲೇಟರ್

ಫ್ಲಿಪ್‌ಕಾರ್ಟ್ ಪೇ ಲೇಟರ್, ನೋ-ಕಾಸ್ಟ್ ಇಎಂಐ, ಫ್ಲಿಪ್ ಕಾರ್ಟ್ ಎಕ್ಸಿಸ್ ಬ್ಯಾಂಕ್ ಸಹಭಾಗಿತ್ವದ ಕ್ರೆಡಿಟ್ ಕಾರ್ಡ್ ಮತ್ತು ಇನ್ನಿತರೆ ಸೌಲಭ್ಯಗಳು ಗ್ರಾಹಕರು ಸುಲಭವಾಗಿ ಸಾಲ ಸೌಲಭ್ಯ ಪಡೆದು ಅಧಿಕ ಮೊತ್ತದ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸುತ್ತಿವೆ. ಈ ಬಾರಿಯ ಟಿಬಿಬಿಡಿ ಆವೃತ್ತಿಯಲ್ಲಿ ಫ್ಲಿಪ್‌ಕಾರ್ಟ್ ತನ್ನ ಕೈಗೆಟುಕುವ ಪಾವತಿ ವಿಧಾನಗಳಲ್ಲಿ ಪ್ರಗತಿಯನ್ನು ಕಂಡಿದೆ. ಕ್ರೆಡಿಟ್ ಕಾರ್ಡ್, ಪ್ರೀಪೇಯ್ಡ್ ಆರ್ಡರ್ ಗಳ ನಂತರದ ಸ್ಥಾನದಲ್ಲಿ ಅಂದರೆ ಎರಡನೇ ಸ್ಥಾನದಲ್ಲಿ ''ಫ್ಲಿಪ್‌ಕಾರ್ಟ್ ಲೇಟರ್'' ಇದೆ. ಗ್ರಾಹಕರು ಈ ಸೌಲಭ್ಯವನ್ನು ಬಳಸಿಕೊಂಡು ಗ್ರಾಸರಿ, ಲೈಫ್ ಸ್ಟೈಲ್ ಮತ್ತು ಮನೆಯ ಅಗತ್ಯತೆಯ ಉತ್ಪನ್ನಗಳ ಖರೀದಿಯನ್ನು ಮಾಡಿದ್ದಾರೆ. ''ಫ್ಲಿಪ್‌ಕಾರ್ಟ್ ಪೇ ಲೇಟರ್'' ಯುಪಿಐ ಪಾವತಿಗಳಿಗಿಂತ ಹೆಚ್ಚಾಗಿದೆ ಮತ್ತು ಇತ್ತೀಚೆಗೆ ಆರಂಭಿಸಲಾಗಿರುವ ''ಫ್ಲಿಪ್‌ಕಾರ್ಟ್ ಪೇ ಲೇಟರ್ ಇಎಂಐ'' ಅನ್ನು ಹೆಚ್ಚು ಗ್ರಾಹಕರು ಅಳವಡಿಸಿಕೊಳ್ಳುತ್ತಿದ್ದಾರೆ. ಮಾರಾಟವಿಲ್ಲದ ಅವಧಿಗೆ ಹೋಲಿಸಿದರೆ ವಿಶೇಷ ಮಾರಾಟ ಆರಂಭವಾದಾಗಿನಿಂದ ಗ್ರಾಹಕರು ದೈನಂದಿನ ವ್ಯವಹಾರಗಳ ಸಂಖ್ಯೆಯಲ್ಲಿ 10 ಪಟ್ಟು ಹೆಚ್ಚಳವಾಗಿದೆ.

124 ಹೊಸ ನಗರಗಳು

124 ಹೊಸ ನಗರಗಳು

ಮೊದಲ 24 ಗಂಟೆಗಳಲ್ಲಿ ದೇಶದ 124 ಹೊಸ ನಗರಗಳು/ಪಟ್ಟಣಗಳಲ್ಲಿ ಮಾರಾಟಗಾರರು ವ್ಯವಹಾರ ನಡೆಸಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ ಹಿಂಗ್ನಾ(ಮಹಾರಾಷ್ಟ್ರ), ಬಾಘ್ಪತ್(ಉತ್ತರ ಪ್ರದೇಶ), ಅಟ್ಟಿಂಗಲ್ (ಕೇರಳ), ಸಾಂಭಲ್(ಉತ್ತರ ಪ್ರದೇಶ) ಮತ್ತು ದೇವಾ(ಉತ್ತರ ಪ್ರದೇಶ) ಮತ್ತು ಇತರೆ ಹೊಸ ನಗರಗಳಲ್ಲಿ ವ್ಯವಹಾರಗಳನ್ನು ನಡೆಸಲಾಗಿದೆ. ಮಾರಾಟಗಾರರು ಹೆಚ್ಚಾಗಿ ಗ್ರೂಮಿಂಗ್, ಮೊಬೈಲ್ ಪ್ರೊಟೆಕ್ಷನ್, ಹೋಂ ಫರ್ನಿಶಿಂಗ್, ಹೌಸ್ ಹೋಲ್ಡ್ ಮತ್ತು ವುಮೆನ್ ಎಥ್ನಿಕ್ ಉತ್ಪನ್ನಗಳನ್ನು ಮಾರ್ಕೆಟ್ ಪ್ಲೇಸ್‌ನಲ್ಲಿ ಮಾರಾಟ ಮಾಡಿದ್ದಾರೆ.

ಪ್ರಜಾಸತ್ತಾತ್ಮಕ ವಿಧಾನ ಮತ್ತು ವಿಸ್ತಾರವಾದ ಉತ್ಪನ್ನಗಳ ಆಯ್ಕೆಗಳು ಗ್ರಾಹಕರ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಮತ್ತು 2 ನೇ ಶ್ರೇಣಿ ಮತ್ತು ನಂತರದ ನಗರಗಳಲ್ಲಿ ಬಳಕೆಯನ್ನು ಹೆಚ್ಚಿಸಲು ನೆರವಾಗುತ್ತವೆ.

1,15,000 ಉದ್ಯೋಗ

1,15,000 ಉದ್ಯೋಗ

ಫ್ಲಿಪ್‌ಕಾರ್ಟ್ ಇಲ್ಲಿವರೆಗೆ ದೇಶಾದ್ಯಂತ ಕಟ್ಟ ಕಡೆಯ ಗ್ರಾಹಕನಿಗೂ ಉತ್ಪನ್ನಗಳನ್ನು ತಲುಪಿಸುವ ನಿಟ್ಟಿನಲ್ಲಿ ಒಂದು ಲಕ್ಷಕ್ಕೂ ಅಧಿಕ ಕಿರಾಣಗಳನ್ನು ತನ್ನ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಂಡಿದೆ. ಇದರ ಪರಿಣಾಮ ಫ್ಲಿಪ್‌ಕಾರ್ಟ್‌ನ ಪೂರೈಕೆ ಜಾಲ ದೇಶಾದ್ಯಂತ ವಿಸ್ತರಣೆಯಾಗಿದೆ. ಹರ್ಯಾಣ, ಮಹಾರಾಷ್ಟ್ರ, ಕರ್ನಾಟಕ, ಗುಜರಾತ್ ಮತ್ತು ಇತರೆ ಪ್ರದೇಶಗಳಲ್ಲಿ ಹೊಸ ದಾಸ್ತಾನು ಕೇಂದ್ರಗಳನ್ನು ಆರಂಭಿಸಲಾಗಿದೆ. ಇವುಗಳಿಂದಾಗಿ ಲಕ್ಷಾಂತರ ಕಾಲೋಚಿತ ಉದ್ಯೋಗಾವಕಾಶಗಳು ಲಭಿಸಿವೆ. ಅಂದರೆ, ವಿಂಗಡಣೆಗಾರರು, ಪಿಕ್ಕರ್ಸ್, ಪ್ಯಾಕರ್ಸ್ ಮತ್ತು ವಿತರಣೆ ಪ್ರತಿನಿಧಿಗಳ ಉದ್ಯೋಗಗಳು ಲಭಿಸಿವೆ. ಈ ಬಾರಿಯ ಹಬ್ಬದ ಸೀಸನ್‌ನಲ್ಲಿ ಫ್ಲಿಪ್‌ಕಾರ್ಟ್ 1,15,000 ಉದ್ಯೋಗಗಳನ್ನು ಸೇರ್ಪಡೆ ಮಾಡಿದೆ. ಉದ್ಯೋಗಗಳ ಸಂಖ್ಯೆ 2019 ರಲ್ಲಿ 50,000 ಮತ್ತು 2020 ರಲ್ಲಿ 70,000 ಇತ್ತು.

ಈ ವರ್ಷದ ಟಿಬಿಬಿಡಿ ಎಂಟನೇ ಆವೃತ್ತಿಯಾಗಿದೆ. ಈ ಎಂಟು ವರ್ಷಗಳ ಇತಿಹಾಸದಲ್ಲಿ ಫ್ಲಿಪ್‌ಕಾರ್ಟ್‌ಗೆ ಶೇ 40ರಷ್ಟು ಪ್ರಗತಿ ಆ್ಯಪ್ 11 ಭಾರತೀಯ ಭಾಷೆಗಳಲ್ಲಿ ಲಭ್ಯವಿದ್ದು, ದೇಶಾದ್ಯಂತ ಇರುವ ಗ್ರಾಹಕರು ತಡೆರಹಿತವಾದ ಇ-ಕಾಮರ್ಸ್ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಇದಲ್ಲದೇ, ಹೆಚ್ಚಿನ ಸರಕುಗಳ ಸಾಗಣೆಗೆ ವಿದ್ಯುತ್ ಚಾಲಿತ ವಾಹನಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸುಸ್ಥಿರ ಪ್ಯಾಕೇಜಿಂಗ್ ಅನ್ನು ನೀಡುತ್ತದೆ.

English summary
Flipkar said it saw a 40 per cent growth in early access for Flipkart Plus customers as compared to last year, as commerce platform kicked off 8th edition of The Big Billion Days festive sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X