ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಮತ್ತೆ ಬದಲು!

ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ .ಕಾಂ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮತ್ತೊಮ್ಮೆ ಬದಲಿಸಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 09: ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ .ಕಾಂ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಮತ್ತೊಮ್ಮೆ ಬದಲಿಸಲಾಗಿದೆ.

ಕಳೆದ ವರ್ಷ ಇದೇ ವೇಳೆಗೆ ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಕೆಳಗಿಳಿದು, ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಿಇಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ ಬಿನ್ನಿ ಬನ್ಸಾಲ್ ಸ್ಥಾನಕ್ಕೆ ಕಲ್ಯಾಣ್ ಕೃಷ್ಣಮೂರ್ತಿ ಅವರನ್ನು ನೇಮಿಸಲಾಗಿದೆ.

ಟೈಗರ್ ಗ್ಲೋಬಲ್ ಮ್ಯಾನೇಜ್ಮೆಂಟ್ ಸಂಸ್ಥೆಯ ಅಧಿಕಾರಿಯಾಗಿದ್ದ ಕಲ್ಯಾಣ್ ಅವರು 2016ರ ಜೂನ್ ತಿಂಗಳಿನಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆ ಸೇರಿದ್ದು, ಈಗ ಹೊಸ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ.

Flipkart Kalyan Krishnamurthy replaces Binny Bansal as CEO

ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಹೊಸ ಗ್ರೂಪ್ ಸಿಇಒ ಆಗಲಿದ್ದಾರೆ.ಸಚಿನ್ ಬನ್ಸಾಲ್ ಅವರು ಸಂಸ್ಥೆಯ ಕಾರ್ಯಕಾರಿ ಚೇರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿನ್ನಿ ಬನ್ಸಾಲ್ ಅವರು ಕಾಮರ್ಸ್, ಇಕಾರ್ಟ್(ಈ ಹಿಂದಿನ ಫ್ಲಿಪ್ ಕಾರ್ಟ್ ಲಾಜಿಸ್ಟಿಕ್ಸ್) ಹಾಗೂ ಮಿಂಟ್ರಾ(ಫ್ಯಾಷನ್ ಪೋರ್ಟಲ್) ಹೊಣೆ ಕೂಡಾ ಹೊತ್ತಿದ್ದಾರೆ.

ಸ್ಮಾರ್ಟ್ ಫೋನ್, ಫ್ಯಾಷನ್ ಸೇರಿದಂತೆ ಆನ್ ಲೈನ್ ಶಾಪಿಂಗ್, ಎಂ ಕಾಮರ್ಸ್ ಮಾರುಕಟ್ಟೆಯಲ್ಲಿ ಫ್ಲಿಪ್ ಕಾರ್ಟ್ ಶೇ 60ರಷ್ಟು ಪಾಲು ಹೊಂದಿದೆ. 2007ರಲ್ಲಿ ಆರಂಭವಾದ ಬೆಂಗಳೂರು ಮೂಲದ ಕಂಪನಿ ಯುನೈಟೆಡ್ ಸ್ಟೇಟ್ಸ್ ನಲ್ಲಿ ಅತಿದೊಡ್ಡ ಐಪಿಒ ಬಿಡುಗಡೆ ಮಾಡಿದೆ.

ಫ್ಯಾಷನ್ ಇ-ರೀಟೈಲ್ ಸಂಸ್ಥೆ ಮಿಂಟ್ರಾ.ಕಾಂ ಹಾದಿಯಲ್ಲೇ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಕೂಡಾ ಸಾಗಿ, ವೆಬ್ ಸೈಟ್ ಮೂಲಕ ವ್ಯವಹಾರ ನಿಲ್ಲಿಸಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಮೂಲಕ ಶಾಪಿಂಗ್ ಗೆ ಅವಕಾಶ ನೀಡಿತ್ತು. ಇ ಕಾಮರ್ಸ್ ನಂತೆ ಮೊಬೈಲ್ ಕಾಮರ್ಸ್ ಕೂಡಾ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಹೆಚ್ಚಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಫೋನ್ ಮೂಲಕವೇ ವ್ಯವಹಾರ ನಡೆಸಲು ನಿರ್ಧರಿಸಲಾಗಿದೆ ಎಂದು ಫ್ಲಿಪ್ ಕಾರ್ಟ್ ಸಂಸ್ಥೆ ವಕ್ತಾರರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
Bengaluru: Flipkart has elevated former Tiger Global Management executive Kalyan Krishnamurthy as the new chief executive replacing co-founder Binny Bansal, who has been named as the group chief executive of India’s largest online marketplace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X