ಫ್ಲಿಪ್‌ಕಾರ್ಟ್‌ನಿಂದ ಕರ್ನಾಟಕಕ್ಕೆ ಐಸಿಯು ವೆಂಟಿಲೇಟರ್‌ಗಳ ದೇಣಿಗೆ

ಬೆಂಗಳೂರು, ಜೂನ್ 28: ಕೋವಿಡ್-19 ನಿರ್ಮೂಲನೆಗೆ ಜಾರಿಯಲ್ಲಿರುವ ಪ್ರಯತ್ನಗಳಿಗೆ ನೆರವಾಗುವ ಭಾಗವಾಗಿ ಮತ್ತು ಪರಿಹಾರ ಪ್ರಯತ್ನಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತದ ದೇಶಿ ಇ-ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್ ಕಾರ್ಟ್ ಇಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ಕಾರ್ಪೊರೇಷನ್ ಲಿಮಿಟೆಡ್ (ಕೆಎಸ್ಎಂಎಸ್ ಸಿಎಲ್)ಗೆ 30 ಜೀವ ರಕ್ಷಕ ಐಸಿಯು ವೆಂಟಿಲೇಟರ್ ಗಳನ್ನು ದೇಣಿಗೆಯಾಗಿ ನೀಡಿದೆ.

ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಯನ್ನು ನೀಡಲು ಮತ್ತು ಸಕಾಲದಲ್ಲಿ ನಿರ್ಣಾಯಕ ಚಿಕಿತ್ಸೆಯನ್ನು ನೀಡುವ ರಾಜ್ಯ ಸರ್ಕಾರಗಳ ಪ್ರಯತ್ನಗಳಿಗೆ ಬೆಂಬಲವಾಗಿ ನಿಲ್ಲುವ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಈ ಐಸಿಯು ವೆಂಟಿಲೇಟರ್ ಗಳನ್ನು ಕೊಡುಗೆಯಾಗಿ ನೀಡಿದೆ. ಇದಲ್ಲದೇ, ಕೋವಿಡ್-19 ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಬಲ ತುಂಬಲೆಂದು ಫ್ಲಿಪ್ ಕಾರ್ಟ್ 250 ಮಲ್ಟಿಪ್ಯಾರಾ ಮಾನಿಟರ್‌ಗಳನ್ನೂ ಸಹ ಕರ್ನಾಟಕ ಸರ್ಕಾರಕ್ಕೆ ಪೂರೈಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ನಡೆದ ಸಮಾರಂಭದಲ್ಲಿ ಈ ವೈದ್ಯಕೀಯ ವೆಂಟಿಲೇಟರ್ ಗಳನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿದ್ದರು.

Flipkart donates ICU Ventilators to the state of Karnataka

ಫ್ಲಿಪ್‌ಕಾರ್ಟ್‌ನ ಈ ನೆರವಿನ ಬಗ್ಗೆ ಮಾತನಾಡಿದ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,''ಕೋವಿಡ್-19 ರ ಎರಡನೇ ಅಲೆಯ ವೇಳೆ ಸೋಂಕು ಹರಡದಂತೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ವಿಚಕ್ಷಣ ಮತ್ತು ಕಂಟೇನ್ಮೆಂಟ್ ಕ್ರಮಗಳನ್ನು ಕೈಗೊಂಡಿದೆ. ಆದಾಗ್ಯೂ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯವನ್ನು ಸೂಕ್ತವಾದ ರೀತಿಯಲ್ಲಿ ಬೆಂಬಲಿಸುವುದು ಮತ್ತು ನವೀಕರಿಸುವುದು ಈ ಸಂದರ್ಭದಲ್ಲಿ ಸೂಕ್ತವಾಗಿದೆ. ಸಮುದಾಯಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೋವಿಡ್-19 ರ ವಿರುದ್ಧದ ಹೋರಾಟ ಮತ್ತು ಕರ್ನಾಟಕದಲ್ಲಿ ಕೈಗೊಂಡಿರುವ ಹಲವಾರು ಪ್ರಯತ್ನಗಳಿಗೆ ಬೆಂಬಲವಾಗಿ ಫ್ಲಿಪ್‌ಕಾರ್ಟ್‌ ನಿಂತಿರುವ ಕ್ರಮವನ್ನು ನಾನು ಪ್ರಶಂಸಿಸುತ್ತೇನೆ. ಫ್ಲಿಪ್‌ಕಾರ್ಟ್‌ 30 ಐಸಿಯು ವೆಂಟಿಲೇಟರ್‌ಗಳು ಮತ್ತು 250 ಐಸಿಯು ಮಲ್ಟಿಪ್ಯಾರಾ ಮಾನಿಟರ್‌ಗಳನ್ನು ನೀಡಿರುವುದು ನಾವು ಕೋವಿಡ್-19 ರ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ," ಎಂದು ಅಭಿಪ್ರಾಯಪಟ್ಟರು.

ಫ್ಲಿಪ್ ಕಾರ್ಟ್ ನ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ, ''ಪ್ರಸ್ತುತ ತಲೆದೋರಿರುವ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸುತ್ತಿರುವ ವಿವಿಧ ರಾಜ್ಯ ಸರ್ಕಾರಗಳಿಗೆ ಬೆಂಬಲ ನೀಡುವುದು ಮತ್ತು ಕೋವಿಡ್ ಪರಿಹಾರ ಕ್ರಮಗಳಿಗೆ ಸಂಪನ್ಮೂಲಗಳನ್ನು ಒದಗಿಸುವ ನಿಟ್ಟಿನಲ್ಲಿ ಫ್ಲಿಪ್ ಕಾರ್ಟ್ ಮತ್ತು ಅದರ ತಂಡವು ಬದ್ಧವಾಗಿದೆ ಮತ್ತು ಈ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ. ಈ ಸವಾಲಿನ ಸಂದರ್ಭದಲ್ಲಿ ದೇಶ ಮತ್ತು ಸಮುದಾಯಕ್ಕೆ ಸಹಾಯ ಮಾಡಲು ಫ್ಲಿಪ್ ಕಾರ್ಟ್ ಹಲವಾರು ಪ್ರಯತ್ನಗಳನ್ನು ನಡೆಸುತ್ತಿದೆ. ಇದಕ್ಕಾಗಿ ನಮ್ಮ ಲಾಜಿಸ್ಟಿಕ್ ಸಾಮರ್ಥ್ಯಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಆರೋಗ್ಯ ವೃತ್ತಿಪರರ ಅತ್ಯಂತ ನಿರ್ಣಾಯಕ ಅಗತ್ಯತೆಗಳ ಕಡೆಗೆ ಸಂಪನ್ಮೂಲಗಳನ್ನು ಸಜ್ಜುಗೊಳಿಸುತ್ತದೆ. ಈ ಮೂಲಕ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ಸೇವೆಗಳನ್ನು ಒದಗಿಸಲು ಬದ್ಧವಾಗಿದೆ. ಸೂಕ್ತವಾದ ವೈದ್ಯಕೀಯ ಆರೈಕೆ ಉಪಕರಣಗಳು ಲಭ್ಯವಾಗುವಂತೆ ನಾವು ವಿವಿಧ ಪಾಲುದಾರರು ಮತ್ತು ರಾಜ್ಯ ಸರ್ಕಾರಗಳೊಂದಿಗೆ ನಿಕಟವಾದ ಸಹಯೋಗವನ್ನು ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇವೆ. ಈ ಐಸಿಯು ವೆಂಟಿಲೇಟರ್ ಗಳು ಮತ್ತು ಪ್ಯಾರಾ ಮಾನಿಟರ್ ಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲು ಪೂರಕವಾಗಿವೆ ಎಂದು ನಾವು ಭಾವಿಸುತ್ತೇವೆ," ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+