ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಫೆಸ್ಟಿವಲ್ ಸೀಸನ್: ಫ್ಲಿಪ್ ಕಾರ್ಟ್ ಭರ್ಜರಿ ವ್ಯಾಪಾರ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ದಸರಾ ಹಬ್ಬದ ಹಿನ್ನೆಲೆಯಲ್ಲಿ ಖ್ಯಾತ ಆನ್ ಲೈನ್ ಮಾರಾಟ ಸಂಸ್ಥೆಗಳಾದ ಅಮೆಜಾನ್ ಹಾಗೂ ಫ್ಲಿಪ್ ಕಾರ್ಟ್ ಪೈಪೋಟಿಯ ಮೇಲೆ ಭಾರೀ ರಿಯಾಯಿತಿಯುಳ್ಳ ಭರ್ಜರಿ ಮಾರಾಟ ನಡೆಸಿದ್ದವು. ಅಮೆಜಾನ್, ಫ್ಲಿಪ್ ಕಾರ್ಟ್ ಸೇರಿ ಇತರ ಆನ್ ಲೈನ್ ಮಾರುಕಟ್ಟೆ ಕಂಪನಿಗಳೂ ಡಿಸ್ಕೌಂಟ್ ಸೇಲ್ ಆರಂಭಿಸಿದ್ದವು.

ಇದೀಗ, ಆ ಮಾರಾಟದ ಭರಾಟೆಯ ಫಲಿತಾಂಶ ಹೊರಬಿದ್ದಿದ್ದು, ಈ ಫೆಸ್ಟಿವಲ್ ಸೇಲ್ ಪೈಪೋಟಿಯಲ್ಲಿ ಫ್ಲಿಪ್ ಕಾರ್ಟ್ ಸಂಸ್ಥೆಯೇ ಮಂಚೂಣಿಯಲ್ಲಿದ್ದಿದ್ದು ತಿಳಿದುಬಂದಿದೆ.

ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇ ಆಫರ್ ಗಳ ಸುರಿಮಳೆಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಬಿಲಿಯನ್ ಡೇ ಆಫರ್ ಗಳ ಸುರಿಮಳೆ

ಈ ಬಾರಿಯ ಡಿಸ್ಕೌಂಟ್ ಸೇಲ್ ನಲ್ಲಿ ಅಮೆರಿಕದ ಮೂಲದ ಅಮೆಜಾನ್ ಆನ್ ಲೈನ್ ಜಾಲತಾಣದ ಭಾರೀ ಪೈಪೋಟಿಯ ನಡುವೆಯೂ ಫ್ಲಿಪ್ ಕಾರ್ಟ್ ಕಂಪನಿಯು ತನ್ನ ಬಿಗ್ ಬಿಲಿಯನ್ ಡೇ ಆಫರ್ ಮೂಲಕ ಭಾರತೀಯ ಆನ್ ಲೈನ್ ಮಾರಾಟ ಕ್ಷೇತ್ರದಲ್ಲಿ ಶೇ. 70ರಷ್ಟು ಪ್ರಭುತ್ವ ಸಾಧಿಸಿದೆ.

ಈ ಬಗ್ಗೆ ಅಧ್ಯಯನ ನಡೆಸಿರುವ ರೆಡ್ ಸೀರ್ ಎಂಬ ಸಂಸ್ಥೆ ಈ ಬಗ್ಗೆ ವರದಿಯನ್ನು ತಯಾರಿಸಿದೆ.

ಜನ ಮರುಳೋ, ಆನ್ ಲೈನ್ 'ಜಾತ್ರೆ' ಮರುಳೋ!

ಜನ ಮರುಳೋ, ಆನ್ ಲೈನ್ 'ಜಾತ್ರೆ' ಮರುಳೋ!

ರೆಡ್ ಸೀರ್ ಸಂಸ್ಥೆಯ ಅಧ್ಯಯನದ ಪ್ರಕಾರ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ದಸರಾ ಫೆಸ್ಟಿವರ್ ಆಫರ್ ಸೇಲ್, ಶೇ. 35ರಷ್ಟು ಹೆಚ್ಚಾಗಿದೆ. ಭಾರತೀಯ ಗ್ರಾಹಕರು ಹೆಚ್ಚು ಈ ಬಾರಿ ಆನ್ ಲೈನ್ ಮಾರಾಟ ಮೋಡಿಗೆ ಒಳಗಾಗಿದ್ದಾರೆ.

8,5000 ಕೋಟಿ ರು. ವಹಿವಾಟು

8,5000 ಕೋಟಿ ರು. ವಹಿವಾಟು

ಭಾರತದಲ್ಲಿನ ಆನ್ ಲೈನ್ ಮಾರುಕಟ್ಟೆಯಲ್ಲಿ ಈ ಬಾರಿಯ ದಸರಾ ಆಫರ್ ವೇಳೆ, ಪೈಪೋಟಿಯಲ್ಲಿರುವ ಎಲ್ಲಾ ಕಂಪನಿಗಳಿಂದ ಸುಮಾರು 10 ಸಾವಿರ ಕೋಟಿ ರು. ವಹಿವಾಟು ನಡೆಯಬಹುದೆಂದು ಅಂದಾಜಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟಕ್ಕೆ ವಹಿವಾಟು ನಡೆದಿಲ್ಲವಾದರೂ, ಸುಮಾರು 8,500 ಕೋಟಿ ರು. ವಹಿವಾಟು ನಡೆದಿದೆ ಎನ್ನಲಾಗಿದೆ.

ಎಲೆಕ್ಟ್ರಾನಿಕ್ಸ್, ಸ್ಮಾರ್ಟ್ ಫೋನ್ ಗಳೇ ಪ್ರಧಾನ

ಎಲೆಕ್ಟ್ರಾನಿಕ್ಸ್, ಸ್ಮಾರ್ಟ್ ಫೋನ್ ಗಳೇ ಪ್ರಧಾನ

ದಸರಾ ಫೆಸ್ಟಿವಲ್ ಸೀಸನ್ ನಲ್ಲಿ ಒಟ್ಟಾರೆ ವಹಿವಾಟು ನಿರೀಕ್ಷಿತ ಮಟ್ಟ ಮುಟ್ಟಿಲ್ಲವಾದರೂ, ಫ್ಲಿಪ್ ಕಾರ್ಟ್ ಕಂಪನಿ ಮಾತ್ರ ತನ್ನ ಗುರಿಯನ್ನು ಮುಟ್ಟಿದೆಯಂತೆ. ತಾನಂದುಕೊಂಡಿದ್ದಂತೆ 1 ಬಿಲಿಯನ್ ಡಾಲರ್ ಮೊತ್ತದ ವಹಿವಾಟನ್ನು ಅದು ಸಾಧಿಸಿದೆ ಎಂದಿದೆ ವರದಿ. ಫ್ಲಿಪ್ ಕಾರ್ಟ್ ಗೆ ಭಾರೀ ಯಶಸ್ಸು ತಂದುಕೊಟ್ಟಿರುವ ಐಟಂಗಳಲ್ಲಿ ಎಲೆಕ್ಟ್ರಾನಿಕ್ಸ್ ಐಟಂಗಳು, ಸ್ಮಾರ್ಟ್ ಫೋನ್ ಗಳು ಪ್ರಮುಖವಾದವು.

12 ಪಟ್ಟು ಹೆಚ್ಚು ವ್ಯವಹಾರ ದಾಖಲಿಸಿದ ಪೇಟಿಎಂ

12 ಪಟ್ಟು ಹೆಚ್ಚು ವ್ಯವಹಾರ ದಾಖಲಿಸಿದ ಪೇಟಿಎಂ

ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಗಳಿಗೆ ಪ್ರಬಲ ಪೈಪೋಟಿಯೊಡ್ಡಿರುವ ಪೇಟಿಎಂ ಮಾಲ್ ಸೇವೆಯಲ್ಲೂ ತನ್ನ ಹಿಂದಿನ ವ್ಯವಹಾರಕ್ಕಿಂತ 12 ಪಟ್ಟು ಹೆಚ್ಚಿನ ವಹಿವಾಟು ನಡೆಸಿದೆ ಎಂದು ಹೇಳಲಾಗಿದೆ.

English summary
Flipkart has claimed it was miles ahead of Amazon during the five-day festive sales, called the Big Billion Day, which ended during the midnight of September 24.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X