ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು!

Posted By:
Subscribe to Oneindia Kannada

ಬೆಂಗಳೂರು, ಜ. 11: ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ .ಕಾಂ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬದಲಿಸಲಾಗಿದೆ ಎಂದು ಸೋಮವಾರ ಪ್ರಕಟಿಸಲಾಗಿದೆ. ಸಿಇಒ ಸ್ಥಾನದಿಂದ ಸಚಿನ್ ಬನ್ಸಾಲ್ ಕೆಳಗಿಳಿದಿದ್ದು ಸಹ ಸ್ಥಾಪಕ ಬಿನ್ನಿ ಬನ್ಸಾಲ್ ಅವರು ಸಿಇಒ ಆಗಿ ತಕ್ಷಣದಿಂದ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಸಂಸ್ಥೆಯ ಬ್ಲಾಗಿನಲ್ಲಿ ಹೇಳಲಾಗಿದೆ.

ಸಚಿನ್ ಬನ್ಸಾಲ್ ಅವರು ಸಂಸ್ಥೆಯ ಕಾರ್ಯಕಾರಿ ಚೇರ್ಮನ್ ಆಗಿ ಇನ್ಮುಂದೆ ಕಾರ್ಯನಿರ್ವಹಿಸಲಿದ್ದಾರೆ. ಬಿನ್ನಿ ಬನ್ಸಾಲ್ ಅವರು ಕಾಮರ್ಸ್, ಇಕಾರ್ಟ್(ಈ ಹಿಂದಿನ ಫ್ಲಿಪ್ ಕಾರ್ಟ್ ಲಾಜಿಸ್ಟಿಕ್ಸ್) ಹಾಗೂ ಮಿಂಟ್ರಾ(ಫ್ಯಾಷನ್ ಪೋರ್ಟಲ್) ಹೊಣೆ ಹೊತ್ತಿದ್ದಾರೆ.[ಫ್ಲಿಪ್ ಕಾರ್ಟಿಗೆ ಉಂಡೆನಾಮ ತಿಕ್ಕಿದ ಐನಾತಿ ಗ್ರಾಹಕ]

Binny Bansal replaces Sachin Bansal as new CEO

ಮುಖೇಶ್ ಬನ್ಸಾಲ್ ಅವರು ಮಿಂಟ್ರಾ.ಕಾಂನ ಚೇರ್ಮನ್ ಆಗಿ ಮುಂದುವರೆಯಲಿದ್ದಾರೆ. ಮಿಂಟ್ರಾ.ಕಾಂನ ಸಿಇಒ ಅನಂತ್ ನಾರಾಯಣ್ ಅವರು ಇನ್ಮುಂದೆ ಬಿನ್ನಿ ಬನ್ಸಾಲ್ ಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ ಎಂದು ಸಚಿನ್ ಬನ್ಸಾಲ್ ಅವರು ತಿಳಿಸಿದ್ದಾರೆ.

ಸ್ಮಾರ್ಟ್ ಫೋನ್, ಫ್ಯಾಷನ್ ಸೇರಿದಂತೆ ಆನ್ ಲೈನ್ ಶಾಪಿಂಗ್, ಎಂ ಕಾಮರ್ಸ್ ಮಾರುಕಟ್ಟೆಯಲ್ಲಿ ಫ್ಲಿಪ್ ಕಾರ್ಟ್ ಶೇ 60ರಷ್ಟು ಪಾಲು ಹೊಂದಿದೆ. 2007ರಲ್ಲಿ ಆರಂಭವಾದ ಬೆಂಗಳೂರು ಮೂಲದ ಕಂಪನಿ ಈಗ ಯುನೈಟೆಡ್ ಸ್ಟೇಟ್ಸ್ ನಲ್ಲಿ ಅತಿದೊಡ್ಡ ಐಪಿಒ ಬಿಡುಗಡೆ ಮಾಡುವ ತಯಾರಿಯಲ್ಲಿದೆ.[ಮಿಂಟ್ರಾ ಹಾದಿ ತುಳಿದ ಫ್ಲಿಪ್ ಕಾರ್ಟ್, 'ನೋ ವೆಬ್ ಸರ್ವೀಸ್']

ಫ್ಯಾಷನ್ ಇ-ರೀಟೈಲ್ ಸಂಸ್ಥೆ ಮಿಂಟ್ರಾ.ಕಾಂ ಹಾದಿಯಲ್ಲೇ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್ ಕೂಡಾ ಸಾಗಿ, ವೆಬ್ ಸೈಟ್ ಮೂಲಕ ವ್ಯವಹಾರ ನಿಲ್ಲಿಸಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಮೂಲಕ ಶಾಪಿಂಗ್ ಗೆ ಅವಕಾಶ ನೀಡಿತ್ತು. ಇ ಕಾಮರ್ಸ್ ನಂತೆ ಮೊಬೈಲ್ ಕಾಮರ್ಸ್ ಕೂಡಾ ಬೆಳವಣಿಗೆ ಕಾಣುತ್ತಿದೆ. ಭಾರತದಲ್ಲಿ ಸ್ಮಾರ್ಟ್ ಫೋನ್ ಬಳಕೆದಾರರು ಹೆಚ್ಚಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್ ಫೋನ್ ಮೂಲಕವೇ ವ್ಯವಹಾರ ನಡೆಸಲು ನಿರ್ಧರಿಸಲಾಗಿದೆ ಎಂದು ಫ್ಲಿಪ್ ಕಾರ್ಟ್ ಸಂಸ್ಥೆ ವಕ್ತಾರರು ಹೇಳಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian e-commerce giant Flipkart on Monday announced that co-founder Binny Bansal will replace Sachin Bansal as the chief executive of the company. Sachin Bansal, also the co-founder of the company, stepped down from the post.who will take on the role of executive chairman with immediate effect.
Please Wait while comments are loading...