• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಲಾಸ್ಟಿಕ್ ಬಳಕೆ ನಿರ್ಮೂಲನೆಯತ್ತ ಫ್ಲಿಪ್‍ಕಾರ್ಟ್ ದಾಪುಗಾಲು

|

ಬೆಂಗಳೂರು,ಆಗಸ್ಟ್ 29: ಭಾರತದ ಅತಿದೊಡ್ಡ ಇ-ಕಾಮಸ್ ಮಾರ್ಕೆಟ್‍ಪ್ಲೇಸ್ ಆಗಿರುವ ಫ್ಲಿಪ್‍ಕಾರ್ಟ್ 2019 ರ ಆಗಸ್ಟ್ 1 ರ ವೇಳೆಗೆ ವಿವಿಧ ಪ್ಯಾಕೇಜಿಂಗ್ ಪ್ರಕ್ರಿಯೆಗಳಲ್ಲಿ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಪ್ರಮಾಣವನ್ನು ಶೇ.25 ರಷ್ಟು ಕಡಿಮೆ ಮಾಡಿದೆ ಎಂದು ಇಂದು ಘೋಷಿಸಿದೆ.

ಪರಿಸರ ರಕ್ಷಣೆಗೆ ಆದ್ಯತೆ ನೀಡುತ್ತಿರುವ ಕಂಪನಿಯು 2021 ರ ಮಾರ್ಚ್ ವೇಳೆಗೆ ಪ್ಯಾಕೇಜಿಂಗ್‍ನಲ್ಲಿ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಪ್ರತಿಶತಃದಷ್ಟು ಪುನರ್‍ಬಳಕೆಯ ಪ್ಲಾಸ್ಟಿಕ್ ಬಳಸಲಾರಂಭಿಸಲಿದೆ ಎಂದೂ ವಾಗ್ದಾನ ಮಾಡಿದೆ. ತನ್ನ ದೀರ್ಘಾವಧಿಯ ಸುಸ್ಥಿತ ಉಪಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಫ್ಲಿಪ್‍ಕಾರ್ಟ್, ಇಕೋ-ಫ್ರೆಂಡ್ಲಿ ಪೇಪರ್ ಶ್ರೇಡ್ಸ್, ಮರುಬಳಕೆಯ ಕಾಗದದ ಚೀಲಗಳನ್ನು ಪರಿಚಯಿಸುವ ಮೂಲಕ ಪಾಲಿ ಪೌಚ್‍ಗಳನ್ನು ಬದಲಿಸುವುದ, ಬಬಲ್ ರ್ಯಾಪ್‍ಗಳನ್ನು ಬದಲಿಸುವುದು, ಕಾರ್ಟನ್ ವೇಸ್ಟ್ ಶ್ರೆಡ್ಡೆಡ್ ಮಟೀರಿಯಲ್‍ನಿಂದ ಏರ್‍ಬ್ಯಾಗ್‍ಗಳನ್ನು ಬದಲಿಸುವುದು ಮತ್ತು ಇನ್ನೂ ಹಲವಾರು ಉಪಕ್ರಮಗಳನ್ನು ಜಾರಿಗೆ ತರಲು ಫ್ಲಿಪ್‍ಕಾರ್ಟ್ ನಿರ್ಧರಿಸಿದೆ.

ಮೋದಿ ಸ್ಕಿಲ್ ಇಂಡಿಯಾ: 20 ಸಾವಿರ ಸಿಬ್ಬಂದಿಗೆ ಫ್ಲಿಪ್ ಕಾರ್ಟ್ ಟ್ರೈನಿಂಗ್

ಈ ನಿರ್ಧಾರದಿದ ದಶಲಕ್ಷದಷ್ಟು ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಭೂಮಿಯೊಳಗೆ ಸೇರುವುದನ್ನು ತಪ್ಪಿಸಲು ನೆರವಾಗಲಿವೆ. ಈ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ಬಗೆ ಹೇಗೆಂಬ ನಿಟ್ಟಿನಲ್ಲಿ ಫ್ಲಿಪ್‍ಕಾರ್ಟ್ ಪರಿಸರ ಸ್ನೇಹಿ ಉಪಕ್ರಮಗಳತ್ತ ಗಮನಹರಿಸಿದೆ. ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯಕ್ರಮದಡಿ ಎರಡನೇ ಹಂತದಲ್ಲಿ ಫ್ಲಿಪ್‍ಕಾರ್ಟ್ ತನ್ನ ಸಾವಿರಾರು ಮಾರಾಟಗಾರರೂ ಉತ್ಪನ್ನಗಳ ಪ್ಯಾಕೇಜಿಂಗ್‍ನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಕಾರ್ಯವನ್ನು ವಿಸ್ತರಣೆ ಮಾಡಲಿದೆ.

ಮುಂದಿನ ಒಂದು ವರ್ಷದೊಳಗೆ ಗ್ರಾಹಕರು ಪ್ಲಾಸ್ಟಿಕ್ ಬಳಕೆ ಪ್ರಮಾಣವನ್ನು ಕಡಿಮೆ ಮಾಡಿರುವುದನ್ನು ಗಮನಿಸಬಹುದು. ಇದರಲ್ಲಿ ಪ್ರಮುಖವಾಗಿ ಬ್ರ್ಯಾಂಡ್‍ಗಳಿಂದಲೇ ಇ-ಕಾಮ್ ಪ್ಯಾಕೇಜಿಂಗ್ ಆಗುವುದು ಮತ್ತು ಪ್ಯಾಕೇಜಿಂಗ್‍ಗೆ ಹೆಚ್ಚು ಮರುಬಳಕೆಯ ಪೇಪರ್ ಬ್ಯಾಗ್‍ಗಳನ್ನು ಬಳಸುವುದನ್ನು ಕಾಣಬಹುದು.

2021 ರ ಮಾರ್ಚ್ ವೇಳೆಗೆ ಪ್ಯಾಕೇಜಿಂಗ್ ಮತ್ತಿತರೆ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಫ್ಲಿಪ್‍ಕಾರ್ಟ್‍ನ ಬದ್ಧತೆಯಲ್ಲಿ ಈಗಾಗಲೇ ಶೇ.25 ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಒಂದು ಬಾರಿ ಬಳಕೆ ಮಾಡಿ ಎಸೆದು ಪರಿಸರಕ್ಕೆ ಧಕ್ಕೆ ತರುವಂತಹ ಪ್ಲಾಸ್ಟಿಕ್‍ಗೆ ಬದಲಾಗಿ ಫ್ಲಿಪ್‍ಕಾರ್ಟ್ ಪರಿಸರ ಸ್ನೇಹಿ ಪರ್ಯಾಯಗಳು ಮತ್ತು ಮರುಬಳಕೆಯ ಪ್ಲಾಸ್ಟಿಕ್‍ಗಳನ್ನು ಬಳಸಲಾರಂಭಿಸಿದೆ.

ಬೆಂಗಳೂರು : ರೈಲ್ವೆ ನಿಲ್ದಾಣದಲ್ಲಿ ಬಾಟಲ್ ಕ್ರಶರ್ ಅಳವಡಿಕೆ

ಫ್ಲಿಪ್‍ಕಾರ್ಟ್‍ನ ಗ್ರೂಪ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಫ್ಲಿಪ್‍ಕಾರ್ಟ್‍ನಲ್ಲಿ ನಾವು ಸುಸ್ಥಿರ ವ್ಯವಹಾರ ವಿಧಾನಗಳ ಮೇಲೆ ನಂಬಿಕೆ ಇಟ್ಟಿದ್ದೇವೆ. ನಾವು ಕೇವಲ ನಮ್ಮ ಪರಿಸರ ರಕ್ಷಣೆ ಮಾತ್ರವಲ್ಲ, ಇಂತಹ ಉಪಕ್ರಮಗಳ ಮೂಲಕ ನಮ್ಮ ಹೆಚ್ಚು ಸಮರ್ಥ ಮತ್ತು ದೀರ್ಘಕಾಲೀನ ಸೇವೆ ಮಾಡಲು ಸಜ್ಜುಗೊಳಿಸಿಕೊಳ್ಳುವುದಕ್ಕೂ ಆದ್ಯತೆ ನೀಡುತ್ತಿದ್ದೇವೆ. ಸುಸ್ಥಿರ ಪರಿಸರ ಸೃಷ್ಟಿಯ ನಮ್ಮ ಬದ್ಧತೆಯನ್ನು ಪರಿಪೂರ್ಣಗೊಳಿಸುವ ನಿಟ್ಟಿನಲ್ಲಿ ಒಂದು ಬಾರಿ ಬಳಕೆಯ ಪ್ಲಾಸ್ಟಿಕ್ ಅನ್ನು ಪ್ಯಾಕೇಜಿಂಗ್‍ನಲ್ಲಿ ಬಳಸದೇ ಪರ್ಯಾಯ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದೇವೆ. ನಮ್ಮ ದೂರದೃಷ್ಟಿಯೆಂದರೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬಳಸದಿರುವುದು ಮತ್ತು ಗರಿಷ್ಠ ಮಟ್ಟದಲ್ಲಿ ಮರುಬಳಕೆ ಹಾಗೂ ಪುನರ್‍ನವೀಕರಿಸಬಹುದಾದ ಉತ್ಪನ್ನಗಳನ್ನು ಬಳಸುವುದಕ್ಕೆ ನಿರ್ಧರಿಸಿದ್ದೇವೆ" ಎಂದು ತಿಳಿಸಿದರು.

ಫ್ಲಿಪ್‍ಕಾರ್ಟ್‍ನ ಮತ್ತೊಂದು ವಿಶೇಷವೆಂದರೆ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೂ ಪ್ಲಾಸ್ಟಿಕ್ ಬಳಸದಿರುವ ಜಾಗೃತಿ ಮೂಡಿಸಿರುವುದ. ಬೆಂಗಳೂರಿನ ಫ್ಲಿಪ್‍ಕಾರ್ಟ್ ಘಟಕದಲ್ಲಿ 8500 ಕ್ಕೂ ಅಧಿಕ ನೌಕರರಿದ್ದಾರೆ. ಇವರೆಲ್ಲಾ ಊಟವನ್ನು ಪ್ಲಾಸ್ಟಿಕ್ ಡಬ್ಬಿಗಳಲ್ಲಿ ತರುವುದಿಲ್ಲ. ಇದರ ಬದಲಾಗಿ ಸ್ಟೀಲ್ ಕಂಟೇನರ್, ಗ್ಲಾಸ್‍ವೇರ್ ಗಳು ಮತ್ತು ಬಾಟಲಿಗಳನ್ನು ಬಳಸುತ್ತಿದ್ದಾರೆ. ಇದರ ಹೊರತಾಗಿ ಫ್ಲಿಪ್‍ಕಾರ್ಟ್ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸುವ ತೈಲಾಧಾರಿತ ವಾಹನಗಳ ಪ್ರಮಾಣವನ್ನೂ ಕಡಿಮೆ ಮಾಡಿದೆ. ಉತ್ಪನ್ನಗಳ ಪೂರೈಕೆಗಾಗಿ ಫ್ಲಿಪ್‍ಕಾರ್ಟ್ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಆರಂಭಿಸಿದೆ. ಈ ಮೂಲಕ 2020 ರ ಅಂತ್ಯದ ವೇಳೆಗೆ ತೈಲಾಧಾರಿತ ವಾಹನಗಳ ಬಳಕೆ ಪ್ರಮಾಣವನ್ನು ಶೇ.40 ರಷ್ಟು ಕಡಿಮೆ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಇದರಿಂದ ಪರಿಸರ ರಕ್ಷಣೆಯಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ.

English summary
Walmart-owned Flipkart said it has reduced usage of single-use plastic by 25 per cent across packaging value chain and, aims to move towards 100 per cent recycled plastic consumption in its supply chain by March 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X