ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಗಮನಿಸಬೇಕಾದ ಐದು ಅಂಶಗಳು

ನವದೆಹಲಿ, ಸೆ.23: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಅಲ್ಪಪ್ರಮಾಣದಲ್ಲಿ ಮತ್ತೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ಸತತ ಬೆಲೆ, ಏರಿಕೆ ಕಂಡು ಬಂದಿದೆ. ಜಾಗತಿಕವಾಗಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಾಗಲು ಕಾರಣವಾಗಿದೆ. ಈ ಸಂದರ್ಭದಲ್ಲಿ ಗಮನಿಸಬೇಕಾದ ಐದು ಅಂಶಗಳು ಯಾವುವು?

"ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ನಡೆದ ಡ್ರೋನ್ ದಾಳಿಯ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಭೀತಿ ಆವರಿಸಿತ್ತು. ಆದರೆ, ಭಾರತದ ಇಂಧನ ಸುರಕ್ಷತೆಯ ಅಗತ್ಯಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ. ಮಾರುಕಟ್ಟೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಇತರೆ ತೈಲ ಉತ್ಪಾದಕರೊಂದಿಗೆ ರಚನಾತ್ಮಕವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಸೌದಿ ಅರೇಬಿಯಾ ಭರವಸೆ ನೀಡಿದೆ.

ಸೌದಿ ಭರವಸೆಯ ನಡುವೆಯೇ ದೆಹಲಿಯಲ್ಲಿ ಸೋಮವಾರದಂದು ಪೆಟ್ರೋಲ್ ಬೆಲೆ 29 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 19 ಪೈಸೆ ಏರಿಕೆ ಕಂಡಿದೆ. ಒಟ್ಟಾರೆ, ಕಳೆದ ಐದು ದಿನಗಳಿಂದ ಪೆಟ್ರೋಲ್ ಬೆಲೆ ಒಟ್ಟು 49 ಪೈಸೆ ಹಾಗೂ ಡಿಸೇಲ್ ಬೆಲೆ 47 ಪೈಸೆ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಸೋಮವಾರದಂದು 1 ಬ್ಯಾರೆಲ್ ಗೆ 64.01 ಯುಎಸ್ ಡಾಲರ್ ನಷ್ಟಿತ್ತು. ಬೆಂಗಳೂರಿನಲ್ಲಿ ಸೋಮವಾರದಂದು ಪೆಟ್ರೋಲ್ ಬೆಲೆಯಲ್ಲಿ 30 ಪೈಸೆ ಏರಿಕೆ ಕಂಡು 1 ಲೀಟರ್ ಗೆ 76.44 ರು ನಷ್ಟಿದ್ದರೆ, ಡೀಸೆಲ್ ಬೆಲೆಯಲ್ಲಿ 20 ಪೈಸೆ ಏರಿಕೆಯಾಗಿ 1 ಲೀಟರ್ ಗೆ 69.21ರು ನಷ್ಟಿದೆ.

ಪೆಟ್ರೋಲ್, ಡೀಸೆಲ್ ದರ ಏರಿಕೆ

ಪೆಟ್ರೋಲ್, ಡೀಸೆಲ್ ದರ ಏರಿಕೆ

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಮಾಡಿರಲಿಲ್ಲ, ಮೇ 20ರ ನಂತರ ಸತತ ಏರಿಕೆ ಮಾಡಲಾಯಿತು. ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

ಸತತ 7 ದಿನಗಳ ಕಾಲ ಏರಿಕೆ ಕಂಡ ಇಂಧನ ದರ

ಸತತ 7 ದಿನಗಳ ಕಾಲ ಏರಿಕೆ ಕಂಡ ಇಂಧನ ದರ

ಸೆಪ್ಟೆಂಬರ್ 17ರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತಲೇ ಇದೆ. 2017ರಿಂದ ಇಲ್ಲಿ ತನಕ ಸತತ ಏರಿಕೆ ಪ್ರಮಾಣದಲ್ಲಿ ಇದು ಹೊಸ ದಾಖಲೆಯಾಗಿದೆ. ಬಜೆಟ್ ಪೂರ್ವದಲ್ಲಿ ಏರಿಕೆ ಕಂಡಿದ್ದ ಇಂಧನ ದರ ನಂತರ ಇಳಿಕೆಯಾಗಿತ್ತು. ಈಗ ಇಂಧನ ಏರಿಕೆಯಾಗಲು ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯೇ ಕಾರಣವಾಗಿದೆ. ಸೌದಿಯಲ್ಲಿ ದಾಳಿ ನಂತರ ಶೇ 5ರಷ್ಟು ಜಾಗತಿಕ ತೈಲ ಪೂರೈಕೆ ಕುಂಠಿತವಾಗಿದೆ.

ಇರಾನ್ ಹಾಗೂ ಯುಎಸ್ ತಿಕ್ಕಾಟ ಮುಂದುವರಿಕೆ

ಇರಾನ್ ಹಾಗೂ ಯುಎಸ್ ತಿಕ್ಕಾಟ ಮುಂದುವರಿಕೆ

ಇರಾನ್ ಹಾಗೂ ಯುಎಸ್ ನಡುವಿನ ವ್ಯಾಪಾರ, ವಹಿವಾಟ ತಿಕ್ಕಾಟ ಮುಂದುವರಿದಿದೆ. ಯುಎಸ್ ನಿಂದಾಗಿ ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಉಂಟಾಗುತ್ತಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಹೀಗಾಗಿ ಬ್ರೆಂಟ್ ಕಚ್ಚಾ ತೈಲ ಶೇ1.9ರಷ್ಟು ಏರಿಕೆ ಕಂಡಿದೆ. ಕಳೆದ ವಾರ ಶೇ6.7ರಷ್ಟು ಏರಿಕೆಯಾಗಿತ್ತು.

ಇಂಧನ ಏರಿಕೆ ಮುಂದುವರೆಯಲಿದೆ.

ಇಂಧನ ಏರಿಕೆ ಮುಂದುವರೆಯಲಿದೆ.

ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಭಾರತದಲ್ಲಿ ಇಂಧನ ದರ ಏರಿಕೆ ಇನ್ನಷ್ಟು ಕಾಲ ಮುಂದುವರೆಯುವ ಸೂಚನೆ ಸಿಕ್ಕಿದೆ. ಭಾರತದ ತನ್ನ ಇಂಧನ ಬಳಕೆಯ ಶೇ80ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ 15 ದಿನಗಳ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಬೆಲೆಯನ್ನು ನಿರ್ಧರಿಸಲಿವೆ.

ಯುಎಸ್ ಡಾಲರ್ ಹಾಗೂ ರುಪಾಯಿ ವಿನಿಮಯ ದರ

ಯುಎಸ್ ಡಾಲರ್ ಹಾಗೂ ರುಪಾಯಿ ವಿನಿಮಯ ದರ

ಪೆಟ್ರೋಲ್, ಡೀಸೆಲ್ ದರ ನಿಗದಿಯಲ್ಲಿ ಯುಎಸ್ ಡಾಲರ್ ಹಾಗೂ ರುಪಾಯಿ ವಿನಿಮಯ ದರ ಕೂಡಾ ಪ್ರಮುಖ ಪಾತ್ರವಹಿಸಲಿದೆ. ಡಾಲರ್ ದರ ಹೆಚ್ಚಾದರೆ ಭಾರತಕ್ಕೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ. ಗಲ್ಫ್ ರಾಷ್ಟ್ರಗಳಿಂದ ಇಂಧನ ಆಮದು ಮಾಡಿಕೊಳ್ಳಲು ಡಾಲರ್ ಕರೆನ್ಸಿಯನ್ನೇ ಭಾರತ ಬಳಸುತ್ತಿದೆ. ಡಾಲರ್ ಎದುರು ರುಪಾಯಿ ಶುಕ್ರವಾರದಂದು 70.95ರು ನಷ್ಟಿತ್ತು. ಸದ್ಯ 71.98ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+