ತೆರಿಗೆ ಸಂಗ್ರಹ ಇಳಿಕೆ, ವಿತ್ತೀಯ ಕೊರತೆ ಹೆಚ್ಚಳ

ನವದೆಹಲಿ, ಜುಲೈ 1: ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಮೊದಲ ಎರಡು ತಿಂಗಳಲ್ಲಿ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇಕಡಾ 58.6 ಪರ್ಸೆಂಟ್‌ಗೆ ತಲುಪಿದೆ. ಇದರ ಮೌಲ್ಯದ ಲೆಕ್ಕಾಚಾರದಲ್ಲಿ ನೋಡುವುದಾದರೆ 4.66 ಲಕ್ಷ ಕೋಟಿ ರುಪಾಯಿಗೆ ತಲುಪಿದೆ ಎಂದು ಮಹಾಲೇಖಪಾಲರ(ಸಿಎಜಿ) ವರದಿ ಹೇಳಿದೆ.

ಕೊರೊನಾವೈರಸ್ ಲಾಕ್‌ಡೌನ್‌ದಿಂದಾಗಿ ತೆರಿಗೆ ಸಂಗ್ರಹ ಪ್ರಮಾಣದಲ್ಲಿ ಭಾರೀ ಇಳಿಕೆಯಾಗಿದೆ. ಜಿಎಸ್‌ಟಿ ಕೂಡ ದಾಖಲೆಯ ಕುಸಿತವನ್ನು ಕಂಡಿದೆ. ಹೀಗಾಗಿ ವಿತ್ತೀಯ ಕೊರತೆಯು ಅಂದಾಜಿಗಿಂತ ಹೆಚ್ಚಳವಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ (2019-20) ಇದೇ ಅವಧಿಯಲ್ಲಿ ವಿತ್ತೀಯ ಕೊರತೆಯು ಬಜೆಟ್ ಅಂದಾಜಿನ ಶೇಕಡಾ 52 ರಷ್ಟಿತ್ತು. ಆದರೆ ಈ ಬಾರಿ ತೆರಿಗೆಯಲ್ಲಿನ ಆದಾಯ ಇಳಿಕೆಯು ವಿತ್ತೀಯ ಕೊರತೆ ಹೆಚ್ಚಳಕ್ಕೆ ಕಾರಣವಾಗಿದೆ.

Fiscal Deficit Hits 58.6 Percent Of Budget Estimates

2019-20ರಲ್ಲಿ ಏಳು ವರ್ಷಗಳ ಗರಿಷ್ಟ ಮಟ್ಟವಾದ ಶೇಕಡಾ 4.6ಕ್ಕೆ ಏರಿಕೆಯಾಗಿತ್ತು. 2020-21ಕ್ಕೆ ವಿತ್ತೀಯ ಕೊರತೆಯು 13 ಲಕ್ಷ ಕೋಟಿಗಳಷ್ಟಾಗಲಿದೆ (ಶೇಕಡಾ 6.7) ಎಂದು ಐಸಿಆರ್‌ಎ ಅಂದಾಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+