'ಐಟಿ ರಿಟರ್ನ್ಸ್ ಸಲ್ಲಿಕೆ ಕೊನೆ ದಿನಾಂಕ ವಿಸ್ತರಣೆ ಇಲ್ಲ'

Posted By:
Subscribe to Oneindia Kannada

ನವದೆಹಲಿ, ಜುಲೈ 30: ಆದಾಯ ತೆರಿಗೆ ಪಾವತಿಗೆ ಜುಲೈ 31, 2017 ಕೊನೆ ದಿನಾಂಕವಾಗಿದ್ದು, ಐಟೀ ರಿಟರ್ನ್ಸ್ ಕೊನೆ ದಿನಾಂಕ ವಿಸ್ತರಣೆ ಮಾಡುವ ಸಾಧ್ಯತೆಯಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ಭಾನುವಾರದಂದು ಘೋಷಿಸಿವೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?

ಆದರೆ, 2016-17ನೇ ಸಾಲಿನ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿ ಮಾಡುವಲ್ಲಿ ವಿಳಂಬವಾದರೆ ಚಿಂತಿಸಬೇಡಿ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ ಹೊಸ ನೀತಿ ಪ್ರಸಕ್ತ ವರ್ಷಕ್ಕೆ ಅನ್ವಯವಾಗುವುದಿಲ್ಲ. ನಿಗದಿತ ಅವಧಿಯೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಮೊದಲಿಗೆ 5,000 ಹಾಗೂ ನಂತರ 10,000 ರು ದಂಡ ವಿಧಿಸಲಾಗುತ್ತದೆ.

File income-tax returns by July 31, no extension proposed: I-T dept

ಐಟಿ ರಿಟರ್ನ್ಸ್ ಸಲ್ಲಿಕೆಗೂ ಮುನ್ನ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆ ಕಡ್ಡಾಯವಾಗಿದ್ದು, ಇದಕ್ಕೂ ಕೂಡಾ ಜುಲೈ 31 ಕೊನೆ ದಿನಾಂಕವಾಗಿದೆ.

ಈ ಬಾರಿ ಐಟಿ ರಿಟರ್ನ್ಸ್ ಸಲ್ಲಿಕೆ ಸಮಯದಲ್ಲಿ ನಗದು ಪಾವತಿಯ ವಿವರ ಸರಿಯಾಗಿ ನಮೂದಿಸಬೇಕಾಗುತ್ತದೆ. ನವೆಂಬರ್ 9ರಿಂದ ಡಿಸೆಂಬರ್ 30, 2016 ರ ಅವಧಿಯಲ್ಲಿ ಅಂದರೆ, ಅಪನಗದೀಕರಣ ಜಾರಿಗೊಂಡ ಬಳಿಕ 2 ಲಕ್ಷಕ್ಕೂ ಅಧಿಕ ನಗದು ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡಿದ್ದರೆ, ಆ ವಿವರವನ್ನು ಐಟಿ ರಿಟರ್ನ್ಸ್ ವೇಳೆ ನಮೂದಿಸಬೇಕಾಗುತ್ತದೆ.

ITR Filing : No Extension In Deadline For IT Returns Filing says, IT Department | Oneindia Kannada

ಆನ್ ಲೈನ್ ಮೂಲಕ ಆದಾಯ ತೆರಿಗೆ ಪಾವತಿ ಮಾಡುವವರು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ (https://incometaxindiaefiling.gov.in/) ನಲ್ಲಿ ನೋಂದಣಿ ಮಾಡಿಕೊಂಡು ಸುಲಭವಾಗಿ ಪಾವತಿ ಮಾಡಬಹುದು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The last date for filing of Income Tax Returns remains July 31, there are no plans to extend this deadline, a top official said on Sunday.
Please Wait while comments are loading...