• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಬ್ಬದ ಸೀಸನ್‌ನಲ್ಲಿ 40 ಪಟ್ಟು ಪ್ರಗತಿ ಸಾಧಿಸಿದ ಫ್ಲಿಪ್‌ಕಾರ್ಟ್‌ ಶಾಪ್ಸಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08: ಫ್ಲಿಪ್‌ಕಾರ್ಟ್‌ನ ಸಾಮಾಜಿಕ ವಾಣಿಜ್ಯ ಕೊಡುಗೆಯಾಗಿರುವ ಶಾಪ್ಸಿ, ಮಾರಾಟಗಾರರು, ಮರು ಮಾರಾಟಗಾರರು ಮತ್ತು ಗ್ರಾಹಕರಿಂದ ಅತ್ಯುದ್ಭುತವಾದ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಆರಂಭವಾದ ದಿನದಿಂದ ಈ ಪ್ಲಾಟ್‌ಫಾರ್ಮ್ 40 ಪಟ್ಟು ಪ್ರಗತಿ ಸಾಧಿಸಿದೆ. ಶಾಪ್ಸಿ ಆರಂಭವಾದ ಕೇವಲ 100 ದಿನಗಳಲ್ಲಿ 2.5 ಲಕ್ಷ ಮಾರಾಟಗಾರರು, 51 ಲಕ್ಷಕ್ಕೂ ಅಧಿಕ ಬಳಕೆದಾರರು ಮತ್ತು 150 ಮಿಲಿಯನ್‌ಗೂ ಹೆಚ್ಚು ಉತ್ಪನ್ನಗಳನ್ನು ಹೊಂದುವ ಮೂಲಕ ಅಭೂತಪೂರ್ವವಾದ ಯಶಸ್ಸು ಕಂಡಿದೆ.

ಈ ಪ್ಲಾಟ್‌ಫಾರ್ಮ್‌ನಲ್ಲಿ ಶಾಪಿಂಗ್ ಮಾಡಲು ಮತ್ತು ಉಳಿತಾಯ ಮಾಡಲು ಗ್ರಾಹಕರನ್ನು ಸ್ವಾಗಿಸುತ್ತಾ, ಫ್ಲಿಪ್‌ಕಾರ್ಟ್‌ನ ಶಾಪ್ಸಿ ಈಗಾಗಲೇ ದಿ ಬಿಗ್ ಬಿಲಿಯನ್ ಡೇಸ್ ಹಬ್ಬದ ಮಾರಾಟ ಮೇಳದ ಮೊದಲ 4 ದಿನಗಳಲ್ಲಿ 16 ಪಟ್ಟು ಬೆಳವಣಿಗೆ ಸಾಧಿಸಿದೆ. ಈ ಅವಧಿಯಲ್ಲಿ ಮಾತ್ರ ಈ ಪ್ಲಾಟ್‌ಫಾರ್ಮ್ ಪ್ರತಿದಿನ ಸರಾಸರಿ 35 ಪಟ್ಟು ಹೆಚ್ಚಳ ಕಂಡಿದೆ.

ಫ್ಲಿಪ್‌ಕಾರ್ಟ್‌ನ ಶಾಪ್ಸಿಗೆ 2 ಲಕ್ಷಕ್ಕೂ ಅಧಿಕ ಉದ್ಯಮಿಗಳ ಸೇರ್ಪಡೆಫ್ಲಿಪ್‌ಕಾರ್ಟ್‌ನ ಶಾಪ್ಸಿಗೆ 2 ಲಕ್ಷಕ್ಕೂ ಅಧಿಕ ಉದ್ಯಮಿಗಳ ಸೇರ್ಪಡೆ

ಫ್ಲಿಪ್‌ಕಾರ್ಟ್‌ನ ಗ್ರೋಥ್ ಮತ್ತು ಮಾನಿಟೈಸೇಷನ್ ವಿಭಾಗದ ಹಿರಿಯ ಉಪಾಧ್ಯಕ್ಷ ಪ್ರಕಾಶ್ ಸಿಕಾರಿಯಾ ಅವರು ಮಾತನಾಡಿ, ''ಶಾಪ್ಸಿಯೊಂದಿಗೆ ದೇಶಾದ್ಯಂತ ಗ್ರಾಹಕರಿಗೆ ತಮ್ಮ ವಾಣಿಜ್ಯ ಅನುಭವವನ್ನು ಹೆಚ್ಚು ಮಾಡಿಕೊಳ್ಳಲು ಒಂದು ಉತ್ತಮ ಅವಕಾಶವನ್ನು ನೀಡಿದೆ. ಶಾಪ್ ಮಾಡುವುದು ಮತ್ತು ಗಳಿಸುವ ಅವಕಾಶವನ್ನು ನೀಡುವುದರೊಂದಿಗೆ ನಾವು ವಾಣಿಜ್ಯ ಸಾಮಾಜಿಕವನ್ನು ಎಲ್ಲರಿಗೂ ತಲುಪುವಂತೆ ಮಾಡುತ್ತಿದ್ದೇವೆ. ಫ್ಲಿಪ್‌ಕಾರ್ಟ್‌ ಗ್ರೂಪ್‌ನ ಅತ್ಯುತ್ತಮ ದರ್ಜೆಯ ತಂತ್ರಜ್ಞಾನ, ಅನಿರ್ಬಂಧಿತ ಪೂರೈಕೆ ಜಾಲ ಮತ್ತು ಗ್ರಾಹಕರನ್ನು ಆಳವಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಶಾಪ್ಸಿ ಆರಂಭವಾದ ಕೇವಲ 100 ದಿನಗಳಲ್ಲಿ ಮುಂಚೂಣಿಯಲ್ಲಿರುವ ಸಾಮಾಜಿಕ ವಾಣಿಜ್ಯ ಪ್ಲಾಟ್‌ಫಾರ್ಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಾರಾಟಗಾರರು ಮತ್ತು ಇ-ಕಾಮರ್ಸ್‌ನಿಂದ ದೂರ ಸರಿಯುತ್ತಿದ್ದ ಉದ್ಯಮಿಗಳು ಶಾಪ್ಸಿ ಆರಂಭದಿಂದಾಗಿ ಮತ್ತೆ ಇ-ಕಾಮರ್ಸ್ ಬಗ್ಗೆ ನಂಬಿಕೆಯನ್ನು ಪಡೆದುಕೊಳ್ಳುವ ಪ್ರವೃತ್ತಿಯನ್ನು ನೋಡುತ್ತಿದ್ದೇವೆ. ಇಂತಹ ನಂಬಿಕೆಯ ಅಡೆತಡೆಗಳನ್ನು ಹಿಮ್ಮೆಟ್ಟಿಸಲು ಮತ್ತು ಡಿಜಿಟಲ್ ಆರ್ಥಿಕತೆಯೊಂದಿಗೆ ಮತ್ತಷ್ಟು ತೊಡಗಿಸಿಕೊಳ್ಳುವುದು ಶಾಪ್ಸಿಯಿಂದ ಸಾಧ್ಯವಾಗುತ್ತಿದೆ. ನಾವು ವಾಣಿಜ್ಯೋದ್ಯಮಿಗಳು ಮತ್ತು ಮಾರಾಟಗಾರರಿಗೆ ನೋವಿನ ಅಂಶಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಗಮನ ಹರಿಸುವುದನ್ನು ಮುಂದುವರಿಸುತ್ತೇವೆ ಮತ್ತು ಅವರ ವ್ಯಾಪಾರದ ಜರ್ನಿಯನ್ನು ಅನುಕೂಲಕರವಾಗುವಂತಹ ತಂತ್ರಜ್ಞಾನವನ್ನು ಪೂರೈಸುತ್ತೇವೆ'' ಎಂದರು.

ಈ ಹಬ್ಬದ ಸೀಸನ್‌ನಲ್ಲಿ ಶಾಪ್ಸಿಯಲ್ಲಿ ಬಳಕೆದಾರರು ಉದ್ಯಮಿಗಳನ್ನು ಪರಿವರ್ತಿಸಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಗಳಿಕೆಯನ್ನು 30 ಪಟ್ಟಿನವರೆಗೆ ಪಡೆದಿದ್ದಾರೆ. ಕೆಲವು ಟಾಪ್ ಬಳಕೆದಾರರ ವರ್ಗಗಳಲ್ಲಿ ಫ್ಯಾಷನ್, ಗೃಹ ಮತ್ತು ಮೊಬೈಲ್ ವಿಭಾಗಗಳು ಸೇರಿವೆ. ಶ್ರೇಣಿ2, ಶ್ರೇಣಿ3 ನಗರಗಳಾದ ವಡೋದರ, ಗುಂಟೂರು, ಆಗ್ರಾದ ಮರುಮಾರಾಟಗಾರರು ಈ ಹಬ್ಬದ ಸೀಸನ್‌ನಲ್ಲಿ ತಮ್ಮ ಉದ್ಯಮಶೀಲತೆಯ ಜರ್ನಿಯನ್ನು ಶಾಪ್ಸಿಯಲ್ಲಿ ಆರಂಭಿಸಿದ್ದಾರೆ.

ಶಾಪ್ಸಿ ಇತ್ತೀಚೆಗೆ ತನ್ನ ಬ್ರ್ಯಾಂಡ್ ಅಭಿಯಾನವಾದ #HarBuyPeKamaiಅನ್ನು ಆರಂಭಿಸಿದೆ. ಈ ಅಭಿಯಾನವನ್ನು 'ಖರೀದಿಸಿ ಮತ್ತು ಗಳಿಸಿ' ಎನ್ನುವ ಘೋಷಣೆಯೊಂದಿಗೆ ಗ್ರಾಹಕರಿಗೆ ಶಾಪ್ಸಿಯ ಮೌಲ್ಯದ ಪ್ರತಿಪಾದನೆಯನ್ನು ಕಲ್ಪಿಸುತ್ತಿದ್ದೇವೆ. ಈ ಅಭಿಯಾನವು ಗ್ರಾಹಕರ ಗಮನವನ್ನು ಸಾಂಪ್ರದಾಯಿಕ ಇ-ಕಾಮರ್ಸ್‌ನಿಂದ ಆರಂಭವಾಗಿ ಕಟ್ಟ ಕಡೆಯ ಗ್ರಾಹಕರವರೆಗೆ ಗಮನ ನೀಡುತ್ತದೆ. ಇದಕ್ಕೆ ಬದಲಾಗಿ ಪ್ರಮುಖವಾಗಿ ಅಭಿಪ್ರಾಯ ನೀಡುವ ನಾಯಕನನ್ನು ಅಥವಾ 'ಪ್ರಭಾವಶಾಲಿ'ಯನ್ನು ಆಕರ್ಷಿಸಲು ಪ್ರಯತ್ನಿಸುತ್ತದೆ. ಅವರು ತಮ್ಮ ಹತ್ತಿರದ ಮತ್ತು ಪ್ರೀತಿಪಾತ್ರರಿಂದ ಏನನ್ನು ಖರೀದಿಸಬೇಕೆಂಬುದರ ಕುರಿತು ಸಲಹೆ ಪಡೆಯುತ್ತಾರೆ.

Festival Season: Flipkarts Shopsy gets 250,000 sellers, 5.1 mn users

ತಮ್ಮ ಸ್ಥಳೀಯ ಜಾಲವನ್ನು ಬಳಸಿಕೊಂಡು ಶಾಪ್ಸಿ ಪ್ರಭಾವಶಾಲಿಗಳು 2.5 ಲಕ್ಷಕ್ಕೂ ಹೆಚ್ಚು ಮಾರಾಟಗಾರರ 150 ಮಿಲಿಯನ್‌ಗೂ ಅಧಿಕ ಉತ್ಪನ್ನಗಳ ವಿವರಣೆ ಪಟ್ಟಿಗಳನ್ನು ಸಾಮಾಜಿಕ ಮಾಧ್ಯಮ ಮತ್ತು ಸಂವಹನದ ಆ್ಯಪ್‌ಗಳ ಮೂಲಕ ಬಿತ್ತರಿಸುತ್ತಾರೆ. ಸರಳೀಕೃತ ಸಾಮಾಜಿಕ ಮಾಧ್ಯಮದ ಇಂಟರ್‌ಫೇಸ್‌ನಲ್ಲಿ ತನ್ನ ವಿವರಣೆ ಪಟ್ಟಿ ಮತ್ತು ಪೂರ್ಣ ಸ್ಟ್ಯಾಕ್ ಇ-ಕಾಮರ್ಸ್ ಸೇವೆಗಳಿಗೆ ಪ್ರವೇಶವನ್ನು ಪೂರೈಸುತ್ತದೆ.

English summary
Festival Season: Flipkart's Shopsy gets 250,000 sellers, 5.1 mn users, with the platform already observing 40x growth since launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X