FD Interest Rates: ಈ ಗ್ರಾಹಕರಿಗೆ ಸಿಗಲಿದೆ 8.5%ವರೆಗೆ ಬಡ್ಡಿ: 12 ಲಕ್ಷ ರೂ. ಆದಾಯಕ್ಕೆ ತೆರಿಗೆ ರಿಯಾಯಿತಿ

FD Interest Rate: ಇತ್ತೀಚಿನ ವರ್ಷಗಳಲ್ಲಿ ಕೆಲವೊಂದು ಪ್ರಮುಖ ಬ್ಯಾಂಕ್‌ಗಳು ಸ್ಥಿರ ಠೇವಣಿ / ಎಫ್‌ಡಿ (Fixed Deposits) ಮೇಲೆ ಕಡಿಮೆ ಬಡ್ಡಿ ದರವನ್ನು ನೀಡುತ್ತಿವೆ. ಆದರೆ ಇದೀಗ ಎಫ್‌ಡಿ ಮೇಲಿನ ಬಡ್ಡಿಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಆದರೆ ಎಫ್‌ಡಿ ಮೇಲಿನ ಈ ಬಡ್ಡಿದರವು ಎಲ್ಲರಿಗೂ ಸಿಗುವುದಿಲ್ಲ. ಎಫ್‌ಡಿ ಬಡ್ಡಿ ದರ ಯಾವ ಬ್ಯಾಂಕ್‌ನಲ್ಲಿ ಹೆಚ್ಚಳವಾಗಿದೆ ಹಾಗೂ ಇದರ ಸೌಲಭ್ಯ ಯಾರಿಗೆಲ್ಲ ಸಿಗಲಿದೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಭಾರತದ ಕೆಲವೊಂದು ಪ್ರಮುಖ ಬ್ಯಾಂಕ್‌ಗಳು ಹಿರಿಯ ನಾಗರಿಕರಿಗೆ (60 ವರ್ಷ ಮತ್ತು ಮೇಲ್ಪಟ್ಟವರು) ಐದು ವರ್ಷಗಳ ಅವಧಿಗೆ ಸ್ಥಿರ ಠೇವಣಿಗಳ (ಎಫ್‌ಡಿ) ಮೇಲೆ 8.5% ವರೆಗಿನ ಬಡ್ಡಿದರಗಳನ್ನು ನೀಡುತ್ತಿವೆ. ಇದು 3 ಕೋಟಿ ರೂ.ಗಳವರೆಗಿನ ಠೇವಣಿಗಳಿಗೆ ಅನ್ವಯಿಸಲಿದೆ ಎನ್ನುವುದು ವಿಶೇಷವಾಗಿದೆ. ಯಾವ ಬ್ಯಾಂಕ್‌ಗಳು ಹೆಚ್ಚು ಬಡ್ಡಿ ದರವನ್ನು ಕೊಡುತ್ತಿವೆ ಎನ್ನುವ ವಿವರವನ್ನು ಮುಂದೆ ನೋಡೋಣ. ಸಣ್ಣ ಹಣಕಾಸು ಬ್ಯಾಂಕ್‌ಗಳ ಬಡ್ಡಿ ದರದ ಬಗ್ಗೆ paisabazaar.com ವರದಿ ಮಾಡಿದೆ.

FD Interest Rates These Customers Can Earn Up to 8 5 Interest Tax Relief on Income Up to 12 Lakh

FD Interest Rate: ಸಣ್ಣ ಹಣಕಾಸು ಬ್ಯಾಂಕ್‌ಗಳ ಬಡ್ಡಿ ದರ

AU ಸ್ಮಾಲ್ ಫೈನಾನ್ಸ್ ಬ್ಯಾಂಕ್ - 7.25%

Equitas ಸ್ಮಾಲ್ ಫೈನಾನ್ಸ್ ಬ್ಯಾಂಕ್ - 7.50%

ESAF ಸ್ಮಾಲ್ ಫೈನಾನ್ಸ್ ಬ್ಯಾಂಕ್ - 6.25%

Jana ಸ್ಮಾಲ್ ಫೈನಾನ್ಸ್ ಬ್ಯಾಂಕ್ - 8.00%

Shivalik ಸ್ಮಾಲ್ ಫೈನಾನ್ಸ್ ಬ್ಯಾಂಕ್ - 6.50%

slice ಸ್ಮಾಲ್ ಫೈನಾನ್ಸ್ ಬ್ಯಾಂಕ್ - 7.25%

Suryoday ಸ್ಮಾಲ್ ಫೈನಾನ್ಸ್ ಬ್ಯಾಂಕ್ - 8.50%

Ujjivan ಸ್ಮಾಲ್ ಫೈನಾನ್ಸ್ ಬ್ಯಾಂಕ್ - 7.70%

Utkarsh ಸ್ಮಾಲ್ ಫೈನಾನ್ಸ್ ಬ್ಯಾಂಕ್ - 7.50%

ಭಾರತದಲ್ಲಿ ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿನ ಠೇವಣಿಗಳಿಗೆ DICGC ವತಿಯಿಂದ 5 ಲಕ್ಷ ರೂಪಾಯಿ ವರೆಗೆ ವಿಮೆ ಇರುತ್ತದೆ. ಆದರೂ, ತಜ್ಞರು ಹೂಡಿಕೆದಾರರು ಸಣ್ಣ ಹಣಕಾಸು ಬ್ಯಾಂಕ್‌ಗಳ FDಗಳಲ್ಲಿ ಹಣ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಸಣ್ಣ ಹಣಕಾಸು ಬ್ಯಾಂಕ್‌ಗಳ ವ್ಯವಹಾರ ಮಾದರಿ ಸಾಮಾನ್ಯ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಭಿನ್ನವಾಗಿರಲಿದೆ. ಅವುಗಳ FDಗಳಲ್ಲಿ ಹೂಡಿಕೆ ಮಾಡುವ ಅಪಾಯವೂ ಇದೆ. ಹೀಗಾಗಿ, ಈ ಅಪಾಯವನ್ನು ಕಡಿಮೆ ಮಾಡಲು ಹೂಡಿಕೆದಾರರು ಸಣ್ಣ ಹಣಕಾಸು ಬ್ಯಾಂಕ್‌ಗಳ FDಗಳಲ್ಲಿ DICGC ವಿಮೆ ವ್ಯಾಪ್ತಿಗೆ ಒಳಪಡುವ 5 ಲಕ್ಷ ರೂ. ವರೆಗೆ ಮಾತ್ರ ಹಣ ಹೂಡಿಕೆ ಮಾಡುವುದು ಉತ್ತಮ. ಇದರಿಂದ ಅನಿರೀಕ್ಷಿತ ಪರಿಸ್ಥಿತಿಯಲ್ಲೂ ಹೂಡಿಕೆಯ ಅಸಲು ಮತ್ತು ಬಡ್ಡಿಗೆ ರಕ್ಷಣೆ ಸಿಗುವ ಸಾಧ್ಯತೆ ಇರುತ್ತದೆ.

ನಿರ್ದಿಷ್ಟ ಬ್ಯಾಂಕ್‌ನ FDಯಿಂದ ಸಿಗುವ ಬಡ್ಡಿ 1 ಲಕ್ಷ ರೂಪಾಯಿಗಿಂತ ಹೆಚ್ಚಾದರೆ, ಬ್ಯಾಂಕ್‌ಗಳು TDS ಕಡಿತಗೊಳಿಸುವುದು ಕಡ್ಡಾಯವಾಗಿದೆ. ಆದರೆ TDS ಎಂದರೆ ಹೆಚ್ಚುವರಿ ತೆರಿಗೆ ಎಂದರ್ಥವಲ್ಲ. ನೀವು ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವಾಗ ಕಡಿತಗೊಂಡ TDS ಮೊತ್ತವನ್ನು ನಿಮ್ಮ ಒಟ್ಟು ತೆರಿಗೆಗೆ ಹೊಂದಿಸಿಕೊಳ್ಳಬಹುದು. ನಿಮ್ಮ ಆದಾಯಕ್ಕೆ ಅನುಗುಣವಾಗಿ ತೆರಿಗೆ ಪಾವತಿಸುವ ಅಗತ್ಯವಿಲ್ಲದಿದ್ದರೆ, TDS ಮೊತ್ತವನ್ನು ಮರುಪಾವತಿಯಾಗಿ ಪಡೆಯಬಹುದು. ಮರುಪಾವತಿ ಸಿಗಬೇಕಾದ ಸಂದರ್ಭದಲ್ಲಿ, ಅದರ ಮೇಲಿನ ಬಡ್ಡಿಯೂ ಸಿಗಬಹುದು.

ಉದಾಹರಣೆಗೆ ಹಿರಿಯ ನಾಗರಿಕರ ವಾರ್ಷಿಕ ಆದಾಯವು 11 ಲಕ್ಷ ರೂಪಾಯಿ ಇದ್ದರೆ, 2025-26ನೇ ಹಣಕಾಸು ವರ್ಷದ ಹೊಸ ತೆರಿಗೆ ಪದ್ಧತಿಯಡಿ ಸೆಕ್ಷನ್ 87A ಅಡಿಯಲ್ಲಿ ಸಿಗುವ ತೆರಿಗೆ ರಿಯಾಯಿತಿಯಿಂದಾಗಿ ಅವರು ಆದಾಯ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. 2025-26ನೇ ಹಣಕಾಸು ವರ್ಷದ ಹೊಸ ತೆರಿಗೆ ಪದ್ಧತಿಯಡಿ 12 ಲಕ್ಷ ರೂಪಾಯಿ ವರೆಗೆ ಆದಾಯ ಹೊಂದಿರುವವರಿಗೆ ಸೆಕ್ಷನ್ 87A ಅಡಿಯಲ್ಲಿ ತೆರಿಗೆ ರಿಯಾಯಿತಿ ಅನ್ವಯಿಸಲಿದೆ.

ಇದರೊಂದಿಗೆ ಹಿರಿಯ ನಾಗರಿಕರು ಎಲ್ಲಾ ತೆರಿಗೆ ಕಡಿತಗಳು ಮತ್ತು ಸೆಕ್ಷನ್ 87A ರಿಯಾಯಿತಿಯನ್ನು ಪಡೆದ ನಂತರ ಅವರ ಒಟ್ಟು ಆದಾಯವು ತೆರಿಗೆ ಮಿತಿಗಿಂತ ಕಡಿಮೆಯಿದ್ದರೆ, ಅಂದರೆ ಹೊಸ ತೆರಿಗೆ ಪದ್ಧತಿಗೆ 12 ಲಕ್ಷ ರೂ. ಅಥವಾ ಹಳೆಯ ತೆರಿಗೆ ಪದ್ಧತಿಗೆ 5 ಲಕ್ಷ ರೂ. ಆಗಿದ್ದರೆ, ಟಿಡಿಎಸ್ ಕಡಿತವನ್ನು ತಪ್ಪಿಸಲು ಫಾರ್ಮ್ 15H ಅನ್ನು ಸಲ್ಲಿಸಬಹುದು.

ಇನ್ನು ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ವಿನಾಯಿತಿ ಮಿತಿ 3 ಲಕ್ಷ ರೂ. ಆಗಿದ್ದು, ಇದನ್ನು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ತೆರಿಗೆದಾರರಿಗೆ 5 ಲಕ್ಷ ರೂಪಾಯಿ ಹೆಚ್ಚಿಸಲಾಗಿದೆ ಮತ್ತು 87A ರಿಯಾಯಿತಿಯನ್ನು 5 ಲಕ್ಷ ರೂಪಾಯಿ ವರೆಗಿನ ಆದಾಯಕ್ಕೆ ಅನ್ವಯಿಸಲಾಗಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+