Fake: Tik Tok ಸೇರಿದಂತೆ ಚೀನಿ App Remove ಮಾಡಿ: ಸರ್ಕಾರ
ನವದೆಹಲಿ, ಜೂನ್ 19: ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿರ್ಬಂಧಿಸುವಂತೆ ಗೂಗಲ್ ಹಾಗೂ ಆಪಲ್ ಸಂಸ್ಥೆಗಳಿಗೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಡಿಯಲ್ಲಿರುವ National Informatics Centre(NIC) ನಿರ್ದೇಶನ ನೀಡಿರುವ ಆದೇಶ ಪ್ರತಿ ಬಂದಿದೆ ಎಂದು ಸುದ್ದಿ ಹಬ್ಬಿದೆ ಆದರೆ, ಇಂಥ ಯಾವುದೇ ಆದೇಶ ಬಂದಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
Recommended Video
ಭಾರತ ಹಾಗೂ ಚೀನಾ ನಡುವಿನ ಗಡಿ ಸಂಘರ್ಷದ ಪರಿಣಾಮದಿಂದ ಚೀನಾ ದೇಶ ಮೂಲದ ಅನೇಕ ಸ್ಮಾರ್ಟ್ ಫೋನ್ ಹಾಗೂ ಮೊಬೈಲ್ ಅಪ್ಲಿಕೇಷನ್ ಗಳನ್ನು ನಿಷೇಧಿಸುವ ಪ್ರಕ್ರಿಯೆ ಮುಂದುವರೆದಿದೆ. ಈ ಕುರಿತಂತೆ ಸಾರ್ವಜನಿಕ ವಲಯದಲ್ಲಿ ಸ್ವಯಂಪ್ರೇರಿತರಾಗಿ ಆಪ್ ಡಿಲೀಟ್ ಆಗುತ್ತಿದೆ. ಇನ್ನೊಂದೆಡೆ ಗುಪ್ತಚರ ಇಲಾಖೆಯಿಂದ ಚೀನಾ ಮೂಲದ ಕಂಪನಿಗಳ ಅಪ್ಲಿಕೇಷನ್ ಬಳಕೆ ಬಗ್ಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳ ನಡುವೆ ತಾರಕಕ್ಕೇರಿ ಮಾರಕವಾಗಿ ಪರಿಣಮಿಸಿತ್ತು. ಈ ಸಂಘರ್ಷದಲ್ಲಿ 20 ಭಾರತೀಯ ಯೋಧರು, 35 ಮಂದಿ ಚೀನಾ ಯೋಧರು ಮೃತಪಟ್ಟಿದ್ದಾರೆ. ಚೀನಿ ಆಪ್ ಬಳಸಿದರೆ ನಿಮ್ಮ ಖಾಸಗಿ ಮಾಹಿತಿ, ಸುರಕ್ಷತೆ, ಭದ್ರತೆಗೆ ಖಂಡಿತ ಒಂದಲ್ಲ ಒಂದು ರೀತಿಯಲ್ಲಿ ಅಪಾಯ ಒದಗುತ್ತದೆ ಎಂದು ಭಾರತೀಯ ಇಂಟೆಲಿಜೆನ್ಸ್ ಏಜೆನ್ಸಿ ಎಚ್ಚರಿಸಿತ್ತು.

ಜೂಮ್ ಬಗ್ಗೆ ಗೃಹ ಸಚಿವಾಲಯದ ಸೂಚನೆ
ಬಹು ಜನಪ್ರಿಯ ಆಪ್ ಗಳಾದ ಟಿಕ್ ಟಾಕ್, ಜೂಮ್, ಶೇರ್ ಇಟ್, ಯುಸಿ ಬ್ರೌಸರ್, ಕ್ಸೆಂಡರ್ ಹಾಗೂ ಕ್ಲೀನ್ ಮಾಸ್ಟರ್ ಕೂಡಾ ಇವೆ. ಈ ಆಪ್ ಗಳಲ್ಲಿ ಸ್ಪೈವೇರ್ ತುಂಬಿ ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಬಗ್ಗೆ ಏಜೆನ್ಸಿ ಹೇಳಿದೆ. ಏಪ್ರಿಲ್ ತಿಂಗಳಿನಲ್ಲಿ ಜೂಮ್ ವಿಡಿಯೋ ಕಾನ್ಫರೆನ್ಸ್ ಆಪ್ ಭದ್ರತೆ ಬಗ್ಗೆ ಅಪಸ್ವರ ಕೇಳಿ ಬಂದಾಗ, ಈ ಕುರಿತಂತೆ ಗೃಹ ಸಚಿವಾಲಯವು ಮಾರ್ಗಸೂಚಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ನಂತರ ಮಾರ್ಗಸೂಚಿಯಂತೆ ಜೂಮ್ ಆಪ್ ಕೂಡಾ ಸುರಕ್ಷತೆ ಹೆಚ್ಚಿಸಿ ಹೊಸ ಆವೃತ್ತಿ ಬಿಡುಗಡೆ ಮಾಡಿತ್ತು.
ಆದರೆ, ಚಿತ್ರದಲ್ಲಿರುವ NIC ಆದೇಶ ಪ್ರತಿ ನಕಲಿ ಎಂದು ಐಟಿ ಬಿಟಿ ಸಚಿವಾಲಯ ಸ್ಪಷ್ಟಪಡಿಸಿದೆ.

NIC ಆದೇಶದಲ್ಲಿ ಏನಿದೆ?
ಗೂಗಲ್ ಇಂಡಿಯಾದ ನೇಹಾ ಅಗರವಾಲ್ ಹಾಗೂ ಆಪಲ್ ಇಂಡಿಯಾದ ಅನುಜ್ ರೆಡ್ಡಿ ಅವರಿಗೆ ಬರೆದಿರುವ ಆದೇಶ ಪ್ರತಿಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ 2000 ಪ್ಯಾರಾ 1, 2 ಅನ್ವಯ ಈ ಕೆಳಕಂಡ ಆಪ್ ಗಳನ್ನು ನಿಮ್ಮ ವೇದಿಕೆಯಲ್ಲಿ ನಿರ್ಬಂಧಿಸಲು ಸೂಚಿಸಲಾಗಿದೆ. ಈ ಪ್ರತಿ ನಿಮಗೆ ತಲುಪಿದ ತಕ್ಷಣ ಸೂಚನೆಯನ್ನು ಪಾಲಿಸುವಂತೆ ತಿಳಿಸಲಾಗಿದೆ. ಈ ಆಪ್ ಬಳಕೆಯಿಂದ ದೇಶದ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ ಎಂಬ ವರದಿ ಬಂದಿದೆ ಎಂದು ಪ್ರಧಾನ ಕಾರ್ಯದರ್ಶಿ ಆನಂದ್ ಸಾಗರ್ ನೇಗಿ ಅವರ ಸಹಿ ಹಾಕಲಾಗಿದೆ. ಆದರೆ, ಇದೆಲ್ಲವೂ ಸುಳ್ಳು ಎಂದು PIB ಸ್ಪಷ್ಟಪಡಿಸಿ ಟ್ವೀಟ್ ಮಾಡಿದೆ.

NIC ಸೂಚಿಸಿರುವ ಆಪ್ ಗಳ ಪಟ್ಟಿ
ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಸ್ಟೋರ್ ನಲ್ಲಿ ಲಭ್ಯವಿರುವ ಈ ಕೆಳಕಂಡ ಆಪ್ ಗಳನ್ನು ನಿರ್ಬಂಧಿಸಲು ಸೂಚಿಸಲಾಗಿದೆ.
LiveMe
Bigo Live
BeautyPlus
Cam Scannaer
Clash of Kings
Mobile Legends'
Tik Tok
Clib Factory
Shein
Romwe
App Lock
V mate
Game of Sultans
ಆದರೆ, ಇದೆಲ್ಲವೂ ಈಗಾಗಲೇ ಗುಪ್ತಚರ ಇಲಾಖೆ ನೀಡಿದ ಪಟ್ಟಿಯಲ್ಲಿದೆ. ಹೀಗಾಗಿ ಸರ್ಕಾರದ ಅಧಿಕೃತ ಖಾತೆಯಿಂದ ಆದೇಶ ಬಂದರೆ ಮಾತ್ರ ಪರಿಗಣಿಸಲು ಸೂಚಿಸಲಾಗಿದೆ.

ಗುಪ್ತಚರ ಇಲಾಖೆ ನೀಡಿದ ಪಟ್ಟಿಯಲ್ಲಿರುವ ಆಪ್
360 Security, APUS Browser, Baidu Map, Baidu Translate, BeautyPlus, Bigo Live, CacheClear DU apps studio, Clash of Kings, Clean Master - Cheetah, ClubFactory, CM Browser, DU Battery Saver, DU Browser, DU Cleaner, DU Privacy, DU recorder, ES File Explorer, Helo, Kwai, LIKE, Mail Master, Mi Community, Mi Store, Mi Video call-Xiaomi, NewsDog, Parallel Space, Perfect Corp, Photo Wonder, QQ International, QQ Launcher, QQ Mail, QQ Music, QQ NewsFeed, QQ Player, QQ Security Centre, ROMWE, SelfieCity, SHAREit, SHEIN, TikTok, UC Browser, UC News, Vault-Hide, Vigo Video, Virus Cleaner (Hi Security Lab), VivaVideo- QU Video Inc, WeChat, Weibo, WeSync, Wonder Camera, Xender and YouCam Makeup.












Click it and Unblock the Notifications