• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೇಸ್ಬುಕ್ BFF ಹಸಿರು ಕಲರ್, ಅಸಲಿ ಬಣ್ಣ ಬಯಲು

By Mahesh
|
   ಫೇಸ್ಬುಕ್ BFF ಹಸಿರು ಕಲರ್, ಅಸಲಿ ಬಣ್ಣ ಬಯಲು

   ಬೆಂಗಳೂರು, ಮಾರ್ಚ್ 23: ಸಾಮಾಜಿಕ ಜಾಲ ತಾಣಗಳ ಪೈಕಿ ಅತ್ಯಂತ ಜನಪ್ರಿಯವಾಗಿರುವ ಫೇಸ್ ಬುಕ್ ನಲ್ಲಿ ಸದ್ಯಕ್ಕಂತೂ BFF ಅಕ್ಷರಗಳು ಟ್ರೆಂಡಿಂಗ್ ನಲ್ಲಿವೆ. bff ಎಂದು ಕಮೆಂಟ್ ಮಾಡಿ, ನಿಮ್ಮ ಫೇಸ್ಬುಕ್ ಖಾತೆ ರಕ್ಷಿಸಿಕೊಳ್ಳಿ ಎನ್ನುವ ಪೋಸ್ಟ್ ಗಳು ಹೆಚ್ಚಾಗುತ್ತಿವೆ. ಆದರೆ, ಇದೊಂದು ನಕಲಿ ಸುದ್ದಿ, ಫೇಸ್ಬುಕ್ ಈ ರೀತಿ ಯಾವುದೇ ಸುರಕ್ಷಿತಾ ನಿಯಮ ಬಳಸುತ್ತಿಲ್ಲ ಎಂಬ ಸ್ಪಷ್ಟನೆ ಸಿಕ್ಕಿದೆ.

   ಫೇಸ್ಬುಕ್ ನಲ್ಲಿ ಈ ರೀತಿ ಅನೇಕ ಬಾರಿ, ಈ ರೀತಿ ಸುಳ್ಳು ಸುದ್ದಿಗಳು ಹರಡುತ್ತಾ ಇರುತ್ತವೆ. ಆದರೆ, ಬಳಕೆದಾರರು ಎಚ್ಚರದಿಂದಿರಬೇಕು. ಫೇಸ್ಬುಕ್ ಏನಾದರೂ ಸುರಕ್ಷಿತ ನಿಯಮಗಳನ್ನು ಬದಲಾಯಿಸಿದರೆ, ಅಥವಾ ಈ ರೀತಿ ಭದ್ರತೆ ಬಗ್ಗೆ ಪರೀಕ್ಷೆ ನಡೆಸುವುದಾದರೆ, ನಿಮಗೆ ಪ್ರತ್ಯೇಕವಾಗಿ ಮೆಸೇಜ್, ಅಲರ್ಟ್, ಇಮೇಲ್ ಕಳಿಸಲಾಗುತ್ತೆ.

   ಕೇಂಬ್ರಿಜ್ ಅನಾಲಿಟಿಕಾ ಎಂಬ ಹೊಸ ಅಸ್ತ್ರದ ಸುತ್ತಮುತ್ತ

   ಆದರೆ, ಕೆಲ ದಿನಗಳಿಂದ ಕೇಂಬ್ರಿಜ್ ಅನಾಲಿಟಿಕಾದ ಸುದ್ದಿ ಸ್ಫೋಟಗೊಂಡ ಬಳಿಕ ಫೇಸ್ಬುಕ್ ಭದ್ರತಾ ಲೋಪದ ಬಗ್ಗೆ ಆತಂಕ ಸಹಜವಾಗಿ ಎಲ್ಲರಲ್ಲೂ ಇದೆ. ಇದೇ ಸಂದರ್ಭದಲ್ಲಿ ಹುಟ್ಟಿಕೊಂಡಿರುವ bff ಸುದ್ದಿಯನ್ನು ಕೂಡಾ ಸತ್ಯ ಎಂದು ನಂಬಿರುವ ಜನರು ತಮ್ಮ ಸ್ನೇಹಿತರಿಗೂ ಆ ಸಂದೇಶವನ್ನು ಕಳುಹಿಸುತ್ತಿದ್ದಾರೆ.

   Fake News alert : Green BFF hacker security test on Facebook

   'ನಿಮಗೆ ಬರುವ ಸಂದೇಶದ ಕೆಳಗೆ ಕಮೆಂಟ್ ಬಾಕ್ಸ್ ನಲ್ಲಿ ನೀವು BFF ಟೈಪ್ ಮಾಡಬೇಕು. ಅದು ಹಸಿರು ಬಣ್ಣದಲ್ಲಿ ಬಂದ್ರೆ ನಿಮ್ಮ ಖಾತೆ ಸುರಕ್ಷಿತವಾಗಿದೆ ಎಂದರ್ಥ. ಹಸಿರು ಬಣ್ಣ ಬರದೆ ಹೋದಲ್ಲಿ ಪಾಸ್ವರ್ಡ್ ಬದಲಿಸಿ' ಎಂಬ ಸಂದೇಶವನ್ನು ಎಲ್ಲರೂ ಹಾಕುತ್ತಿದ್ದಾರೆ.

   ನಿಮ್ಮ ಫೇಸ್ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ?

   ಅಸಲಿಗೆ BFF ಎನ್ನುವುದು Best Friend Forever ಎಂಬುದರ ಸಂಕ್ಷಿಪ್ತ ರೂಪ. ಇನ್ನೂ ಬಣ್ಣ ಬದಲಾವಣೆಯಾಗುವುದು Text Delight ಎಂಬ ಫೇಸ್ ಬುಕ್ ಫೀಚರ್ ಆಗಿದೆ. ಇದು ಅಕ್ಷರಗಳ ಬಣ್ಣವನ್ನು ಹಸಿರು ಅಥವಾ ಕೆಂಪು ಬಣ್ಣಕ್ಕೆ ಕ್ಲಿಕ್ ಮಾಡಿದಾಗ ಬದಲಾಯಿಸುವಂತೆ ಮಾಡಲಾಗಿದೆ. Best Wishes, Congratulations ಹಾಗೂ You Got This ಪದಗಳು ಯಾವ ಭಾಷೆಯಲ್ಲಿದ್ದರೂ ಅದು ಅನಿಮೇಟ್ ಆಗಿ ಬಣ್ಣ ಬದಲಾವಣೆಯಾಗುತ್ತದೆ.

   ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

   ಆದ್ರೆ ಹೀಗೆ ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು. ಜನರಿಗೆ 'BFF' ಅರ್ಥ ಗೊತ್ತಿಲ್ಲ. ಇದೇ ಕಾರಣಕ್ಕೆ ಅನೇಕರು ಈ ಸುದ್ದಿಯನ್ನು ನಿಜವೆಂದು ನಂಬಿದ್ದಾರೆ. ಕೆಲ ದಿನಗಳ ಹಿಂದೆ ಫೇಸ್ಬುಕ್ ಶುಭಾಶಯ ಕೋರಿದವರ ಕಮೆಂಟ್ ಕೇಸರಿ ಬಣ್ಣದಲ್ಲಿ ಬರುವ ಫೀಚರ್ ಶುರು ಮಾಡಿದೆ. BFF ಕೂಡ ಇಂಥಹದ್ದೇ ಒಂದು ಫೀಚರ್ ಆಗಿದೆ. BFF ಅರ್ಥ ಬೆಸ್ಟ್ ಫ್ರೆಂಡ್ ಫಾರೆವರ್ ಎಂದಾಗಿದೆ.

   lok-sabha-home

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Rumours about typing BFF on your Facebook to test if your account is secure from hackers or not is actually a hoax, a lie, a fraud. It is fake news at its best (or in this case, the worst). Turns out, this is actually a Facebook feature called Text Delight which automatically animates green and red hands giving a high five when published

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more