ಕಾರ್ಮಿಕರ ಕೆಲಸದ ಪರಿಸ್ಥಿತಿ ಅವಲೋಕನ: ಜೊಮ್ಯಾಟೊ, ಸ್ವಿಗ್ಗಿಗೆ ಕೊನೆಯ ಸ್ಥಾನ!
ನವದೆಹಲಿ, ಡಿಸೆಂಬರ್ 17: ದೇಶದ ಪ್ರಮುಖ ಸ್ಟಾರ್ಟ್ಅಪ್ ಕಂಪನಿಗಳು ಸೇರಿದಂತೆ ಅನೇಕ ಪ್ರಮುಖ ಉದ್ಯಮಗಳಲ್ಲಿ ಕಾರ್ಮಿಕರ ಕೆಲಸದ ಪರಿಸ್ಥಿತಿಯು ಅತ್ಯಂತ ಕೆಳಮಟ್ಟದಲ್ಲಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
'ಫೇರ್ವರ್ಕ್ ಇಂಡಿಯಾ ರೇಟಿಂಗ್ಸ್ 2020: ಲೇಬರ್ ಸ್ಟ್ಯಾಂಡರ್ಡ್ಸ್ ಇನ್ ದಿ ಪ್ಲಾಟ್ಫಾರ್ಮ್ ಎಕಾನಮಿ' ಬುಧವಾರ ಬಿಡುಗಡೆಯಾದ ವರದಿಯ ಪ್ರಕಾರ, ಸ್ವಿಗ್ಗಿ, ಜೊಮ್ಯಾಟೊ ಮತ್ತು ಉಬರ್ ಇಂಡಿಯಾ ಕಾರ್ಮಿಕರ ಕೆಲಸದ ಕುರಿತು 10ರಲ್ಲಿ ಕೇವಲ 1 ಅಂಕವನ್ನು ಪಡೆಯುವ ಮೂಲಕ ರೇಟಿಂಗ್ನಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ.

ಮತ್ತೊಂದೆಡೆ ಅರ್ಬನ್ ಕಂಪನಿ ಮತ್ತು ಫ್ಲಿಪ್ಕಾರ್ಟ್ನ ಲಾಜಿಸ್ಟಿಕ್ಸ್ ಅಂಗಸಂಸ್ಥೆ ಇಕಾರ್ಟ್ ಕ್ರಮವಾಗಿ 8/10 ಮತ್ತು 7/10 ಸ್ಕೋರ್ಗಳನ್ನು ಗಳಿಸಿವೆ.

ಫೇರ್ವರ್ಕ್ ಇಂಡಿಯಾ ರೇಟಿಂಗ್ಸ್ 2020 ಪ್ರಮುಖ ಐದು ತತ್ವಗಳ ಮೇಲೆ ವರದಿಯನ್ನು ನಿರ್ಣಯಿಸಿದ್ದು, ನ್ಯಾಯೋಚಿತ ಪರಿಸ್ಥಿತಿಗಳು, ನ್ಯಾಯೋಚಿತ ಒಪ್ಪಂದಗಳು, ನ್ಯಾಯೋಚಿತ ನಿರ್ವಹಣೆ, ಮತ್ತು ನ್ಯಾಯೋಚಿತ ಪ್ರಾತಿನಿಧ್ಯ ಎಂಬುದರ ಮೇಲೆ ಆಧಾರಿತವಾಗಿದೆ.
ಇನ್ನು ಈ ರೇಟಿಂಗ್ ಹೊರಬಿದ್ದ ಮೇಲೆ ಜೊಮ್ಯಾಟೊ ಮೀಡಿಯಾ ಪ್ರೈ.ಲಿ.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಿಂದರ್ ಗೋಯಲ್ ಮಾತನಾಡಿ ಮುಂದಿನ ವರ್ಷ ಶ್ರೇಯಾಂಕದಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ. ಕಳೆದ ವರ್ಷದ ವರದಿಯಲ್ಲಿ ಜೊಮ್ಯಾಟೊ 10ರಲ್ಲಿ 4 ಅಂಕಗಳನ್ನು ಪಡೆದಿತ್ತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications