ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದಲಾಗಲಿದೆ ಫೇರ್‌ & ಲವ್ಲಿ ಬ್ರ್ಯಾಂಡ್ ಹೆಸರು, ಕಾರಣ ಏನು ಗೊತ್ತಾ?

|
Google Oneindia Kannada News

ನವದೆಹಲಿ, ಜೂನ್ 26: ಕಳೆದ ಐದು ದಶಕಗಳಿಂದ ಭಾರತ, ಸೇರಿದಂತೆ ಜಗತ್ತಿನಾದ್ಯಂತ ತನ್ನ ಬ್ರ್ಯಾಂಡ್‌ನಿಂದಲೇ ಹೆಸರುವಾಸಿಯಾಗಿರುವ ಕ್ರೀಮ್‌ಗಳಲ್ಲಿ ಒಂದು ಫೇರ್ & ಲವ್ಲಿ. ಈ ಬ್ರ್ಯಾಂಡ್ ಕುರಿತು ಗೊತ್ತಿಲ್ಲದ ಜನರೇ ತುಂಬಾ ಕಡಿಮೆ. 5 ದಶಕಗಳ ಹಿಂದೆಯೇ ಜಾಗತಿಕ ಕಂಪನಿಯಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಈ ಹೆಸರಿನ ಹಕ್ಕನ್ನು (ಪೇಟೆಂಟ್‌) ತನ್ನದಾಗಿಸಿಕೊಂಡಿತ್ತು.

Recommended Video

ಬೆಂಗಳೂರಲ್ಲಿ ನದಿ ಇದ್ದಿದ್ದು ಗೊತ್ತಾಗಿದ್ದೇ ನೆನ್ನೆ| Vrushabavathi River | Bengaluru | Oneindia Kannada

ಆದರೆ ಫೇರ್ & ಲವ್ಲಿ ಎಂಬ ಹೆಸರನ್ನು ಬದಲಾಯಿಸಲು ಹೊರಟಿದೆ ಎಚ್‌ಯುಎಲ್. ಹೌದು "ಫೇರ್" ಎಂಬ ಪದವನ್ನು ಕೈಬಿಡುವುದಾಗಿ ಕಂಪನಿಯು ಘೋಷಿಸಿದೆ. ಈ ಮೂಲಕ "ಸೌಂದರ್ಯದ ಬಗ್ಗೆ ಹೆಚ್ಚು ಅಂತರ್ಗತ ದೃಷ್ಟಿ" ಹೊಂದುವುದಾಗಿ ತಿಳಿಸಿದೆ.

ತನ್ನೆಲ್ಲಾ ಬ್ರ್ಯಾಂಡ್‌ಗಳಿಂದ ಫೇರ್, ವೈಟನಿಂಗ್ ಪದ ತೆಗೆಯಲಿದೆ

ತನ್ನೆಲ್ಲಾ ಬ್ರ್ಯಾಂಡ್‌ಗಳಿಂದ ಫೇರ್, ವೈಟನಿಂಗ್ ಪದ ತೆಗೆಯಲಿದೆ

ಹೌದು, ಫೇರ್‌ & ಲವ್ಲಿಯಷ್ಟೇ ಅಲ್ಲದೆ, ಎಚ್‌ಯುಎಲ್ ತನ್ನ ಉತ್ಪನ್ನಗಳ ಪ್ಯಾಕ್‌ಗಳು ಮತ್ತು ಜಾಹೀರಾತಿನಲ್ಲಿ ಫೇರ್‌/ಫೇರ್ನೆಸ್‌, ವೈಟ್‌/ವೈಟನಿಂಗ್, ಲೈಟ್‌/ ಲೈಟನಿಂಗ್‌ ಎಂಬಂತಹ ಪದಗಳನ್ನು ಕೂಡ ತೆಗೆಯಲಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ?ಜಾರ್ಜ್ ಫ್ಲಾಯ್ಡ್ ಹತ್ಯೆ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ?

ಮೆಲನಿನ್ ಅಂಶವನ್ನು ತಡೆಯುವ ಮುಖದ ಕ್ರೀಮ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತದೆ. ಯುನಿಲಿವರ್‌ನ ಫೇರ್ ಅಂಡ್ ಲವ್ಲಿ ಫೇಸ್‌ ಕ್ರೀಮ್ ದೇಶದಲ್ಲಿ ಹೆಚ್ಚು ಜನಪ್ರಿಯ ಆದರೆ ಈಗ ಈ ಜನಪ್ರಿಯ ಹೆಸರನ್ನೇ ಬದಲಿಸಲು ಯೋಜನೆ ರೂಪಿಸಲಾಗಿದೆ.

ಭಾರತದಿಂದಲೇ ಪಡೆಯಲಿದೆ 500 ಮಿಲಿಯನ್ ಡಾಲರ್

ಭಾರತದಿಂದಲೇ ಪಡೆಯಲಿದೆ 500 ಮಿಲಿಯನ್ ಡಾಲರ್

ಕಂಪನಿಯು ಭಾರತದಲ್ಲೇ 500 ಮಿಲಿಯನ್ ಡಾಲರ್‌ನಷ್ಟು ಸಂಪಾದಿಸುತ್ತದೆ. ಮತ್ತು ಇದು ಬಾಂಗ್ಲಾದೇಶ, ಪಾಕಿಸ್ತಾನ, ಇಂಡೋನೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಜನಪ್ರಿಯವಾಗಿದೆ.

ಹೆಸರು ಬದಲಾವಣೆಗೆ ಕಾರಣವೇನು?

ಹೆಸರು ಬದಲಾವಣೆಗೆ ಕಾರಣವೇನು?

ಅಮೆರಿಕದಲ್ಲಿ ಭುಗಿಲೆದ್ದಿರುವ ಜನಾಂಗೀಯ ನಿಂದನೆ ಕಿಚ್ಚು ಫೇರ್‌& ಲವ್ಲಿ ಹೆಸರು ಬದಲಾವಣೆಗೆ ಕಾರಣವಾಗಿದೆ. ಮೈ ಬಣ್ಣದ ವಿಚಾರಕ್ಕೆ ನಡೆಯುವ ನಿಂದನೆಗೆ ಅಮೆರಿಕ ಸೇರಿದಂತೆ ವಿಶ್ವಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು. ಇದರಿಂದ ಬ್ರ್ಯಾಂಡ್ ಮೇಲೆ ಪರಿಣಾಮ ಆಗುತ್ತಿದೆ. ಹೀಗಾಗಿ ಚರ್ಮದ ಬಣ್ಣವನ್ನು ಸೂಚಿಸುವ ಪದಗಳನನ್ನು ತನ್ನ ಬ್ರ್ಯಾಂಡ್‌ ಹೆಸರಿನಲ್ಲಿ ಕೈಬಿಡುವುದಾಗಿ ನಿರ್ಧರಿಸಿದೆ.

ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?ಜಾರ್ಜ್ ಫ್ಲಾಯ್ಡ್ ಹತ್ಯೆ: ಟ್ರಂಪ್ ಬಾಯಿಂದ ಬಂದಿದ್ದು ಅದೆಂಥ ಮಾತು.?

ವಿದೇಶಗಳಲ್ಲೂ ಭರ್ಜರಿ ಪ್ರಚಾರ ಹೊಂದಿರುವ ಬ್ರ್ಯಾಂಡ್

ವಿದೇಶಗಳಲ್ಲೂ ಭರ್ಜರಿ ಪ್ರಚಾರ ಹೊಂದಿರುವ ಬ್ರ್ಯಾಂಡ್

ಫೇರ್‌& ಲವ್ಲಿ ಭಾರತದಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲೂ ಸಖತ್ ಫೇಮಸ್. ಬಾಂಗ್ಲಾದೇಶ, ಇಂಡೋನೇಷ್ಯಾ, ಥಾಯ್ಲೆಂಡ್, ಪಾಕಿಸ್ತಾನ ಹಾಗೂ ಏಷ್ಯಾದ ಮತ್ತಿತರ ದೇಶಗಳಲ್ಲೂ ಇದನ್ನು ಮಾರಾಟ ಮಾಡಲಾಗುತ್ತದೆ.

ಜಾನ್ಸನ್ ಮತ್ತು ಜಾನ್ಸನ್ ನಿರ್ಧಾರದ ಬಳಿಕ ಎಚ್‌ಯುಎಲ್ ನಿರ್ಧಾರ

ಜಾನ್ಸನ್ ಮತ್ತು ಜಾನ್ಸನ್ ನಿರ್ಧಾರದ ಬಳಿಕ ಎಚ್‌ಯುಎಲ್ ನಿರ್ಧಾರ

ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಮಾರಾಟವಾದ ನ್ಯೂಟ್ರೋಜೆನಾ ಫೈನ್ ಫೇರ್‌ನೆಸ್ ಕ್ರೀಮ್ ಮತ್ತು ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ಮಾತ್ರ ಮಾರಾಟವಾದ ಕ್ಲೀನ್ & ಕ್ಲಿಯರ್ ಫೇರ್‌ನೆಸ್ ಕ್ರೀಮ್ ಮಾರಾಟವನ್ನು ನಿಲ್ಲಿಸಲು ಜಾನ್ಸನ್ ಮತ್ತು ಜಾನ್ಸನ್ (ಜೆ & ಜೆ) ನಿರ್ಧರಿಸಿದ ನಂತರ ಎಚ್‌ಯುಎಲ್ ಈ ಪ್ರಕಟಣೆ ಹೊರಡಿಸಿದೆ.

English summary
Hindustan Unilever Ltd (HUL), the Indian arm of the global conglomerate, announced Thursday that it will change fair & lovely cream name
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X