ಕಾಪಿ ರೈಟ್ ಉಲ್ಲಂಘನೆ: ಫೇಸ್ ಬುಕ್ ಗೆ 3 ಸಾವಿರ ಕೋಟಿ ರು. ದಂಡ!!!

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 2: ಫೇಸ್ ಬುಕ್ ಸಂಸ್ಥೆಯ ಅಧೀನದಲ್ಲಿರುವ ವರ್ಚುವಲ್ ರಿಯಾಲಿಟಿ ರಿಸರ್ಚ್ ಸಂಸ್ಥೆಯಾದ 'ಓಕ್ಯುಲಸ್ ವಿ ಆರ್' ವತಿಯಿಂದ ಮೇರಿಲ್ಯಾಂಡ್ ಮೂಲದ 'ಝೆನಿ ಮ್ಯಾಕ್ಸ್' ಎಂಬ ಕಂಪನಿಯ ಸಾಫ್ಟ್ ವೇರ್ ಅನ್ನು ಅನುಮತಿಯಿಲ್ಲದೆ ನಕಲು ಮಾಡಿದ ಆರೋಪದ ಮೇರೆಗೆ 500 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 3,371 ಕೋಟಿ ರು.) ದಂಡ ವಿಧಿಸಲಾಗಿದೆ.

ಬೌದ್ಧಿಕ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗಿರುವುದಾಗಿ ತಿಳಿಸಿರುವ ನ್ಯಾಯಪೀಠ, ಫೇಸ್ ಬುಕ್ ಗೆ ದಂಡ ವಿಧಿಸಿದೆ.

Facebook to pay $500 million penalty over Oculus VR copyright infringement

ಝೆನಿಮ್ಯಾಕ್ಸ್ ಕಂಪನಿಯು ನೀಡಿದ್ದ ದೂರಿನನ್ವಯ ಅಮೆರಿಕದ ನ್ಯಾಯಾಧೀಕರಣ ನಡೆಸುತ್ತಿದ್ದ ತೀರ್ಪು ಬುಧವಾರ ಹೊರಬಿದ್ದಿದ್ದು, 'ಓಕ್ಯುಲಸ್ ಕಂಪನಿ'ಯ ತಪ್ಪಿಗಾಗಿ ಅದರ ಮಾತೃಸಂಸ್ಥೆಯಾದ ಫೇಸ್ ಬುಕ್ ಕಂಪನಿಯೇ ಪರಿಹಾರ ನೀಡಬೇಕೆಂದು ನ್ಯಾಯಪೀಠ ಸೂಚಿಸಿದೆ.

ಓಕ್ಯುಲಸ್ ಸಂಸ್ಥೆಯು 'ಓಕ್ಯುಲಸ್ ರಿಫ್ಟ್' ಎಂಬ ವಿಆರ್ ಕಿಟ್ ಅನ್ನು ತಯಾರಿಸಿತ್ತು. ಅದರ ಪೇಟೆಂಟ್ ಹಕ್ಕುಗಳನ್ನು ಫೇಸ್ ಬುಕ್ ಸಂಸ್ಥೆ 2014ರಲ್ಲಿ ಖರೀದಿ ಮಾಡಿತ್ತು.

ಆದರೆ, ಝೆನಿ ಮ್ಯಾಕ್ಸ್, ಓಕ್ಯುಲಸ್ ಕಂಪನಿಯು ತನ್ನ ಕಂಪನಿಯ ಸಾಫ್ಟ್ ವೇರ್ ಕದ್ದು 'ಓಕ್ಯುಲಸ್ ರಿಫ್ಟ್' ಎಂಬ ಹೊಸ ಪರಿಕರ ತಯಾರಿಸಿದೆ ಎಂದು ದೂರಿತ್ತು. ಅಲ್ಲದೆ, ತನ್ನಲ್ಲಿ ಕೆಲ ವರ್ಷಗಳ ಹಿಂದೆ ಕೆಲಸ ಮಾಡುತ್ತಿದ್ದ ಜಾನ್ ಕಾರ್ಮಾರ್ಕ್ ಎಂಬಾತನಿಗೆ ತನ್ನ ಕಂಪನಿಯಲ್ಲಿ ಕೆಲಸ ಕೊಟ್ಟು ಆತನಿಂದ ತಮ್ಮ ಕಂಪನಿಯ ಸರ್ವರ್ ನಲ್ಲಿದ್ದ ಸಾಫ್ಟ್ ವೇರ್ ಅನ್ನು ಕದಿಯಲಾಗಿದೆ ಎಂದು ಝೆನಿ ಮ್ಯಾಕ್ಸ್ ಕಂಪನಿ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A US jury on Wednesday ordered Facebook and creators of its Oculus Rift to pay $500 million in damages to gaming software firm ZeniMax for theft of intellectual property.
Please Wait while comments are loading...