ಜಿಯೋ ಫೋನಿಗೆ ಬಂತು ವಿಶ್ವದ ಅತಿ ಜನಪ್ರಿಯ App

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 14: 'ಇಂಡಿಯಾ ಕಾ ಸ್ಮಾರ್ಟ್‍ಫೋನ್' ಜಿಯೋಫೋನ್‍ನಲ್ಲಿ ಫೇಸ್‍ಬುಕ್ ಲಭ್ಯ ಇರಲಿದೆ. ಫೇಸ್‍ಬುಕ್ ಅಪ್ಲಿಕೇಷನ್ ನ ಈ ಹೊಸ ಆವೃತ್ತಿಯನ್ನು ವಿಶೇಷವಾಗಿ ಜಿಯೋ ಫೋನ್‍ಗಾಗಿ ವಿನ್ಯಾಸಗೊಳಿಸಲಾಗಿರುವ ಜಿಯೋ ಕಿಯೋಸ್ ಎಂಬ ವೆಬ್ ಆಧಾರಿತ ಆಪರೇಟಿಂಗ್ ಸಿಸ್ಟಮ್‍ಗಾಗಿ ಅಭಿವೃದ್ಧಿಪಡಿಸಲಾಗಿದೆ,

ಇದು ಭಾರತದಲ್ಲಿ 50 ಕೋಟಿಯಷ್ಟು ಫೀಚರ್ ಫೋನ್ ಬಳಕೆದಾರರಿಗೆ ಫೇಸ್‍ಬುಕ್ ಲಭಿಸುವಂತೆ ಮಾಡಲಿದೆ. ಯೋಫೋನ್‍ಗಾಗಿನ ಈ ಹೊಸ ಫೇಸ್‍ಬುಕ್ ಆಪ್ ಸಮಗ್ರ ಫೇಸ್‍ಬುಕ್ ಅನುಭವವನ್ನು ಒದಗಿಸುತ್ತದೆ, ಇದು ಜನರಿಗೆ ತಮ್ಮ ಪ್ರೀತಿಪಾತ್ರರೊಂದಿಗೆ ಸಂಪರ್ಕ ಸಾಧಿಸಲು ಅವಕಾಶ ನೀಡುತ್ತದೆ.

Facebook now available on worlds most affordable smartphone Jiophone

ಇದು ಪುಶ್ ನೋಟಿಫಿಕೇಶನ್‍ಗಳು, ವೀಡಿಯೋಗಳು ಮತ್ತು ಬಾಹ್ಯ ವಿಷಯಗಳಿರುವ ಲಿಂಕ್‍ಗಳನ್ನು ಬೆಂಬಲಿಸುತ್ತದೆ, ಈ ಆಪ್ ಯಶಸ್ವಿಯಾಗಿ ಜಿಯೋ ಫೋನ್‍ನಲ್ಲಿ ಕರ್ಸರ್ ಕಾರ್ಯವನ್ನು ಪ್ರಶಸ್ತಗೊಳಿಸಿದೆ ಮತ್ತು ಫೇಸ್‍ಬುಕ್‍ನ ಜನಪ್ರಿಯ ಫೀಚರ್ ಗಳಾದ ನ್ಯೂಸ್ ಫೀಡ್ ಮತ್ತು ಫೊಟೋಗಳಿಗೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

'ಜಿಯೋ ಫೋನ್ ವಿಶ್ವದ ಅತ್ಯಂತ ಕೈಗೆಟಕುವ ಸ್ಮಾರ್ಟ್‍ಫೋನ್ ಆಗಿದ್ದು, ಇದನ್ನು ಫೀಚರ್ ಫೋನ್‍ನಿಂದ ಸ್ಮಾರ್ಟ್‍ಫೋನ್‍ಗೆ ವರ್ಗಾವಣೆಗೊಳ್ಳುವ ಸಲುವಾಗಿ ವಿಶೇಷವಾಗಿ ಭಾರತೀಯರಿಗಾಗಿ ರೂಪಾಂತರದ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ.

ಜಿಯೋ ವಿಶ್ವದ ಅತಿದೊಡ್ಡ ಮೊಬೈಲ್ ಡಾಟಾ ನೆಟ್‍ವರ್ಕ್, ಪ್ರತಿಯೊಬ್ಬ ಭಾರತೀಯ ಡಾಟಾ ಶಕ್ತಿಯೊಂದಿಗೆ ಸಶಕ್ತಗೊಳ್ಳಬೇಕೆಂದು ನಿರ್ಮಿಸಲಾಗಿದೆ ಮತ್ತು ಜಿಯೋಫೋನ್ ಈ ಜಿಯೋ ಆಂದೋಲನದ ಅಂತರ್ಗತ ಭಾಗವಾಗಿದೆ'' ಎಂದು ಜಿಯೋದ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.

''ಜಿಯೋದೊಂದಿಗಿನ ನಮ್ಮ ಸಹಭಾಗಿತ್ವದ ಬಗ್ಗೆ ತುಂಬಾ ಖುಷಿಯಾಗುತ್ತಿದೆ ಮತ್ತು ಈಗ ಒದಗಿಸಲಾಗುತ್ತಿರುವ ಅವಕಾಶವು ಜಿಯೋಫೋನ್ ಬಳಸುತ್ತಿರುವ ಲಕ್ಷಾಂತರ ಮಂದಿಗೆ ಫೇಸ್‍ಬುಕ್‍ನ ಅತ್ಯುತ್ತಮ ಅನುಭವ ಹೊಂದಬಹುದಾಗಿದೆ'' ಎಂದು ಫೇಸ್‍ಬುಕ್‍ನ ಮೊಬೈಲ್ ಸಹಭಾಗಿತ್ವದ ಉಪಾಧ್ಯಕ್ಷ ಫ್ರಾನ್ಸಿಸ್ಕೋ ವರೇಲಾ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Facebook will be available on the JioPhone, India ka smartphone. This new version of the Facebook app is built specially for Jio KaiOS, a web based operating system designed for JioPhone

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ