ಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ, ಜಿಎಸ್ ಟಿ ಮಿತಿಯಲ್ಲಿ ಏರಿಕೆ: ಜೇಟ್ಲಿ

ನವದೆಹಲಿ, ಜನವರಿ 10: ಸಣ್ಣ ವ್ಯಾಪಾರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಎಸ್ ಟಿ ಕೌನ್ಸಿಲ್ ನಿಂದ ಸಂಯೋಜನಾ ಯೋಜನೆ ಅಡಿಯಲ್ಲಿ ವಾರ್ಷಿಕ ವಹಿವಾಟಿನ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಗುರುವಾರ ಹೇಳಿದ್ದಾರೆ.

ಈಶಾನ್ಯ ಭಾರತದ ಭಾಗಗಳಲ್ಲಿ ಜಿಎಸ್ ಟಿಯ ಈಗಿರುವ ವಾರ್ಷಿಕ ಮಿತಿ 10 ಲಕ್ಷ ರುಪಾಯಿಯನ್ನು 20 ಲಕ್ಷಕ್ಕೆ ಹಾಗೂ ದೇಶದ ಉಳಿದೆಡೆ ಇರುವ 20 ಲಕ್ಷದ ಮಿತಿಯನ್ನು 40 ಲಕ್ಷಕ್ಕೆ ಏರಿಸಲಾಗಿದೆ. ಅದೇ ರೀತಿ ಸಂಯೋಜನಾ ಯೊಜನೆ ಪಡೆಯಲು ಇರುವ ಮಿತಿಯನ್ನು ಏಪ್ರಿಲ್ 1, 2019ರಿಂದ 1ರಿಂದ 1.5 ಕೋಟಿಗೆ ಏರಿಸಲಾಗಿದೆ.

ಸದ್ಯಕ್ಕೆ ಈ ಯೋಜನೆ ಅಡಿಯಲ್ಲಿ ಮೂರು ತಿಂಗಳಿಗೆ ಒಮ್ಮೆ ತೆರಿಗೆ ಪಾವತಿಸುತ್ತಿದ್ದು, ವರ್ಷಕ್ಕೆ ಒಮ್ಮೆ ರಿಟರ್ನ್ಸ್ ದಾಖಲಿಸುತ್ತಿದ್ದಾರೆ. ಕೌನ್ಸಿಲ್ ನಿಂದ ಸಂಯೋಜನಾ ಯೋಜನೆಗೆ ಸೇವಾ ವಲಯಕ್ಕೆ ಒಪ್ಪಿಗೆ ಸಿಕ್ಕಿದೆ ಎಂದಿದ್ದಾರೆ.

Exemption limit for GST hiked to 40 lakh from 20 lakh, Jaitley

ಇನ್ನು ಕೇರಳ ರಾಜ್ಯವು ಅಂತರರಾಜ್ಯ ವ್ಯಾಪಾರಕ್ಕೆ ಅರ್ಹವಾಗಿದೆ. ಗರಿಷ್ಠ ಒಂದು ಪರ್ಸೆಂಟ್ ಸೆಸ್ ಅನ್ನು ಎರಡು ವರ್ಷಗಳ ಅವಧಿಗೆ ವಿಧಿಸಬಹುದು ಎಂದಿದ್ದಾರೆ.

ಲಾಟರಿ ಹಾಗೂ ರಿಯಲ್ ಎಸ್ಟೇಟ್ ಅನ್ನು ಜಿಎಸ್ ಟಿ ಅಡಿ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಭಿನ್ನವಾದ ಅಭಿಪ್ರಾಯ ವ್ಯಕ್ತವಾಗಿದ್ದರಿಂದ ಏಳು ಮಂದಿ ಸಚಿವರ ಸಮಿತಿ ರಚನೆ ಮಾಡಲು ತೀರ್ಮಾನಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+