500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 10: 500, 1000 ರುಪಾಯಿ ನೋಟುಗಳನ್ನು ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ ಗಳಲ್ಲಿ ಬದಲಾವನೆ ಮಾಡಿಕೊಳ್ಳುವುದಕ್ಕೆ ಈ ದಿನ ಪ್ರಕ್ರಿಯೆ ಶುರುವಾಗಿದೆ. ಮಂಗಳವಾರ ರಾತ್ರಿ 500, 1000 ರುಪಾಯಿ ನೋಟುಗಳ ಚಲಾವಣೆ ರದ್ದು ಮಾಡಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು.

ಅಂದಹಾಗೆ, ಇವತ್ತು ಬ್ಯಾಂಕೋ ಅಥವಾ ಅಂಚೆ ಕಚೇರಿಗೋ ನೋಟು ಬದಲಾವಣೆಗೆ ತೆರಳಿದರೆ ಯಾವ ಅಂಶಗಳು ಗಮನದಲ್ಲಿರಬೇಕು ಎಂಬುದನ್ನು ಇಲ್ಲಿ ಕೊಡಲಾಗಿದೆ.

ಇಂದು ನೋಟು ಬದಲಾವಣೆಗೆ ಮೊದಲ ದಿನ. ಆದ್ದರಿಂದ ಬ್ಯಾಂಕ್ ನಲ್ಲಿ ಕೆಲ ಗೊಂದಲಗಳು ಕಂಡುಬರಬಹುದು. ಇವತ್ತು ನಿಮ್ಮ ವ್ಯವಹಾರ ಪೂರ್ತಿ ಆಗಲಿಲ್ಲ ಅಂದರೆ ಸಮಾಧಾನವಾಗಿರಿ, ಚಿಂತೆ ಮಾಡಬೇಡಿ. ಏಕೆಂದರೆ ಡಿಸೆಂಬರ್ 30ರವರೆಗೆ ನಿಮಗೆ ಸಮಯ ಇದೆ. [500, 1000 ರುಪಾಯಿ ನೋಟು ರದ್ದು ನಿರ್ಧಾರದ ಹಿಂದಿರುವ ವ್ಯಕ್ತಿ ಯಾರು?]

ನೋಟು ಬದಲಾವಣೆಗೆ ತೆರಳಿದ ಸಂದರ್ಭದಲ್ಲಿ ನಿಮಗೆ ಗೊತ್ತಿರಬೇಕಾದ ಸಂಗತಿಗಳು

ನೋಟು ಬದಲಾವಣೆಗೆ ತೆರಳಿದ ಸಂದರ್ಭದಲ್ಲಿ ನಿಮಗೆ ಗೊತ್ತಿರಬೇಕಾದ ಸಂಗತಿಗಳು

ಆದಾಯ ತೆರಿಗೆ ಅಧಿಕಾರಿಗಳು ಎಲ್ಲ ವ್ಯವಹಾರಗಳನ್ನು ಗಮನಿಸುವುದರಿಂದ ನಿಮ್ಮ ಆದಾಯ ಮೂಲವನ್ನು ಸಾಬೀತು ಪಡಿಸುವ ದಾಖಲೆ ತೆಗೆದುಕೊಂಡು ಹೋಗಿ.

ನಿಮ್ಮ ಗುರುತಿನ ಚೀಟಿಯೊಂದು ಜತೆಗಿರಲಿ

ನಿಮ್ಮ ಗುರುತಿನ ಚೀಟಿಯೊಂದು ಜತೆಗಿರಲಿ

ನಿಮ್ಮ ಗುರುತಿನ ಚೀಟಿಯೊಂದು ಜತೆಗಿರಲಿ. ಆಧಾರ್, ಡ್ರೈವಿಂಗ್ ಲೈಸೆನ್ಸ್, ಮತದಾರರ ಗುರುತಿನ ಚೀಟಿ, ಪಾಸ್ ಪೋರ್ಟ್, ನರೇಗಾ ಪಾನ್ ಕಾರ್ಡ್, ಸರಕಾರದ ಯಾವುದೇ ಇಲಾಖೆ ಹಾಗೂ ಸಾರ್ವಜನಿಕ ಉದ್ದಿಮೆಯಿಂದ ನೌಕರರಿಗೆ ವಿತರಿಸಿದ ಗುರುತಿನ ಚೀಟಿ ಈ ಪೈಕಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಿ.

ನ.18ರಿಂದ ಎಟಿಎಂನಿಂದ ಡ್ರಾ ಮಾಡೋಕೆ ಸಾಧ್ಯ

ನ.18ರಿಂದ ಎಟಿಎಂನಿಂದ ಡ್ರಾ ಮಾಡೋಕೆ ಸಾಧ್ಯ

ನವೆಂಬರ್ 11ರಿಂದ ಎಟಿಎಂನಲ್ಲೇ ಹಣ ಡ್ರಾ ಮಾಡಬಹುದು. ಅಲ್ಲಿ ಕೆಲವು ಸಮಸ್ಯೆಗಳಿವೆ. ಅವುಗಳನ್ನು ಬ್ಯಾಂಕ್ ಗಳು ಸರಿಪಡಿಸಬೇಕು. ನವೆಂಬರ್ 18ರವರೆಗೆ ಗರಿಷ್ಠ ಎರಡು ಸಾವಿರ ರುಪಾಯಿ ಮಾತ್ರ ಎಟಿಎಂನಿಂದ ಡ್ರಾ ಮಾಡೋಕೆ ಸಾಧ್ಯ. ಆ ನಂತರ ಆ ಮಿತಿಯು ನಾಲ್ಕು ಸಾವಿರಕ್ಕೆ ಏರಿಕೆಯಾಗುತ್ತದೆ. ಎಟಿಎಂನಲ್ಲೇ ನೀವು ಹಣವನ್ನು ಡಿಪಾಸಿಟ್ ಕೂಡ ಮಾಡಬಹುದು.

ನೀವೇ ಖುದ್ದಾಗಿ ಬ್ರ್ಯಾಂಚ್ ಗೆ ಹೋಗೋದು ಆದ್ಯತೆಯಾಗಿರಲಿ

ನೀವೇ ಖುದ್ದಾಗಿ ಬ್ರ್ಯಾಂಚ್ ಗೆ ಹೋಗೋದು ಆದ್ಯತೆಯಾಗಿರಲಿ

ನೀವೇ ಖುದ್ದಾಗಿ ಬ್ರ್ಯಾಂಚ್ ಗೆ ಹೋಗೋದು ಆದ್ಯತೆಯಾಗಿರಲಿ. ಒಂದು ವೇಳೆ ಆಗಲಿಲ್ಲ ಅಂದರೆ ನಿಮ್ಮ ಪರವಾಗಿ ಯಾರನ್ನಾದಾರೂ ಕಳಿಸಿ. ಅವರಿಗೆ ದೃಢೀಕರಣ ಪತ್ರವೊಂದನ್ನು ನೀಡಿ. ಆ ಪತ್ರದ ಜೊತೆಗೆ ನಿಮ್ಮ ಪ್ರತಿನಿಧಿ ಸಹ ತಮ್ಮದೊಂದು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಬೇಕು.

ನೀವೇ ಬ್ಯಾಂಕ್ ಅಥವಾ ಶಾಖೆಗೆ ಹೋಗುವುದು ಉತ್ತಮ

ನೀವೇ ಬ್ಯಾಂಕ್ ಅಥವಾ ಶಾಖೆಗೆ ಹೋಗುವುದು ಉತ್ತಮ

ನೀವೇ ಬ್ಯಾಂಕ್ ಅಥವಾ ಶಾಖೆಗೆ ಹೋಗುವುದು ಉತ್ತಮ. ನೀವು ಬೇರೆ ಬ್ಯಾಂಕ್ ಗೆ ಹೋಗ್ತೀರಿ ಅನ್ನೋದಾದರೆ ನಿಮ್ಮ ಮೊತ್ತ ನಾಲ್ಕು ಸಾವಿರವನ್ನು ಮೀರಿದ್ದರೆ ಹಾಗೂ ಎಲೆಕ್ಟ್ರಾನಿಕ್ ಟ್ರಾನ್ಸ್ ಫರ್ ಮಾಡಬೇಕಿದ್ದರೆ ನಿಮ್ಮ ಬ್ಯಾಂಕ್ ಖಾತೆ ವಿವರ, ಗುರುತಿನ ಚೀಟಿ ತೆಗೆದುಕೊಂಡು ಹೋಗಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When you to to the bank or post office today to get your notes exchanged, here are a couple of things that you should bear in mind.
Please Wait while comments are loading...