ಇಂಡಿಯಾ ಬುಲ್ಸ್ ಹೌಸಿಂಗ್ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ
ಮುಂಬೈ, ಫೆಬ್ರವರಿ 21: ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮತ್ತು ದೆಹಲಿಯಲ್ಲಿರುವ ಇಂಡಿಯಾ ಬುಲ್ಸ್ ಫೈನಾನ್ಸ್ ಸೆಂಟರ್‌ನ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಾಯ(ಇಡಿ) ದಾಳಿ ನಡೆಸಿದೆ.
ಏಪ್ರಿಲ್ 2021ರಲ್ಲಿ ಇಂಡಿಯಾ ಬುಲ್ಸ್ ಫೈನಾನ್ಸ್ ಕಂಪನಿ ಮತ್ತು ಸಂಸ್ಥೆಯ ಪ್ರವರ್ತಕ ಸಮೀರ್ ಗೆಹ್ಲಾಟ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿಕೊಂಡಿತ್ತು.ಈ ತನಿಖೆಯ ಮುಂದುವರೆದ ಭಾಗವಾಗಿ ಇಂದು ವಿವಿಧೆಡೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಪುಣೆ ಮೂಲದ ಉದ್ಯಮಿಯೊಬ್ಬರ ಹೇಳಿಕೆಯನ್ನು ಇಡಿ ಈ ಹಿಂದೆ ದಾಖಲಿಸಿಕೊಂಡಿತ್ತು. ಸೋಮವಾರದ ದಾಳಿಯನ್ನು ಯೋಜಿಸಲು ಇಡಿ ಅಧಿಕಾರಿಗಳು ಭಾನುವಾರ ಸಭೆ ನಡೆಸಿದರು. ಕೆಲವು ದೋಷಾರೋಪಣೆ ದಾಖಲೆಗಳನ್ನು ಮರುಪಡೆಯಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

Recommended Video
ಈ ಹಿಂದೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕಂಪನಿ ಮತ್ತು ಅದರ ಪ್ರವರ್ತಕರ ವಿರುದ್ಧ ಪ್ರಕರಣ ದಾಖಲಾಗಿತ್ತು. ರಿಯಲ್ ಎಸ್ಟೇಟ್ ಕಂಪನಿಯು ಮೊದಲು ಇಂಡಿಯಾ ಬುಲ್ಸ್‌ನಿಂದ ಸಾಲ ಪಡೆದು ಇಂಡಿಯಾ ಬುಲ್ಸ್ ಹೌಸಿಂಗ್ ಷೇರುಗಳಲ್ಲಿ ಹೂಡಿಕೆ ಮಾಡಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿತ್ತು. ಕಂಪನಿಯು ಷೇರು ಮೌಲ್ಯವನ್ನು ಹೆಚ್ಚಿಸಿತು ಮತ್ತು ಹಣವನ್ನು ನಂತರ ಇತರ ಘಟಕಗಳಿಗೆ ವರ್ಗಾಯಿಸಲಾಯಿತು. ಕಂಪನಿಯ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications