ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಮುಷ್ಕರಕ್ಕೆ ವೇದಿಕೆ ಸಿದ್ಧ: 3 ದಿನ ಹಣ ವಹಿವಾಟಿಲ್ಲ

By Madhusoodhan
|
Google Oneindia Kannada News

ನವದೆಹಲಿ, ಮೇ 18: ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದ ಪ್ರಸ್ತಾವನೆಯನ್ನು ಖಂಡಿಸಿ 5 ಸಹವರ್ತಿ ಬ್ಯಾಂಕ್ ಗಳು ಶುಕ್ರವಾರ ಮೇ. 20 ರಂದು ದೇಶಾದ್ಯಂತ ಮುಷ್ಕರ ನಡೆಸಲಿವೆ.

ತನ್ನ ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಹೊಸದಾಗಿ ಸ್ಥಾಪಿತವಾದ ಭಾರತೀಯ ಮಹಿಳಾ ಬ್ಯಾಂಕನ್ನು ತನ್ನಲ್ಲಿ ವಿಲೀನಗೊಳಿಸಬೇಕು ಎಂಬ ಕೋರಿಕೆಯನ್ನು ಕೇಂದ್ರ ಸರಕಾರದ ಮುಂದೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಇರಿಸಲು ಯೋಜಿಸಿದ್ದು ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ.[ಎಸ್ ಬಿಐನಲ್ಲಿ 2200 ಹುದ್ದೆಗಳಿವೆ ಈಗಲೇ ಅರ್ಜಿ ಹಾಕಿ]

bank

ಇದನ್ನು ವಿರೋಧಿಸಿ ಸಾಂಕೇತಿಕವಾಗಿ ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘವು ಮೇ 20ರಂದು ಮುಷ್ಕರ ನಡೆಸಲಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಎಚ್‌. ಅರುಣಾಚಲಂ ತಿಳಿಸಿದ್ದಾರೆ.[ಎಟಿಎಂ ಪಿನ್ ಮರೆತುಹೋಗಿದೆಯಾ? ಮೊಬೈಲ್ ಒಟಿಪಿ ನೋಡಿ]

ಸ್ಟೇಟ್‌ ಬ್ಯಾಂಕ್‌ ಆಫ್ ಬಿಕಾನೇರ್‌ ಮತ್ತು ಜೈಪುರ, ಸ್ಟೇಟ್‌ ಬ್ಯಾಂಕ್‌ ಆಫ್ ಹೈದರಾಬಾದ್‌, ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರು, ಸ್ಟೇಟ್‌ ಬ್ಯಾಂಕ್‌ ಆಫ್ ಪಟಿಯಾಲಾ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್ ತಿರುವಾಂಕೂರು- ಇವುಗಳನ್ನು ತನ್ನೊಳಗೆ ವಿಲೀನ ಮಾಡಬೇಕು. ಅಂತೆಯೇ ಮಹಿಳಾ ಬ್ಯಾಂಕನ್ನೂ ವಿಲೀನಗೊಳಿಸಲು ತಾತ್ವಿಕ ಒಪ್ಪಿಗೆ ನೀಡಬೇಕುಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದೆ ಎಸ್ ಬಿಐ ಇಡಲು ಮುಂದಾಗಿದೆ.[ಜುಲೈ 29 ಕ್ಕೆ ಮತ್ತೊಂದು ಬ್ಯಾಂಕ್ ಮುಷ್ಕರ]

ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕರೆ ಸದ್ಯ 28 ಲಕ್ಷ ಕೋಟಿ ರೂ.ನಷ್ಟು ಇರುವ ಎಸ್‌ಬಿಐನ ಬ್ಯಾಲೆನ್ಸ್‌ ಶೀಟ್‌ (ಜಮಾಖರ್ಚು ಪಟ್ಟಿ) 37 ಲಕ್ಷ ಕೋಟಿ ರೂ.ಗೆ ಏರಲಿದೆ. ಇನ್ನೊಂದು ಮಹತ್ವದ ಅಂಶ ಎಂದರೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಗಿ ಬದಲಾಗಲಿದೆ.

ಮೂರು ದಿನ ಬ್ಯಾಂಕ್ ಇಲ್ಲ: ಶುಕ್ರವಾರ ಮೇ 20 ರಂದು ಮುಷ್ಕರ, ಮೇ 21 ಶನಿವಾರ ಬುದ್ಧ ಪೂರ್ಣಿಮಾ, ಮೇ 22 ಭಾನುವಾರ . ಹಾಗಾಗಿ ಅಲ್ಲಿಗೆ ಮೂರು ದಿನ ಮೇಲಿನ ಬ್ಯಾಂಕ್ ವಹಿವಾಟುಗಳು ಸ್ಥಗಿತವಾಗುತ್ತದೆ.

English summary
Soon after State Bank of India announced its merger plans - employees of 5 associate banks of the SBI including Stare Bank Of Mysuru called for a strike on May 20, 2016.SBI management's arrogant and high handedness approach has forced employees of all five associate banks of SBI, affiliated to All India Bank Employees Association, to protest against forceful closure and take over of associate banks by SBI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X