High-Speed Internet: ಇಂಟರ್‌ನೆಟ್ ಸ್ಪೀಡ್ ಬಗ್ಗೆ ಇನ್ನುಮುಂದೆ ಡೋಂಟ್ ವರಿ!
ಸರಿಯಾಗಿ ಇಂಟರ್ನೆಟ್ ಸಿಗ್ತಾ ಇಲ್ವಾ? ಎಲ್ಲೇ ಹೋದರೂ ನೆಟ್‌ವರ್ಕ್ ಸಮಸ್ಯೆ ಆಗುತ್ತಿದೆಯಾ? ಸಿಮ್ ಕಾರ್ಡ್ ಬದಲಾವಣೆ ಮಾಡಿದ್ರೂ ಪ್ರಯೋಜನ ಆಗ್ತಾ ಇಲ್ವಾ? ಇದಕ್ಕೆಲ್ಲಾ ಪರಿಹಾರ ಸಿಗುವ ಸಮಯ ಈಗ ಬಂದೇ ಬಿಟ್ಟಿದೆ. ಅಂದಹಾಗೆ, ಭಾರತದಲ್ಲಿ ಇನ್ನುಮುಂದೆ ಇಂಟರ್‌ನೆಟ್ ರಾಕೆಟ್ ಸ್ಪೀಡ್‌ನಲ್ಲಿ ಸಿಗುವ ಎಲ್ಲಾ ಲಕ್ಷಣ ಕಂಡುಬಂದಿದ್ದು. ಭಾರತೀಯರಿಗೆ ಭರ್ಜರಿಯಾದ ಸುದ್ದಿ ಹೊರಬಿದ್ದಿದೆ.
ಹೌದು, ಆಧುನಿಕ ಕಾಲದಲ್ಲಿ ಇಂಟರ್‌ನೆಟ್ ಇಲ್ಲದೆ ಏನೂ ಆಗೋದೆ ಇಲ್ಲ ಬಿಡಿ. ಆದರೂ ಈಗಿನ ಸಮಯದಲ್ಲಿ ಸರಿಯಾದ ಇಂಟರ್‌ನೆಟ್ ಸಿಗದೆ ಜನರು ಪರಾಡುತ್ತಿದ್ದಾರೆ. ಅಲ್ಲದೆ ಈ ಸಮಯದಲ್ಲಿ ಟೆಲಿಕಾಂ ಸಂಸ್ಥೆಗಳ ವಿರುದ್ಧ ಕೂಡ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಡುವ ಕಾಸಿಗೆ ಸರಿಯಾಗಿ ಸೇವೆ ಸಿಗುತ್ತಿಲ್ಲ, ಇಂಟರ್‌ನೆಟ್ ಬಿಡಿ ನೆಟ್‌ವರ್ಕ್ ಕೂಡ ಸರಿಯಾಗಿ ಇಲ್ಲ ಎಂಬ ಆಕ್ರೋಶ ಮೊಳಗುತ್ತಿದೆ. ಇಂತಹ ಸಮಯದಲ್ಲೇ, ಭರ್ಜರಿ ಸುದ್ದಿ ಇದೀಗ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಸಿಕ್ಕಿದೆ!

ಭರ್ಜರಿ ಇಂಟರ್‌ನೆಟ್ ಸ್ಪೀಡ್ ಗ್ಯಾರಂಟಿ!
ಅಂದಹಾಗೆ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಗಳ ಪೈಕಿ ಒಂದಾಗಿರುವ ಭಾರತಿ ಏರ್ಟೆಲ್ ಹಾಗೂ ಜಿಯೋ ಸಂಸ್ಥೆಗಳು ಇದೀಗ ಅತಿ ವೇಗದ ಇಂಟರ್‌ನೆಟ್ ಸೇವೆ ನೀಡಲು ಮಹತ್ವದ ನಿರ್ಧಾರಕ್ಕೆ ಬಂದಿವೆ. ಅಮೆರಿಕದ ಉದ್ಯಮಿ ಎಲಾನ್ ಮಸ್ಕ್ ಅವರ ಜೊತೆಗೆ ಪ್ರಮುಖವಾದ ಒಪ್ಪಂದ ಒಂದನ್ನು ಮಾಡಿಕೊಂಡಿರುವ ಎರಡೂ ಸಂಸ್ಥೆಗಳು ಸಹಿ ಹಾಕಿವೆ. ಭಾರತದಲ್ಲಿನ ಇಂಟರ್‌ನೆಟ್ ಸೇವೆಯನ್ನು ಮತ್ತಷ್ಟು ಅಭಿವೃದ್ಧಿ ಮಾಡಲು ಈ ನಿರ್ಧಾರ ಬೆಂಬಲ ನೀಡುವ ನಿರೀಕ್ಷೆ ಇದೆ. ಸ್ಟಾರ್‌ಲಿಂಕ್ ಜೊತೆಗೆ ಮಹತ್ವದ ಒಪ್ಪಂದ ಮಾಡಿಕೊಂಡಿರುವುದು ಗಮನ ಸೆಳೆದಿದೆ.
ಹಳ್ಳಿಗಳಲ್ಲೂ ಸಿಗಲಿದೆ ಹೈಸ್ಪೀಡ್ ಇಂಟರ್‌ನೆಟ್!
ಜಾಗತಿಕ ಮಟ್ಟದಲ್ಲಿ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ದೊಡ್ಡ ಸೌಂಡ್ ಮಾಡುತ್ತಿದ್ದು, ಭಾರತಕ್ಕೆ ಕೂಡ ಎಂಟ್ರಿ ಕೊಡುತ್ತಿದೆ. ಇದೇ ಸಮಯದಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿಯನ್ನ ಹಾಕಿರುವ ಜಿಯೋ & ಏರ್‌ಟೆಲ್ ತಮ್ಮ ಗ್ರಾಹಕರಿಗೆ ಭರ್ಜರಿ ಸುದ್ದಿ ನೀಡಿವೆ. ಒಂದು ಕಡೆ ನಗರ ಪ್ರದೇಶದಲ್ಲಿ ಅತಿ ವೇಗದ ಇಂಟರ್‌ನೆಟ್ ಸೇವೆ ಸಿಗುತ್ತಿದ್ದರೆ, ಇನ್ನೊಂದು ಕಡೆ ಹಳ್ಳಿ ಸೇರಿದಂತೆ ಕುಗ್ರಾಮಗಳಲ್ಲಿ ಇಂಟರ್‌ನೆಟ್ ಸೇವೆ ತುಂಬಾ ನಿಧಾನಗತಿ ತಲುಪಿದೆ. ಹೀಗಿದ್ದಾಗ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಇದೆಲ್ಲ ಸರಿ ಮಾಡಲು ಇದೀಗ ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಸಹಾಯ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಮೊಬೈಲ್ ಬಳಕೆದಾರರು ಕೂಡ ಹೊಸ ಅನುಭವಕ್ಕೆ ತಯಾರಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಕಡೆಯೂ ಉತ್ತಮ ಇಂಟರ್‌ನೆಟ್ ಸೌಲಭ್ಯವು ಸಿಗುವ ನಿರೀಕ್ಷೆ ಇದೆ.












Click it and Unblock the Notifications