ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಿಯಾದ ಮಾಹಿತಿ ಕೊಡದಿದ್ದರೆ ಟ್ವಿಟ್ಟರ್ ಖರೀದಿಸುವುದಿಲ್ಲ: ಎಲಾನ್ ಮಸ್ಕ್ ಎಚ್ಚರಿಕೆ

|
Google Oneindia Kannada News

ನವದೆಹಲಿ, ಜೂನ್ 6: ಪಟ್ಟು ಹಿಡಿದು ಟ್ವಿಟ್ಟರ್ ಖರೀದಿಗೆ ಮುಂದಾಗಿದ್ದ ಎಲಾನ್ ಮಸ್ಕ್ ಅದೇ ಉಸುರಿನಲ್ಲಿ ಹಠಕ್ಕೆ ಬಿದ್ದವರಂತೆ ಮಾರಾಟ ಒಪ್ಪಂದವನ್ನೇ ಮುರಿಯುವ ಮಾತುಗಳನ್ನು ಆಡುತ್ತಿದ್ದಾರೆ. ಟ್ವಿಟ್ಟರ್‌ನ ಸ್ಪ್ಯಾಮ್ ಬೋಟ್‌ಗಳ ಬಗ್ಗೆ ತಮಗೆ ಸರಿಯಾದ ಮಾಹಿತಿ ನೀಡಲಾಗುತ್ತಿಲ್ಲ ಎಂಬುದು ಮಸ್ಕ್ ಆಕ್ರೋಶ.

ಸ್ಪ್ಯಾಮ್ ಬೋಟ್ ಅಕೌಂಟ್‌ಗಳ ಬಗ್ಗೆ ಮಾಹಿತಿ ಕೊಡಲು ಕಂಪನಿ ನಿರಾಕರಿಸುತ್ತಿದೆ. ಒಂದು ವೇಳೆ ಆ ಮಾಹಿತಿ ತಮಗೆ ಕೊಡದೇ ಹೋದರೆ ಟ್ವಿಟ್ಟರ್ ಖರೀದಿ ಒಪ್ಪಂದಕ್ಕೇ ತಿಲಾಂಜಲಿ ಹಾಡಲು ಎಲಾನ್ ಮಸ್ಕ್ ಸಿದ್ಧವಾಗಿದ್ದಾರೆ.

ನಕಲಿ ಖಾತೆ ಬಗ್ಗೆ ಸ್ಪಷ್ಟಪಡಿಸುವವರೆಗೂ ಟ್ವಿಟ್ಟರ್‌ ಕಂಪನಿ ಖರೀದಿಸುವುದಿಲ್ಲನಕಲಿ ಖಾತೆ ಬಗ್ಗೆ ಸ್ಪಷ್ಟಪಡಿಸುವವರೆಗೂ ಟ್ವಿಟ್ಟರ್‌ ಕಂಪನಿ ಖರೀದಿಸುವುದಿಲ್ಲ

ಎಲಾನ್ ಮಸ್ಕ್ ಅವರ ಪರ ವಕೀಲರು ಪತ್ರ ಬರೆದು ಈ ವಿಚಾರವನ್ನು ತಿಳಿಸಿದ್ದಾರೆ. ಟ್ವಿಟ್ಟರ್ ಖರೀದಿಸುವ ಆಫರ್ ಮುಂದಿಟ್ಟು ಒಂದು ತಿಂಗಳ ನಂತರ, ಮೇ ೯ರಿಂದಲೂ ಸ್ಪಾಮ್ ಬೋಟ್ ಖಾತೆಗಳ ಬಗ್ಗೆ ಎಲಾನ್ ಮಸ್ಕ್ ಪದೇ ಪದೇ ಮಾಹಿತಿ ಕೇಳುತ್ತಲೇ ಬಂದಿದ್ದಾರೆ. ಆದರೆ ಕಂಪನಿಯ ಪರೀಕ್ಷಾ ವಿಧಾನಗಳ ವಿವರವನ್ನು ಮಾತ್ರ ನೀಡುವುದಾಗಿ ಟ್ವಿಟ್ಟರ್ ಹೇಳುತ್ತಿದೆ ಎಂದು ಈ ಪತ್ರದಲ್ಲಿ ವಕೀಲರು ಆರೋಪಿಸಿದ್ದಾರೆ.

Elon Musk Threatens To End Twitter Deal If Details Not Served

ಟ್ವಿಟ್ಟರ್‌ನಲ್ಲಿರುವ 22.9 ಕೋಟಿ ಖಾತೆಗಳ ಪೈಕಿ ಸಾಕಷ್ಟು ಅಕೌಂಟ್‌ಗಳು ನಕಲಿ ಇವೆ. ಇವು ಸ್ಪ್ಯಾಮ್ ಬೋಟ್‌ಗಳಾಗಿವೆ. ಸ್ಪ್ಯಾಮ್ ಬೋಟ್ ಎಂದರೆ ಸ್ವಯಂಚಾಲಿತವಾಗಿ ಆನ್‌ಲೈನ್‌ನಲ್ಲಿ ಸಕ್ರಿಯವಾಗುವ ನಕಲಿ ಖಾತೆಗಳು. ಟ್ವಿಟ್ಟರ್ ಅನ್ನು ಖರೀದಿಸುವ ಮುನ್ನ ಈ ನಕಲಿ ಖಾತೆಗಳ ಬಗ್ಗೆ ತನಗೆ ಮಾಹಿತಿ ಬೇಕೆಂಬುದು ಎಲಾನ್ ಮಸ್ಕ್ ಒತ್ತಾಯವಾಗಿದೆ. ಟ್ವಿಟ್ಟರ್‌ನ ಎಣಿಕೆ ವಿಧಾನವನ್ನು ತನ್ನದೇ ರೀತಿಯಲ್ಲಿ ಪರಿಶೀಲಿಸಲು ಮಸ್ಕ್‌ಗೆ ಈ ಮಾಹಿತಿ ಅಗತ್ಯವಿದೆ ಎಂಬುದು ವಕೀಲರ ವಾದ.

'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ?'ಭಾರತದಲ್ಲಿ ಕಾರು ತಯಾರಿಸಲ್ಲ'- ಎಲಾನ್ ಮಸ್ಕ್ ನಿಷ್ಠುರವಾಗಿ ಹೇಳಿದ್ದು ಯಾಕೆ?

ಏಪ್ರಿಲ್ ತಿಂಗಳಲ್ಲಿ ಟ್ವಿಟ್ಟರ್ ಮಾರಾಟ ಸಮ್ಮತಿ ಒಪ್ಪಂದದ ಪ್ರಕಾರ ಇಲಾನ್ ಮಸ್ಕ್ ಅವರು ಕಂಪನಿಯ ಎಲ್ಲಾ ಮಾಹಿತಿ ಪಡೆಯುವ ಹಕ್ಕು ಹೊಂದಿದ್ದಾರೆ. ಆದರೆ, ಕಂಪನಿ ಸಹಕಾರ ಕೊಡುತ್ತಿಲ್ಲ ಎಂಬುದು ಮಸ್ಕ್ ಭಾವನೆ. ಇದು ಟ್ವಿಟ್ಟರ್ ಸಂಸ್ಥೆ ಆಗಿರುವ ನಿಯಮ ಉಲ್ಲಂಘನೆ ಎಂದು ಮಸ್ಕ್ ಪರ ವಕೀಲರು ಆಪಾದಿಸಿದ್ದಾರೆ.

Elon Musk Threatens To End Twitter Deal If Details Not Served

"ವಿಲೀನ ಒಪ್ಪಂದದಲ್ಲಿ ಟ್ವಿಟ್ಟರ್ ತನ್ನ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ. ಇದರಿಂದಾಗಿ ಈ ವಹಿವಾಟು ರದ್ದು ಮಾಡುವ ಮತ್ತು ವಿಲೀನ ಒಪ್ಪಂದ ರದ್ದು ಮಾಡುವುದೂ ಸೇರಿದಂತೆ ಎಲ್ಲಾ ಹಕ್ಕುಗಳೂ ಎಲಾನ್ ಮಸ್ಕ್ ಅವರಿಗಿದೆ" ಎಂದು ವಕೀಲರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಟೆಸ್ಲಾ, ಸ್ಪೇಸ್‌ಎಕ್ಸ್ ಕಂಪನಿಗಳ ಒಡೆಯನಾಗಿರುವ ಮತ್ತು ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎನಿಸಿರುವ ಎಲಾನ್ ಮಸ್ಕ್ 44 ಬಿಲಿಯನ್ ಯುಎಸ್ ಡಾಲರ್ (3.42 ಲಕ್ಷಕೋಟಿ ರೂಪಾಯಿ) ಹಣಕ್ಕೆ ಟ್ವಿಟ್ಟರ್ ಖರೀದಿಸಲು ಮುಂದಾಗಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಆಗಿರುವ ಒಪ್ಪಂದದ ಪ್ರಕಾರ ಕಂಪನಿ ಮಾರಾಟಕ್ಕೆ ಟ್ವಿಟ್ಟರ್ ಸಮ್ಮತಿಸಿದೆ. ಎಲಾನ್ ಮಸ್ಕ್ ಅಷ್ಟು ಮೊತ್ತದ ಹಣವನ್ನು ಹೇಗೆಲ್ಲಾ ಹೊಂದಿಸುವುದಾಗಿ ವಿವರ ಘೋಷಿಸಿದ್ದಾರೆ. ಇದೀಗ ಹಣ ಹೊಂದಿಸುವ ಮುನ್ನ ಮಸ್ಕ್ ಅವರು ಟ್ವಿಟ್ಟರ್‌ನ ವಾಸ್ತವ ಪರಿಸ್ಥಿತಿ ಸೇರಿದಂತೆ ಕೆಲ ವಿಚಾರಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಮುಂದಡಿ ಇಡಲು ನಿರ್ಧರಿಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಟ್ವಿಟ್ಟರ್‌ನ ಕಾರ್ಯನಿರ್ವಹಣೆ ಬಗ್ಗೆ ಎಲಾನ್ ಮಸ್ಕ್‌ಗೆ ತೃಪ್ತಿ ಇಲ್ಲವೆನ್ನಲಾಗಿದೆ. ಹಾಗೆಯೇ, ಮಸ್ಕ್ ಅವರಿಗೆ ಕಂಪನಿಯನ್ನು ಮಾರಾಟ ಮಾಡಲು ಅನೇಕ ಹಿರಿಯ ಉದ್ಯೋಗಿಗಳಿಗೂ ಇಷ್ಟ ಇಲ್ಲ ಎನ್ನಲಾಗುತ್ತಿದೆ. ಒಲ್ಲದ ಮನಸುಗಳಿಂದ ನಡೆಯುತ್ತಿರುವ ಈ ಮಾರಾಟ ನಿಜಕ್ಕೂ ಕಾರ್ಯಗತವಾಗುತ್ತಾ ನೋಡಬೇಕು.

(ಒನ್ಇಂಡಿಯಾ ಸುದ್ದಿ)

Recommended Video

ವಾಟ್ಸಪ್ಪ್ ಹೊಸ ಫೀಚರ್ಸ್ ನಿಂದ ಡಿಲೀಟ್ ಆಗಿರೋ ಮೆಸೇಜ್ ಗಳನ್ನು ನೋಡೋದು ಹೇಗೆ? | Oneindia Kannada

English summary
Elon Musk is threatening to end his USD 44 billion agreement to buy Twitter, accusing the company of refusing to give him information about its spam bot accounts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X