ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್‌ಗೆ ಈ ವರ್ಷ ಪ್ರತಿದಿನ 2,500 ಕೋಟಿ ರೂ. ನಷ್ಟ?

|
Google Oneindia Kannada News

ನವದೆಹಲಿ, ನವೆಂಬರ್ 23: ಟ್ವಿಟ್ಟರ್ ಖರೀದಿ ಮಾಡಿರುವ ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ಟ್ವಿಟ್ಟರ್‌ನಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಎಲಾನ್‌ ಮಸ್ಕ್‌ ಈಗ ಜಾಗತಿಕವಾಗಿ ಭಾರೀ ಸುದ್ದಿಯಾಗಿದ್ದಾರೆ. ಎಲೆಕ್ಟ್ರಿಕ್ ಕಾರ್ ಕಂಪನಿ ಟೆಸ್ಲಾ ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್‌ಎಕ್ಸ್‌ನ ಸಂಸ್ಥಾಪಕ ಆಗಿರುವ ಮಸ್ಕ್‌ ಕಳೆದ ತಿಂಗಳು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಖರೀದಿಸಿದ್ದಾರೆ.

ಅಂದಿನಿಂದ ಎಲಾನ್‌ ಗಳಿಕೆಯು ವೇಗವಾಗಿ ಹೆಚ್ಚಾಗಬಹುದೆಂದು ಊಹೆಗಳನ್ನು ಮಾಡಲಾಗಿತ್ತು. ಆದರೆ, ಇದು ನಡೆಯುತ್ತಿಲ್ಲ. ವರದಿಗಳ ಪ್ರಕಾರ, ಎಲಾನ್‌ ಮಸ್ಕ್‌ ಈ ವರ್ಷ ಪ್ರತಿದಿನ ಸುಮಾರು 2,500 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಇದರಿಂದಾಗಿ ಎಲಾನ್‌ ಮಸ್ಕ್‌ ಸಂಪತ್ತಿನಲ್ಲಿ ಕುಸಿತ ಕಂಡು ಬಂದಿದೆ.

ಟ್ವಿಟ್ಟರ್ ಬ್ಲೂ ಟಿಕ್‌ ಮಾಸಿಕ ಚಂದಾದಾರಿಕೆ ಆರಂಭ; ಭಾರತದಲ್ಲಿ ಯಾವಾಗ?ಟ್ವಿಟ್ಟರ್ ಬ್ಲೂ ಟಿಕ್‌ ಮಾಸಿಕ ಚಂದಾದಾರಿಕೆ ಆರಂಭ; ಭಾರತದಲ್ಲಿ ಯಾವಾಗ?

ಬ್ಲೂಮ್‌ಬರ್ಗ್ ಇಂಡೆಕ್ಸ್‌ನ ಹೊಸದಾಗಿ ಬಿಡುಗಡೆಯಾದ ವರದಿಯ ಪ್ರಕಾರ, ಎಲಾನ್ ಈ ವರ್ಷ ಇಲ್ಲಿಯವರೆಗೆ ಒಟ್ಟು 8 ಲಕ್ಷ ಕೋಟಿ ನಷ್ಟವನ್ನು ಅನುಭವಿಸಿದ್ದಾರೆ. ಇದು ಒಟ್ಟು ಆಸ್ತಿಯಲ್ಲಿ ಸುಮಾರು ಶೇ 37 ಕುಸಿತವಾಗಿದೆ. ಬ್ಲೂಮ್‌ಬರ್ಗ್ ಸೂಚ್ಯಂಕವು ವಿಶ್ವದ ಶ್ರೀಮಂತ ವ್ಯಕ್ತಿಗಳ ದೈನಂದಿನ ಶ್ರೇಯಾಂಕಗಳನ್ನು ಪ್ರಸ್ತುತಪಡಿಸುವ ಜಾಗತಿಕ ಪಟ್ಟಿಯಾಗಿದೆ.

Elon Musk is Losing Rs 2500 Crores Every Day this Year

ನಷ್ಟಕ್ಕೆ ಮುಖ್ಯ ಕಾರಣವೇನು?

ವರದಿಯ ಪ್ರಕಾರ, ಟೆಸ್ಲಾ ಷೇರುಗಳ ಕುಸಿತದಿಂದಾಗಿ ಎಲಾನ್‌ ಮಸ್ಕ್‌ ಭಾರೀ ನಷ್ಟವನ್ನು ಅನುಭವಿಸುತ್ತಿದ್ದಾರೆ. ಟೆಸ್ಲಾದ ಅನೇಕ ಎಲೆಕ್ಟ್ರಿಕ್ ವಾಹನಗಳಲ್ಲಿನ ದೋಷವೂ ಇದಕ್ಕೆ ಕಾರಣವಾಗಿದ್ದು, ಕಂಪನಿಯು ಅವುಗಳನ್ನು ಹಿಂತೆಗೆದುಕೊಳ್ಳಬೇಕಾಗುತ್ತದೆ. ಟೆಸ್ಲಾದ ಮಾರುಕಟ್ಟೆ ಮೌಲ್ಯವು 17 ತಿಂಗಳುಗಳಲ್ಲಿ ಅರ್ಧದಷ್ಟು ಕಡಿಮೆಯಾಗಿದೆ. ಇದಲ್ಲದೆ, ಎಲಾನ್‌ ಅವರು ಆಗಾಗ್ಗೆ ವಿವಾದಾತ್ಮಕ ಹೇಳಿಕೆಗಳು ಮತ್ತು ಟ್ವಿಟರ್ ಖರೀದಿಸಿದ ನಂತರ ಮಾರುಕಟ್ಟೆದಾರರು ಹಿಂದೆ ಸರಿಯುವುದು ಸಹ ಅವರ ನಷ್ಟಕ್ಕೆ ಕಾರಣವಾಗಿದೆ. ಟ್ವಿಟ್ಟರ್ $ 44 ಶತಕೋಟಿಗೆ ಖರೀದಿಸುವುದು ಎಲಾನ್‌ಗೆ ಲಾಭದಾಯಕ ವ್ಯವಹಾರವೆಂದು ಸಾಬೀತಾಗಿಲ್ಲ.

Elon Musk is Losing Rs 2500 Crores Every Day this Year

ಎಲಾನ್ ಪ್ರಸ್ತುತ ನಿವ್ವಳ ಮೌಲ್ಯ ಎಷ್ಟು?

ಬ್ಲೂಮ್‌ಬರ್ಗ್ ಸೂಚ್ಯಂಕದ ಪ್ರಕಾರ, ನವೆಂಬರ್ 22, 2022ರಂದು, ಎಲಾನ್ ಮಸ್ಕ್‌ ಅವರ ಒಟ್ಟು ಆಸ್ತಿ ಮೌಲ್ಯವು $ 170 ಬಿಲಿಯನ್ ಸಂಪತ್ತು ಹೊಂದಿದ್ದಾರೆ ಅಂದರೆ ಇದು ಭಾರತೀಯ ಕರೆನ್ಸಿ ಪ್ರಕಾರ, 3.88 ಲಕ್ಷ ಕೋಟಿ ರೂಪಾಯಿ ಸಂಪತ್ತನ್ನು ಟ್ವಿಟ್ಟರ್ ಖರೀದಿಸಿರುವ ಮಾಲೀಕ ಎಲಾನ್‌ ಮಸ್ಕ್‌ ಹೊಂದಿದ್ದಾರೆ.

English summary
According to the Billionaires Index, Tesla CEO Elon Musk's fortune will have dropped by more than 37 per cent, or $101 billion, by 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X