• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಟ್‌ಕಾಯಿನ್‌ಗೆ ಮಾನ್ಯತೆ, ಹೊಸ ಇತಿಹಾಸ ನಿರ್ಮಿಸಿದ ಎಲ್ ಸಾಲ್ವಡಾರ್

By Dw News
|

ಎಲ್ ಸಾಲ್ವಡಾರ್, ಜೂನ್ 09: ಜಾಗತಿಕವಾಗಿ ಡಿಜಿಟಲ್ ದುಡ್ಡು ಎಷ್ಟೇ ಕ್ರೇಜ್ ಹುಟ್ಟುಹಾಕಿದ್ದರೂ ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ದೇಶದಲ್ಲಿ ಕಾನೂನಾತ್ಮಕ ಮಾನ್ಯತೆ ಸಿಕ್ಕಿರಲಿಲ್ಲ. ಆದರೆ, ಮಧ್ಯ ಅಮೆರಿಕದ ಪುಟ್ಟ ರಾಷ್ಟ್ರ ಮೊಟ್ಟ ಮೊದಲ ಬಾರಿಗೆ ಡಿಜಿಟಲ್ ದುಡ್ಡೊಂದಕ್ಕೆ ಅಧಿಕೃತ ಕರೆನ್ಸಿ, ಚಲಾವಣೆ ಹಕ್ಕು ನೀಡಿ ಇತಿಹಾಸ ನಿರ್ಮಿಸಿದೆ."

ಈ ಮೂಲಕ ಬಿಟ್‌ಕಾಯಿನ್‌ಗೆ ಕಾನೂನಾತ್ಮಕ ಚಲಾವಣೆ ಮಾನ್ಯತೆ ನೀಡಿದ ವಿಶ್ವದ ಮೊಟ್ಟ ಮೊದಲ ದೇಶ ಎಲ್ ಸಾಲ್ವಡಾರ್.

ಈ ಐತಿಹಾಸಿಕ ಕ್ಷಣದ ಬಗ್ಗೆ ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ಅವರು ಟ್ವೀಟ್ ಮಾಡಿ ''ಇತಿಹಾಸ'''ಎಂದಿದ್ದಾರೆ. ಇದಕ್ಕೂ ಮುನ್ನ ಎಲ್ ಸಾಲ್ವಡಾರ್ ಸಂಸತ್ತಿನಲ್ಲಿ (ಕಾಂಗ್ರೆಸ್) ಭಾರಿ ಬಹುಮತದೊಂದಿಗೆ ಬಿಟ್ ಕಾಯಿನ್ ಮಾನ್ಯತೆ ನೀಡುವ ಮಸೂದೆಗೆ ಸಮ್ಮತಿ ಸಿಕ್ಕಿತ್ತು. 84 ಸದಸ್ಯ ಬಲದಲ್ಲಿ 62 ಮಂದಿ ಬಿಟ್ ಕಾಯಿನ್ ಕಾನೂನು ಪರ ಮತ ಚಲಾಯಿಸಿದ್ದರು.

ದೇಶದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡಲು ಇದು ಸೂಕ್ತ ಮಾರ್ಗ ಎನಿಸಿದ್ದು, ವಿಶ್ವದಲ್ಲಿರುವ ಬಿಟ್ ಕಾಯಿನ್ ಬಂಡವಾಳದ 1% ನಮ್ಮಲ್ಲಿ ಹೂಡಿಕೆಯಾದರೆ ದೇಶದ ಜಿಡಿಪಿ 25% ಪ್ರಗತಿ ಕಾಣಲಿದೆ ಎಂದಿದ್ದಾರೆ.

ಜೂನ್ 9 ರಂದು ರಾತ್ರಿ 11.30ಕ್ಕೆ ಒಟ್ಟಾರೆ ಮಾರುಕಟ್ಟೆ ಮೌಲ್ಯ:
$2 ಟ್ರಿಲಿಯನ್‌ಗೆ ಏರಿಕೆಯಾಗಿದ್ದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಈಗ 1,606,940,444,524 ಡಾಲರ್‌ಗೆ ಕುಸಿದಿದೆ. ಬಿಟ್ ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು. ಈಗ 36 ಸಾವಿರ ಡಾಲರ್ ಗಳಿಗೆ ಕುಸಿದಿದೆ.

ಬಿಟ್ ಕಾಯಿನ್ ಮೌಲ್ಯ ವಿವರ:
ಬಿಟ್ ಕಾಯಿನ್ ಬೆಲೆ: $36,737.83
ಒಟ್ಟಾರೆ ಮಾರುಕಟ್ಟೆ ಮೌಲ್ಯ: $685,115,007,602
ಒಂದು ಬಿಟ್ ಕಾಯಿನ್ ಬೆಲೆ = 26,69,955.61 ರು
(1 USD=72.99 ರುಪಾಯಿ)

ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 14.07ರಷ್ಟು ಏರಿಕೆ ಕಂಡಿದೆ. ಈ ವಾರ ಶೇ 3.48ರಷ್ಟು ಕುಸಿತವಾಗಿದೆ.

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ.

ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
Lawmakers have approved a law classifying Bitcoin as legal tender, making El Salvador the first nation to officially adopt a cryptocurrency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X