ಉದ್ಯಮಿ ವಿಜಯ್ ಮಲ್ಯಗೆ ಸೇರಿದ ಫ್ರಾನ್ಸ್‌ನಲ್ಲಿದ್ದ ಆಸ್ತಿ ಜಪ್ತಿ

ಬೆಂಗಳೂರು, ಡಿ.3: ಭಾರತದ ಹತ್ತಾರು ಬ್ಯಾಂಕುಗಳಿಂದ ಸಾವಿರಾರು ಕೋಟಿ ರು ಗಳನ್ನು ಸಾಲದ ರೂಪದಲ್ಲಿ ಪಡೆದು, ಉದ್ದೇಶಪೂರ್ವಕ ಸುಸ್ತಿದಾರ ಎನಿಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಬಳಿಕ ತನಿಖಾ ಸಂಸ್ಥೆಗಳು ಮಲ್ಯಗೆ ಸೇರಿದ ಆಸ್ತಿ ಜಪ್ತಿ ಕಾರ್ಯವನ್ನು ಮುಂದುವರೆಸಿವೆ. ಫ್ರಾನ್ಸ್ ದೇಶದಲ್ಲಿರುವ ಸುಮಾರು 1.6 ಯುರೋ (ಸುಮಾರು 14 ಕೋಟಿ ರು) ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಜಾರಿ ನಿರ್ದೇಶನಾಲಯ ಟ್ವೀಟ್ ಮಾಡಿದೆ.

PMLA ಪ್ರಕಾರ ದೇಶಭ್ರಷ್ಠ ಆರ್ಥಿಕ ಅಪರಾಧಿ ಎಂದು ಘೋಷಣೆಯಾದರೆ, ಮಲ್ಯ ಅವರ ಸಮಸ್ತ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಅನುಕೂಲವಾಗಲಿದೆ. ಮಲ್ಯ ಒಡೆತನದ 12.5 ಸಾವಿರ ಕೋಟಿ ರು ಅಸ್ತಿ ಜಪ್ತಿ ಮಾಡಲು ತನಿಖಾ ಸಂಸ್ಥೆಗಳು ಮುಂದಾಗಿವೆ.

ಲಂಡನ್ನಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮಲ್ಯ ಅವರು, ತಮ್ಮ ಬಳಿ 14,000 ಕೋಟಿ ರು ಮೌಲ್ಯದ ಆಸ್ತಿ ಇದ್ದು, ಇದನ್ನು ಮಾರಿ, ಸಾಲ ವಾಪಸ್ ಮಾಡುತ್ತೇನೆ ಎಂದು ಮಲ್ಯ ಅವರು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ED seizes Vijay Mallya’s asset in France

ಫ್ರೆಂಚ್ ಅಧಿಕಾರಿಗಳು 32 ಅವಿನ್ಯೂ FOCH ನಲ್ಲಿರುವ ಕಟ್ಟಡವನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ. ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ಕೋಟ್ಯಂತರ ರುಪಾಯಿಗಳನ್ನು ಕಿಂಗ್ಸ್ ಫಿಷರ್ ಏರ್ ಲೈನ್ಸ್ ಲಿಮಿಟೆಡ್ ಖಾತೆಯಿಂದ ವಿದೇಶದಲ್ಲಿರುವ ಖಾತೆಗಳಿಗೆ ಮಲ್ಯ ವರ್ಗಾಯಿಸಿದ್ದರು ಎಂಬ ಆರೋಪವಿದೆ.

Recommended Video

      Jadeja ಅಷ್ಟು ಒಳ್ಳೆ Batting ಮಾಡಿ Bowling ಮಾಡಲಿಲ್ಲ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+