ಅನಿಲ್ ಅಂಬಾನಿ ಗ್ರೂಪ್‌ಗೆ ED ಬಿಗ್ ಶಾಕ್.. ಆಸ್ತಿ ಜಪ್ತಿ ಮೌಲ್ಯ ₹23,100 ಕೋಟಿಗೆ ಏರಿಕೆ

Anil Ambani: ಬ್ಯಾಂಕ್ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ರಿಲಯನ್ಸ್‌ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್‌ ಅಂಬಾನಿ ಸಹೋದರ ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಸಂಸ್ಥೆಗೆ ಮಂಗಳವಾರ (ಅಕ್ಟೋಬರ್ 03) ಇ.ಡಿ ಬಿಗ್ ಶಾಕ್‌ ನೀಡಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ರಿಲಯನ್ಸ್ ಅನಿಲ್ ಅಂಬಾನಿ ಗ್ರೂಪ್ ಸಂಸ್ಥೆಗೆ ಸೇರಿದ ಬರೋಬ್ಬರಿ ₹510.17 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಬ್ಯಾಂಕ್ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆಯ ಭಾಗವಾಗಿ ಈ ಬೃಹತ್ ಜಪ್ತಿ ಕಾರ್ಯಾಚರಣೆ ನಡೆದಿದೆ. ಈ ಕ್ರಮವನ್ನು ಎರಡು ಪ್ರಮುಖ ಬ್ಯಾಂಕ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೈಗೊಂಡಿದೆ ಎಂದು ತಿಳಿದುಬಂದಿದೆ.

ED Seizes Rs 510 17 Crore Assets of Anil Ambani Group Total Attachment Reaches 23 100 Crores

ಎರಡು ಪ್ರಮುಖ ಬ್ಯಾಂಕ್ ವಂಚನೆ ಪ್ರಕರಣಗಳು

* ರಿಲಯನ್ಸ್ ಕಮ್ಯುನಿಕೇಷನ್ಸ್ (RCOM) ಪ್ರಕರಣ: ಈ ಪ್ರಕರಣದಲ್ಲಿ ಒಟ್ಟು ₹247.12 ಕೋಟಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ ಎರಡು ಖಾಸಗಿ ಚಾರ್ಟರ್ಡ್ ವಿಮಾನಗಳು, ಮಹಾರಾಷ್ಟ್ರದಲ್ಲಿರುವ 6 ಜಮೀನುಗಳು ಹಾಗೂ ಒಂದು ಕಚೇರಿ ಕಟ್ಟಡ ಸೇರಿವೆ.

* RHFL/RCFL ಬ್ಯಾಂಕ್ ವಂಚನೆ ಪ್ರಕರಣ: ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ ಹಾಗೂ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ₹263.05 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ತಮಿಳುನಾಡಿನಲ್ಲಿರುವ 2 ವಿಂಡ್‌ಮಿಲ್‌ಗಳು, ಬ್ಯಾಂಕ್ ಡೆಪಾಸಿಟ್‌ಗಳು, ಫಿಕ್ಸ್ಡ್ ಡೆಪಾಸಿಟ್‌ಗಳು, ಹೂಡಿಕೆಗಳು ಹಾಗೂ ಬರಬೇಕಾದ ಹಣ ಸೇರಿವೆ.

ಜಪ್ತಿ ಪ್ರಕ್ರಿಯೆಯ ಪ್ರಮುಖ ಅಂಶಗಳು

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸಂಸ್ಥೆಯು ಬ್ಯಾಂಕ್‌ಗಳಿಂದ ಪಡೆದ ಹಣದ ದುರ್ಬಳಕೆ ಮತ್ತು ವಂಚನೆಗೆ ಸಂಬಂಧಿಸಿದಂತೆ ತೀವ್ರ ತನಿಖೆ ನಡೆಯುತ್ತಿದೆ. ಕಚೇರಿ ಕಟ್ಟಡಗಳು, ಖಾಸಗಿ ವಿಮಾನಗಳು, ಸ್ಥಿರಾಸ್ತಿಗಳು ಹಾಗೂ ಹಣಕಾಸು ಹೂಡಿಕೆಗಳನ್ನು ಒಳಗೊಂಡಂತೆ ಸಂಸ್ಥೆಯ ಪ್ರಮುಖ ಸಂಪನ್ಮೂಲಗಳನ್ನು ತನಿಖಾ ಸಂಸ್ಥೆಯು ತನ್ನ ವಶಕ್ಕೆ ಪಡೆದುಕೊಂಡಿದೆ.

ಇ.ಡಿ ಮಾಡಿದ ಗಂಭೀರ ಆರೋಪಗಳು

* ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳ ವಿರುದ್ಧ ಜಾರಿ ನಿರ್ದೇಶನಾಲಯವು ಹಲವು ಪ್ರಮುಖ ಆರೋಪಗಳನ್ನು ಹೊರಿಸಿದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಸಾರ್ವಜನಿಕರ ಹಣವನ್ನು ಅಕ್ರಮವಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ.

* ಐಬಿಸಿ ಕಾಯ್ದೆಯ ದುರುಪಯೋಗ: ಸಂಸ್ಥೆಯ ಆಸ್ತಿಗಳನ್ನು ಪ್ರವರ್ತಕರು ಹಾಗೂ ಅವರ ಕುಟುಂಬಸ್ಥರ ವೈಯಕ್ತಿಕ ಬಳಕೆಗೆ ಕಾಯ್ದಿರಿಸಿಕೊಳ್ಳಲು ದಿವಾಳಿತನ ಕಾಯ್ದೆಯನ್ನು (IBC) ದುರುಪಯೋಗಪಡಿಸಿಕೊಳ್ಳಲಾಗಿದೆ.

* ವಿದೇಶಗಳಿಗೆ ಹಣ ರವಾನೆ: ಸಾರ್ವಜನಿಕರ ಹಣವನ್ನು ತೆರಿಗೆ ರಹಿತ (Offshore Tax Havens) ವಿದೇಶಿ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ, ಅದನ್ನು ಪ್ರವರ್ತಕರ ಸ್ವಂತ ಅನುಕೂಲಕ್ಕಾಗಿ ಬಳಸಿಕೊಳ್ಳಲಾಗಿದೆ.

ಒಟ್ಟು ಜಪ್ತಿ ₹23,100 ಕೋಟಿಗೆ ಏರಿಕೆ

ಪ್ರಸ್ತುತ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇ.ಡಿ. ಈಗಾಗಲೇ 10 ಜನರನ್ನು ಬಂಧಿಸಿದ್ದು, 6 ಪ್ರತ್ಯೇಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ. ಜೊತೆಗೆ ಫೆಮಾ (FEMA) ಕಾಯ್ದೆಯಡಿಯಲ್ಲೂ ಪ್ರತ್ಯೇಕ ತನಿಖೆ ನಡೆಯುತ್ತಿದೆ. ಮಂಗಳವಾರ ನಡೆದ ಈ ₹510.17 ಕೋಟಿ ಮೌಲ್ಯದ ನೂತನ ಜಪ್ತಿಯೊಂದಿಗೆ, ಅನಿಲ್ ಅಂಬಾನಿ ಗ್ರೂಪ್ ವಿರುದ್ಧ ಇ.ಡಿ ಈವರೆಗೆ ವಶಪಡಿಸಿಕೊಂಡಿರುವ ಒಟ್ಟು ಆಸ್ತಿಯ ಮೌಲ್ಯ ಬರೋಬ್ಬರಿ ₹23,100 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+