Anil Ambani: ಉದ್ಯಮಿ ಅನಿಲ್ ಅಂಬಾನಿಗೆ ಸಂಬಂಧಿಸಿದ 50 ಕಂಪನಿಗಳ ಮೇಲೆ ED ದಾಳಿ
ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ (ED) ಮುಂದುವರಿದು ಖ್ಯಾತ ಉದ್ಯಮಿ ಉದ್ಯಮಿ ಅನಿಲ್ ಅಂಬಾನಿಗೆ ಅವರಿಗೆ ಸಂಬಂಧಿಸಿದ ವಿವಿಧ 40 ರಿಂದ 50 ಸ್ಥಳಗಳಲ್ಲಿ ಇಂದು ಗುರುವಾರ (ಜುಲೈ 24) ದಾಳಿ ಮಾಡಿದೆ. ಅದರ ಕುರಿತು ವಿವರ ಇಲ್ಲಿದೆ.
ಜಾರಿ ನಿರ್ದೇಶನಾಲಯದ ಪ್ರಕಾರ, 2017 ಮತ್ತು 2019 ರ ನಡುವೆ ಯೆಸ್ ಬ್ಯಾಂಕ್ ವಿತರಿಸಿದ ಸುಮಾರು 3,000 ಕೋಟಿ ರೂಪಾಯಿ ಮೌಲ್ಯದ ಸಾಲವನ್ನು ಶೆಲ್ ಕಂಪನಿಗಳು ಮತ್ತು ಸಂಬಂಧಿತ ಗುಂಪು ಘಟಕಗಳಿಗೆ ವರ್ಗಾಯಿಸಲಾಗಿದೆ ಎಂಬುದು ಇಡಿ ತನಿಖೆಯಿಂದ ಬಯಲಾಗಿದೆ. ಹೀಗಾಗಿ ಸೆಬಿ, ನ್ಯಾಷನಲ್ ಹೌಸಿಂಗ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಹಾಗೂ ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಅಥಾರಿಟಿ (NFRA) ನಂತಹ ನಿಯಂತ್ರಕ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಮಾಹಿತಿಗಳ ಮೇರೆಗೆ, ಸಿಬಿಐ ದಾಖಲಿಸಿದ ಎರಡು FIR ಬಳಿಕ ಇಡಿ ಅಂಬಾನಿ ಗ್ರೂಪ್‌ಗೆ ಸಂಬಂಧಿಸಿದ ಕಂಪನಿಗಲ ಮೇಲೆ ದಾಳಿ ಮಾಡಿದೆ.
ಯೆಸ್ ಬ್ಯಾಂಕ್‌ನ ಪ್ರಕರಣದಲ್ಲಿ ಪ್ರವರ್ತಕತೆ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ಪತ್ತೆ ಮಾಡಿದ್ದಾರೆ. ಬ್ಯಾಂಕಿನ ಸಾಲ ಮಂಜೂರಾತಿ, ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಸ್ಥೆ ಭಾಗಿಯಾಗಿದೆ ಎಂದು ಇಡಿ ಹೇಳಿದೆ. ಅದರೆ ಹಳೆಯ ಕ್ರೆಡಿಟ್ ದಸ್ತಾವೇಜೀಕರಣ, ಪಾರದರ್ಶಕ ಕೊರತೆ ಮತ್ತು ಕಳಪೆ ಆರ್ಥಿಕ ವಹೀವಾಟು ಹೊಂದಿರುವ ಕಂಪನಿಗಳಿಗೆ ಸಾಲಗಳ ಅನುಮೋದನೆ ಮಾಡಲಾಗಿದೆ.
ಇಷ್ಟು ಮಾತ್ರವಲ್ಲದೇ ಸಾಲದ ಷರತ್ತುಗಳು ಉಲ್ಲಂಘನೆ ಆಗಿವೆ. ಖಾತೆಗಳ ಶಾಶ್ವತ ಬಳಕೆ ಮತ್ತು ನೈಜ ಸಾಲ ಅನುಮೋದನೆ ದಿನಾಂಕ ಇಲ್ಲವೇ ಅದಕ್ಕೂ ಮುನ್ನೇ ಹಣ ವರ್ಗಾಯಿಸಿದ್ದು ಸಹ ಪತ್ತೆ ಮಾಡಲಾಗಿದೆ. ಈ ಪ್ರಕರಣದಲ್ಲಿ 50 ಕ್ಕೂ ಹೆಚ್ಚು ಕಂಪನಿಗಳು ಮತ್ತು 25 ವ್ಯಕ್ತಿಗಳ ಇಡಿ ದಾಳಿ ಮಾಡಿ ತನಿಖೆ ಆರಂಭಿಸಿದೆ.

ಸೆಬಿ ರಿಲಯನ್ಸ್ ಹೋಮ್ ಫೈನಾನ್ಸ್ ಲಿಮಿಟೆಡ್ (RHFL) ಬಗ್ಗೆ ವರದಯೊಂದನ್ನು ಸಲ್ಲಿಕೆ ಮಾಡಿದೆ. ಆ ವರದಿಯಲ್ಲಿ ಕಾರ್ಪೊರೇಟ್ ಸಾಲ ಒಂದೇ ವರ್ಷದೊಳಗೆ ದ್ವಿಗುಣಗೊಂಡಿದೆ ಎಂಬುದುನ್ನು ತೋರಿಸಲಾಗಿದೆ. ಇಂತಹ ಆರ್ಥಿಕ ದುರಾಡಳಿ, ಕಾರ್ಯ ಚಟುವಟಿಕೆಯಲ್ಲಿನ ಲೋಪಗಳು ಎದ್ದು ಕಾಣಿತ್ತಿವೆ. ಅಕ್ರಮಗಳ ನಡೆದಿರುವುದು ಇಡಿ ಅಧಿಕಾರಿಗಳ ಗಮನಕ್ಕೆ ಬಂದಿದೆ. ಸದ್ಯ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 17 ರ ಅಡಿ ದಾಳಿ ನಡೆಸಿ ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications