ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಅವಧಿಯಲ್ಲಿ ಭಾರತೀಯರು ಹೆಚ್ಚು ಆರ್ಡರ್ ಮಾಡಿದ್ದು ಬಿರಿಯಾನಿ: ಸ್ವಿಗ್ಗಿ

|
Google Oneindia Kannada News

ನವದೆಹಲಿ, ಜುಲೈ 23: ಕೊರೊನಾವೈರಸ್ ಲಾಕ್‌ಡೌನ್ ಅವಧಿಯಲ್ಲಿ ಜನರು ಹೊರಬರದೇ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿಯಿತ್ತು. ಹೋಟೆಲ್‌ಗಳು ಬಹುತೇಕ ಬಂದ್ ಆಗಿದ್ದವು. ಇಂತಹ ಸಂದರ್ಭದಲ್ಲಿ ಆನ್‌ಲೈನ್ ಫುಡ್ ಆರ್ಡರ್ ಕೂಡ ಹೆಚ್ಚಾಗೇ ಇದ್ದು, ಭಾರತೀಯರು ಬಿರಿಯಾನಿಯನ್ನು ಹೆಚ್ಚು ಇಷ್ಟಪಟ್ಟು ಆರ್ಡರ್ ಮಾಡಿದ್ದರು ಎಂದು ಸ್ವಿಗ್ಗಿ ಹೇಳಿದೆ.

ಲಾಕ್‌ಡೌನ್ ಅವಧಿಯ ಮೂರು ತಿಂಗಳುಗಳಲ್ಲಿ ಭಾರತೀಯರಿಗೆ ಹೆಚ್ಚಿನ ಇಷ್ಟವಾದ ಖಾದ್ಯ ಬಿರಿಯಾನಿಯಾಗಿದೆ. ಆಹಾರ, ದಿನಸಿ, ಔಷಧಿ ಮತ್ತು ಇತರ ಗೃಹೋಪಯೋಗಿ ವಸ್ತುಗಳಾದ್ಯಂತ 40 ಮಿಲಿಯನ್ ಆದೇಶಗಳನ್ನು ವಿತರಿಸಿದ್ದಾರೆ ಎಂದು ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿ ತನ್ನ ಅಂಕಿ-ಅಂಶಗಳ ವರದಿಯಲ್ಲಿ ಹೇಳಿದೆ.

During Lockdown More Indians ordered biryani: Swiggy

 ಕೊಡಗಿನ ಮಳೆಗಾಲದಲ್ಲಿ ಇವೇ ಸೂಪರ್ ಫುಡ್ ಕೊಡಗಿನ ಮಳೆಗಾಲದಲ್ಲಿ ಇವೇ ಸೂಪರ್ ಫುಡ್

ಸ್ವಿಗ್ಗಿಯ ಒಟ್ಟು ಆರ್ಡರ್‌ಗಳಲ್ಲಿ ಬಿರಿಯಾನಿಯೇ 5.5 ಲಕ್ಷ ಆರ್ಡರ್‌ಗಳಿದ್ದವು ಎನ್ನಲಾಗಿದೆ. ಬಿರಿಯಾನಿ ಹೊರತುಪಡಿಸಿ ಬೆಣ್ಣೆ ನಾನ್ ಮತ್ತು ಮಸಾಲ ದೋಸೆ ಹೆಚ್ಚು ಆರ್ಡರ್ ಮಾಡಲಾಗಿದೆ. ಬೆಣ್ಣೆ ನಾನ್ 3,35,185 ಮತ್ತು 3,31,423 ದೋಸೆಗಳನ್ನು ಆರ್ಡರ್ ಮಾಡಲಾಗಿದೆ.

English summary
During lockdowns Indians ordered biryani, as the most favored dish over the last three months said swiggy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X