ತಜ್ಞರ ಅಭಿಮತ : ಮೂಡ್ ಬದಲಾಯಿಸಿದ ಮೂಡೀಸ್, ಏನು- ಎತ್ತ?

Posted By: ಕೆ.ಜಿ.ಕೃಪಾಲ್
Subscribe to Oneindia Kannada

ಒಂದು ದೇಶದ ಆರ್ಥಿಕತೆಯನ್ನು ಮಾಪನ ಮಾಡಲು ವಿವಿಧ ಅಂತರರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳು ವಿವಿಧ ಮಾನದಂಡಗಳನ್ನು ಅನುಸರಿಸುತ್ತವೆ. ಇವು ಆಯಾ ದೇಶದ ಮುಂದಿನ ಬೆಳವಣಿಗೆಗಳ, ಪ್ರಗತಿ, ಅಭಿವೃದ್ಧಿಗಳ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ಇಂತಹ ರೇಟಿಂಗ್ ಸಂಸ್ಥೆಗಳಲ್ಲಿ ಮೂಡೀಸ್, ಸ್ಟ್ಯಾಂಡರ್ಡ್ ಅಂಡ್ ಪೂರ್, ಫಿಚ್ ಪ್ರಮುಖವಾಗಿ ಅಂತರರಾಷ್ಟ್ರೀಯ ಮನ್ನಣೆ ಪಡೆದು ವಲಯವನ್ನು ನಿಯಂತ್ರಿಸುತ್ತಿವೆ.

ಮೂಡೀಸ್ ರೇಟಿಂಗ್ ನಿಂದ ಭಾರತಕ್ಕೆ ಆಗುವ 4 ಅನುಕೂಲ

ಅಮೆರಿಕಾದ ಮೂಡೀಸ್ ಒಂದು ಅಗ್ರಮಾನ್ಯ ರೇಟಿಂಗ್ ಸಂಸ್ಥೆಯಾಗಿದೆ. ಈ ಸಂಸ್ಥೆಯು ಕಳೆದ 2004ರಲ್ಲಿ ಭಾರತದ ರೇಟಿಂಗ್ ಅನ್ನು 'ಬಿಎಎ 3' ಮಟ್ಟಕ್ಕೆ ಏರಿಕೆ ಮಾಡಿತ್ತು. 'ಬಿಎಎ 3' ಮಟ್ಟ ಅಂದರೆ ಇದು ಕಳಪೆ (ಜಂಕ್) ಗಿಂತ ಒಂದು ಹಂತ ಉತ್ತಮವಾದುದಾಗಿದೆ.

ಭಾರತದ ಆರ್ಥಿಕತೆಗೆ ಸಿಕ್ಕ ಜಾಗತಿಕ ಮನ್ನಣೆ ಮೂಡೀಸ್ ರೇಟಿಂಗ್ : ಜೇಟ್ಲಿ

ಸುಮಾರು 13 ವರ್ಷಗಳ ನಂತರ ಈಗ ಮೂಡೀಸ್ ಮತ್ತೊಮ್ಮೆ ನಮ್ಮ ದೇಶದ ರೇಟಿಂಗ್ ಅನ್ನು ಉನ್ನತೀಕರಿಸಿದ್ದು 'ಬಿಎಎ 3' ಮಟ್ಟದಿಂದ 'ಬಿಎಎ 2' ಮಟ್ಟಕ್ಕೆ ಏರಿಸಿದೆ. ಇದು ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿರುವ ಅನೇಕ ಸುಧಾರಣಾ ಯೋಜನೆಗಳಿಗೆ ಅಂತರ ರಾಷ್ಟ್ರೀಯ ಮನ್ನಣೆಯ ಸಂಕೇತವಾಗಿದೆ. (ಲೇಖಕರು ಷೇರು ದಲ್ಲಾಳಿಗಳು ಹಾಗೂ ಅಂಕಣಕಾರರು. ಸಂಪರ್ಕ ಸಂಖ್ಯೆ 9886313380)

ವ್ಯವಹಾರಕ್ಕೆ ಉತ್ತಮ ವಾತಾವರಣ

ವ್ಯವಹಾರಕ್ಕೆ ಉತ್ತಮ ವಾತಾವರಣ

ಈ ಸುಧಾರಣಾ ಕ್ರಮಗಳು ಆರ್ಥಿಕ ಹಿಂಜರಿತದಂತಹ ಪರಿಸ್ಥಿತಿಯಲ್ಲೂ ಒದಗಬಹುದಾದ ಅಪಾಯದ ಮಟ್ಟವನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಿದೆ. ಕೇಂದ್ರ ಸರಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳಲ್ಲಿ ಭಾರತದಲ್ಲಿ ಆರಂಭಿಸುವ/ನಡೆಸುವ ವ್ಯವಹಾರಕ್ಕೆ ಉತ್ತಮ ವಾತಾವರಣ ನಿರ್ಮಿತವಾಗಿದೆ.

ಸಕಾರಾತ್ಮಕ ಬದಲಾವಣೆಗಳು

ಸಕಾರಾತ್ಮಕ ಬದಲಾವಣೆಗಳು

ಇದು ಉತ್ಪಾದನಾ ಮಟ್ಟ ಹೆಚ್ಚಿಸಿ ದೇಶೀಯ ಮತ್ತು ವಿದೇಶಿ ಹೂಡಿಕೆಗೆ ಹೆಚ್ಚು ಪ್ರೋತ್ಸಾಹ ನೀಡುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಲಿದೆ. ಜಿಎಸ್ ಟಿ, ಅಪನಗದೀಕರಣ, ನಾನ್ ಪರ್ಫಾರ್ಮಿಂಗ್ ಸಾಲಗಳ ನಿಯಂತ್ರಣ ಕ್ರಮಗಳು, ಬಯೋಮೆಟ್ರಿಕ್ ಆಧಾರಿತ ಆಧಾರ್ ಯೋಜನೆ ಮೂಲಕ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ ಫರ್ ಮುಂತಾದವುಗಳು ಸಕಾರಾತ್ಮಕ ಬದಲಾವಣೆಗಳು ಎಂದು ಮೂಡೀಸ್ ಅಭಿಪ್ರಾಯಪಟ್ಟಿದೆ.

ದೀರ್ಘಕಾಲೀನದಲ್ಲಿ ಹೆಚ್ಚು ಪ್ರಭಾವಿ

ದೀರ್ಘಕಾಲೀನದಲ್ಲಿ ಹೆಚ್ಚು ಪ್ರಭಾವಿ

ಜಿಎಸ್ ಟಿ, ಅಪನಗದೀಕರಣವು ಅಭಿವೃದ್ಧಿಗೆ ತಾತ್ಕಾಲಿಕ ತಡೆಯೊಡ್ಡಿದರೂ ದೀರ್ಘಕಾಲೀನದಲ್ಲಿ ಹೆಚ್ಚು ಪ್ರಭಾವಿಯಾಗಿವೆ ಎಂದು ಸಹ ಅಭಿಪ್ರಾಯಪಟ್ಟಿದೆ. ಇತ್ತೀಚಿಗೆ 'ಈಸ್ ಆಫ್ ಡುಯಿಂಗ್ ಬ್ಯುಸಿನೆಸ್' ಅಡಿ ಭಾರಿ ಜಿಗಿತ ಕಂಡಿದ್ದ ಭಾರತದ ಮುಡಿಗೆ ಮೂಡೀಸ್ ನ ರೇಟಿಂಗ್ ಉನ್ನತೀಕರಣವು ಮತ್ತೊಂದು ಮಹತ್ತರ ಗರಿಯಾಗಿದೆ.

ಸರಕಾರ ಹೆಚ್ಚಿನ ಸುಧಾರಣೆ ಮಾಡಲು ಪ್ರೇರಣೆ

ಸರಕಾರ ಹೆಚ್ಚಿನ ಸುಧಾರಣೆ ಮಾಡಲು ಪ್ರೇರಣೆ

ಮತ್ತೊಂದು ಮಹತ್ತರವಾದ ಅಂಶವೆಂದರೆ ಮೂಡೀಸ್ ಪ್ರಕಾರ, ಈ ವರ್ಷದ ಜಿಡಿಪಿಯು ಶೇ 6.7 ರಷ್ಟಿರಬಹುದಾದರೂ, ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಮುಂದಿನ ವರ್ಷ ಶೇ 7.5ಕ್ಕೆ ಏರಿಕೆಯಾಗಲಿದೆ. ಅದರ ಮುಂದಿನ ವರ್ಷಗಳಲ್ಲಿ ಉತ್ತಮ ಏರಿಕೆ ಕಂಡು ಉಳಿದ ಬಿಎಎ ರೇಟೆಡ್ ದೇಶಗಳಿಗಿಂತ ಮುಂದಿರುತ್ತದೆ ಎಂದು ಹುರಿದುಂಬಿಸಿದೆ. ಈ ಕ್ರಮವು ಮುಂದಿನ ದಿನಗಳಲ್ಲಿ ಸರಕಾರ ಹೆಚ್ಚಿನ ಸುಧಾರಣಾ ಕ್ರಮಕ್ಕೆ ಮುಂದಾಗಲು ಪ್ರೇರಣೆಯಾಗುವುದರಲ್ಲಿ ಸಂದೇಹವಿಲ್ಲ.

ಜನ ಸಾಮಾನ್ಯರ ಖರೀದಿ ಸಾಮರ್ಥ್ಯ ಹೆಚ್ಚಾಗಬೇಕು

ಜನ ಸಾಮಾನ್ಯರ ಖರೀದಿ ಸಾಮರ್ಥ್ಯ ಹೆಚ್ಚಾಗಬೇಕು

ಒಟ್ಟಾರೆ ವಿತ್ತೀಯ ಪೇಟೆಗಳ ದೃಷ್ಟಿಯಿಂದ ಈ ರೇಟಿಂಗ್ ಉನ್ನತೀಕರಣವು ಸ್ವಾಗತಾರ್ಹವಾದರೂ ಈಗಾಗಲೇ ಷೇರು ಮಾರುಕಟ್ಟೆ ಉತ್ತುಂಗದಲ್ಲಿರುವ ಪರಿಸ್ಥಿತಿಯಲ್ಲಿ ಈ ಕ್ರಮವು ಕೇವಲ ತಾತ್ಕಾಲಿಕ ಪ್ರಭಾವ ಬೀರುತ್ತದೆ ಎಂಬುದು ಶುಕ್ರವಾರದ ಷೇರು ಪೇಟೆಯ ನಡೆ ಬಿಂಬಿಸುತ್ತದೆ. ಮೂಲತಃ ಜನಸಾಮಾನ್ಯರಲ್ಲಿ ಖರೀದಿಯ ಸಾಮರ್ಥ್ಯ ಹೆಚ್ಚುವವರೆಗೂ ಯಾವುದೇ ಸುಧಾರಣೆಗಳು ಯಶಸ್ವಿಯಾಗಲಾರವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian economy upgraded by Moody's rating. How this impact on Indian economy? Here is an analysis by stock broker and well known columnist in Kannada K.G.Krupal.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ