Air India Republic Day Sale : ಬೆಂಗಳೂರು: ಏರ್‌ ಇಂಡಿಯಾದಿಂದ ಟಿಕೆಟ್ ದರದಲ್ಲಿ ರಿಯಾಯಿತಿ

ನವದೆಹಲಿ, ಜನವರಿ 23: ಗಣರಾಜ್ಯೋತ್ಸವದ ಅಂಗವಾಗಿ ಏರ್ ಇಂಡಿಯಾ ತನ್ನ ಟಿಕೆಟ್‌ ಪ್ರಯಾಣ ದರದಲ್ಲಿ ವಿಶೇಷ ರಿಯಾಯಿತಿ ನೀಡಿ ಮಾರಾಟ ಮಾಡಲಾಗುತ್ತಿದೆ. ಏರ್ ಇಂಡಿಯಾ ಗಣರಾಜ್ಯೋತ್ಸವದ ಮಾರಾಟವು ದೇಶದ ಜನಪ್ರಿಯ ಮಾರ್ಗಗಳಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.

ಅಗ್ಗದ ಟಿಕೆಟ್ ದರವು ಸರಾಸರಿ ಪ್ರಥಮ ದರ್ಜೆ ರೈಲು ದರ ಅಂದರೆ 1705 ರೂಪಾಯಿ ಆಗಿರುತ್ತದೆ ಎಂದು ತಿಳಿದು ಬಂದಿದೆ. ಮಾರಾಟವು ಜನವರಿ 21ರಂದು ಪ್ರಾರಂಭವಾಗಿದ್ದು ಇಂದು ಕೊನೆಗೊಳ್ಳಬೇಕಿತ್ತು. ಆದರೆ ಮಾರಾಟದ ಪ್ರಯೋಜನಗಳನ್ನು ಪಡೆಯಲು ಅವಧಿಯನ್ನು ವಿಸ್ತರಿಸಲಾಗಿದೆ ಎನ್ನಲಾಗಿದೆ.

ರಿಯಾಯಿತಿಗಾಗಿ ತಮ್ಮ ವಿಮಾನಗಳನ್ನು ಕಾಯ್ದಿರಿಸಲು ಬಯಸುವವರು 1 ಫೆಬ್ರವರಿ 2023 ಮತ್ತು 30 ಸೆಪ್ಟೆಂಬರ್ 2023ರ ನಡುವಿನ ದಿನಾಂಕಗಳನ್ನು ಆಯ್ಕೆ ಮಾಡಬಹುದು. ಈ ಆಫರ್ ದೇಶೀಯ ವಿಮಾನಗಳಿಗೆ ಮಾತ್ರ ಲಭ್ಯವಿದೆ. ಟಿಕೆಟ್‌ ಸ್ಟಾಕ್ ಇರುವವರೆಗೆ ಆಫರ್ ಮಾನ್ಯವಾಗಿರುತ್ತದೆ ಎಂದು ತಿಳಿಸಲಾಗಿದೆ. ಈ ವಿಮಾನ ಟಿಕೆಟ್‌ಗಳನ್ನು ಏರ್ ಇಂಡಿಯಾ ಸಿಟಿ ಕಚೇರಿ, ವಿಮಾನ ನಿಲ್ದಾಣ ಕಚೇರಿ, ವೆಬ್‌ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಟ್ರಾವೆಲ್ ಏಜೆಂಟ್‌ಗಳ ಮೂಲಕ ಖರೀದಿಸಬಹುದು. ಆಫರ್ ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ಆಧಾರಿತವಾಗಿದೆ.

Discount on ticket price from Air India

ಈ ಎಲ್ಲಾ ಟಿಕೆಟ್‌ಗಳು ಎಕಾನಮಿ ವರ್ಗದ್ದಾಗಿವೆ. 49 ಸ್ಥಳಗಳು ಈ ರಿಯಾಯಿತಿ ದರಗಳ ಅಡಿಯಲ್ಲಿ ಒಳಗೊಳ್ಳುತ್ತವೆ. ಇವುಗಳಲ್ಲಿ ಪ್ರಮುಖವಾಗಿ ದಿಮಾಪುರ್-ಗುವಾಹಟಿ ಟಿಕೆಟ್ 1783 ರೂ., ಗೋವಾದಿಂದ ಮುಂಬೈ-2830 ರೂ., ಅಹಮದಾಬಾದ್‌ನಿಂದ ಮುಂಬೈ- ರೂ. 1,806, ಬೆಂಗಳೂರು-ಮುಂಬೈ-- ರೂ. 2319. ದೆಹಲಿ-ಮುಂಬೈ ಟಿಕೆಟ್ ದರ 5075 ರೂ. ದೆಹಲಿ-ಚೆನ್ನೈ ಟಿಕೆಟ್ ದರ 5895 ರೂಪಾಯಿ ಆಗಿರುತ್ತದೆ.

ಏತನ್ಮಧ್ಯೆ, ಜನವರಿ 19 ಜನವರಿ 24 ರ ನಡುವೆ 2023ರ ಗಣರಾಜ್ಯೋತ್ಸವದ ದೃಷ್ಟಿಯಿಂದ ದೆಹಲಿಯಲ್ಲಿ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗುತ್ತದೆ. ಜನವರಿ 26 ರಂದು ದೆಹಲಿಯಲ್ಲಿ ವಿಮಾನಗಳು ಸಹ ರದ್ದುಗೊಳ್ಳುತ್ತವೆ ಎಂದು ಡಿಎನ್‌ಎ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+