ಪತಂಜಲಿ ಜಾಹೀರಾತಿನ ಪ್ರಸಾರಕ್ಕೆ ತಡೆ ನೀಡಿದ ದೆಹಲಿ ಹೈಕೋರ್ಟ್

Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 7: ಬಾಬಾ ರಾಮ್ ದೇವ್ ಮಾಲಿಕತ್ವದ 'ಪತಂಜಲಿ ಆಯುರ್ವೇದ' ಸಂಸ್ಥೆಯ ಚ್ಯವನಪ್ರಾಶ್ ಉತ್ಪನ್ನಕ್ಕೆ ಸಂಬಂಧಿಸಿದ ಜಾಹೀರಾತಿನ ಪ್ರಸಾರಕ್ಕೆ ದೆಹಲಿ ಹೈಕೋರ್ಟ್ ಇಂದು ತಡೆ ನೀಡಿದೆ.

'ಚ್ಯವನಪ್ರಾಶ್'ನ ಜಾಹೀರಾತುಗಳ ತನ್ನ ಉತ್ಪನ್ನಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸುತ್ತಿವೆ ಎಂದು ಪತಂಜಲಿಯ ವೈರಿ ಸಂಸ್ಥೆ 'ಡಾಬರ್' ಹೈಕೋರ್ಟ್ ಮೆಟ್ಟಿಲೇರಿತ್ತು.

ಇದರ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಮುಂದಿನ ವಿಚಾರಣೆ ಅಂದರೆ ಸೆಪ್ಟೆಂಬರ್ 28ರವರೆಗೆ ಜಾಹೀರಾತು ಪ್ರಸಾರ ಮಾಡದಂತೆ ಪತಂಜಲಿ ಸಂಸ್ಥೆಗೆ ಸೂಚನೆ ನೀಡಿದೆ.

ಪ್ರಕರಣದಲ್ಲಿ ಸುಮಾರು 2.01 ಕೋಟಿ ರೂಪಾಯಿಯನ್ನು 'ಪತಂಜಲಿ' ಪರಿಹಾರ ರೂಪದಲ್ಲಿ ತನಗೆ ನೀಡಬೇಕು ಎಂದೂ 'ಡಾಬರ್' ಸಂಸ್ಥೆ ತನ್ನ ಅರ್ಜಿಯಲ್ಲಿ ಕೇಳಿಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Delhi High Court today ordered Baba Ramdev's Patanjali Ayurved Ltd to stop airing advertisements to promote its brand of Chyawanprash. Its rival brand Dabur said the Chyawanprash commercials disparaged its product.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ