ಮುಖಕ್ಕೆ ಬಂತು ಮಾಸ್ಕ್: ಲಿಪ್ ಸ್ಟಿಕ್ ಬದಲು ಐ-ಮೇಕಪ್ ನತ್ತ ಹೆಂಗಳೆಯರ ಚಿತ್ತ!

ಮುಂಬೈ, ಮೇ 28: ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಹಲವು ವ್ಯಾಪಾರ-ಉದ್ಯಮಗಳಿಗೆ ಆಗಿರುವ ನಷ್ಟ ಅಷ್ಟಿಷ್ಟಲ್ಲ. ನೋವೆಲ್ ಕೊರೊನಾ ವೈರಸ್ ವಕ್ಕರಿಸಿದ್ದರಿಂದ ಲಿಪ್ ಸ್ಟಿಕ್ ಉದ್ಯಮಕ್ಕೂ ಹೊಡೆತ ಬಿದ್ದಿದೆ.

Recommended Video

      ಆರ್ಥಿಕ ಸುನಾಮಿ ದೇಶವನ್ನು ಸಂಕಷ್ಟಕ್ಕೆ ದೂಡಿದೆ ಎಂದ ಡಿಕೆಶಿ | DK Shivakumar | Oneindia Kannada

      ಕೊರೊನಾ ವೈರಸ್ ಅನ್ನು ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ನಿಂದಾಗಿ ಹೆಂಗಳೆಯರ ಚೆಂದುಟಿಗಳ ಅಂದ ಹೆಚ್ಚಿಸುತ್ತಿದ್ದ ಲಿಪ್ ಸ್ಟಿಕ್ ಗಳು ತನ್ನ ಹೊಳಪನ್ನು ಕಳೆದುಕೊಂಡಿವೆ.

      ಕೋವಿಡ್-19 ರೋಗದ ಭೀತಿಯಿಂದ ಹಲವು ಮಹಿಳೆಯರು ಮನೆಯಿಂದ ಹೊರಗೆ ಬರುತ್ತಿಲ್ಲ. ಅಪ್ಪಿ-ತಪ್ಪಿ ಮನೆಯಿಂದ ಹೊರಗೆ ಬಂದರೂ, ಮಹಾಮಾರಿ ಕೊರೊನಾ ವೈರಸ್ ಸೋಂಕಿನಿಂದ ಪಾರಾಗಲು ಮುಖಕ್ಕೆ ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಲೇಬೇಕು. ಹೀಗಾಗಿ, ಹುಡುಗಿಯರ ಮೇಕಪ್, ಸ್ಟೈಲ್ ಮತ್ತು ಫೋಕಸ್ ಇದೀಗ ಬದಲಾಗಿದೆ.

      ಮಾಸ್ಕ್ ಧರಿಸುವುದು ಅನಿವಾರ್ಯ ಆಗಿರುವ ಕಾರಣ, ಹೆಂಗಳೆಯರು ಲಿಪ್ ಸ್ಟಿಕ್ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ಐ-ಮೇಕಪ್ ಮೇಲೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಪರಿಣಾಮ, ಲಿಪ್ ಸ್ಟಿಕ್ ಮಾರಾಟದಲ್ಲಿ ಕುಸಿತ ಕಂಡುಬಂದಿದೆ.

      ಹೆಂಗಳೆಯರ ಮೇಕಪ್ ಫೋಕಸ್ ಶಿಫ್ಟ್

      ಹೆಂಗಳೆಯರ ಮೇಕಪ್ ಫೋಕಸ್ ಶಿಫ್ಟ್

      ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಈಗ ತೀರ ವಿರಳವಾಗಿದೆ. ಒಂದು ವೇಳೆ ಅಂತಹ ಕಾರ್ಯಕ್ರಮಗಳಿಗೆ ಹೋಗಬೇಕಾದರೂ, ಮಾಸ್ಕ್ ಇರಲೇಬೇಕು. ಹೀಗಾಗಿ. ತುಟಿಗಳ ಬದಲು ಕಣ್ಣುಗಳ ಅಂದ ಹೆಚ್ಚಿಸುವತ್ತ ಹೆಂಗಳೆಯರ ಫೋಕಸ್ ಶಿಫ್ಟ್ ಆಗಿದೆ.

      ಐ-ಮೇಕಪ್ ಗೆ ಒಲವು

      ಐ-ಮೇಕಪ್ ಗೆ ಒಲವು

      ಐ-ಮೇಕಪ್ ಕಡೆಗೆ ಹುಡುಗಿಯರು ವಾಲುತ್ತಿರುವುದರಿಂದ ಕಾಜಲ್, ಐ-ಲೈನರ್, ಮಸ್ಕಾರಾ, ಐ-ಶ್ಯಾಡೋಗಳ ಮಾರಾಟವನ್ನು ಹೆಚ್ಚಿಸಲು ವಿವಿಧ ಕಂಪನಿಗಳು ಸ್ಟ್ರಾಟೆಜಿ ಪ್ಲಾನ್ ಮಾಡುತ್ತಿವೆ.

      ಲಿಪ್ ಸ್ಟಿಕ್ ಬಳಕೆ ಕಡಿಮೆ

      ಲಿಪ್ ಸ್ಟಿಕ್ ಬಳಕೆ ಕಡಿಮೆ

      ''ಬಹುತೇಕ ಮಂದಿ ಇದೀಗ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಮನೆಯಿಂದ ಹೊರಗೆ ಓಡಾಡುವವರ ಸಂಖ್ಯೆ ಕಡಿಮೆಯಾಗಿದೆ. ವರ್ಕ್ ಫ್ರಮ್ ಹೋಮ್ ಮಾಡುವಾಗ ಲಿಪ್ ಸ್ಟಿಕ್ ಬಳಸುವುದಿಲ್ಲ. ಆದರೆ, ವಿಡಿಯೋ ಕಾಲ್, ಆನ್ ಲೈನ್ ಮೀಟಿಂಗ್, ಪ್ರೆಸೆಂಟೇಷನ್ ಇರುವಾಗ ಲಿಪ್ ಸ್ಟಿಕ್ ಬಳಕೆ ಆಗುತ್ತದೆ. ಮಾಸ್ಕ್ ಧರಿಸುವ ಪರಿಸ್ಥಿತಿ ಇರುವುದರಿಂದ ಮಹಿಳೆಯರ ಗಮನ ಐ-ಮೇಕಪ್ ಕಡೆಗಿದೆ'' ಎನ್ನುತ್ತಾರೆ ಲಾರಿಯಲ್ ಇಂಡಿಯಾ ಡೈರೆಕ್ಟರ್ ಕವಿತಾ ಆಂಗ್ರೆ.

      ''ಐ-ಶ್ಯಾಡೋಗಳ ಮಾರಾಟದಲ್ಲಿ ಸದ್ಯ ಏರಿಕೆ ಕಾಣುತ್ತಿದೆ. ಭಾರತದಲ್ಲಿ ಮೊದಲಿನಿಂದ ಐ-ಮೇಕಪ್ ಗೆ ಮಾರುಕಟ್ಟೆ ಇದೆ. ಆದರೆ, ಲಿಪ್ಸ್ ಮಾತ್ರ ಸೆಗ್ಮೆಂಟ್ ಲೀಡರ್ ಆಗಿತ್ತು'' ಅಂತಾರೆ ನೈಕಾ ಕಂಪನಿಯ ವಕ್ತಾರರು.

      ''ಲಾಕ್ ಡೌನ್ ನಿಂದಾಗಿ ಮಾರಾಟದಲ್ಲಿ ಏರುಪೇರು ಆಗಿರಬಹುದು. ಲಾಕ್ ಡೌನ್ ತೆರವುಗೊಂಡರೆ ಮತ್ತೆ ಮೇಕಪ್ ಪ್ರಾಡೆಕ್ಟ್ ಗಳ ಮಾರಾಟ ಎಂದಿನಂತೆ ಸಾಗುತ್ತದೆ'' ಎಂದು ಹಿಂದೂಸ್ತಾನ್ ಯೂನಿಲಿವರ್ ವಕ್ತಾರ ಅಭಿಪ್ರಾಯ ಪಟ್ಟಿದ್ದಾರೆ.

      ಸದ್ಯ ವೈಯುಕ್ತಿಕ ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಎಲ್ಲರೂ ಒತ್ತು ಕೊಡುತ್ತಿರುವುದರಿಂದ ಫೇಸ್ ಕ್ರೀಮ್ ಗಳ ಮಾರಾಟ ಹೆಚ್ಚಳವಾಗುವ ಸಾಧ್ಯತೆ ಇದೆ ಅಂತಾರೆ ಕೆಲ ಮಾರ್ಕೆಟಿಂಗ್ ಎಕ್ಸ್ ಪರ್ಟ್ ಗಳು.

      ಕಮ್ ಬ್ಯಾಕ್ ಮಾಡಲಿದೆ ಲಿಪ್ ಸ್ಟಿಕ್

      ಕಮ್ ಬ್ಯಾಕ್ ಮಾಡಲಿದೆ ಲಿಪ್ ಸ್ಟಿಕ್

      ''ಲಿಪ್ ಸ್ಟಿಕ್ ಮಾರಾಟದಲ್ಲಿ ಕುಸಿತ ಕಂಡಿರುವ ಈ ಹಂತ ಬಹುಬೇಗ ಕಳೆದುಹೋಗುತ್ತದೆ. ನಾವು ಸಾಮಾಜಿಕ ಪ್ರಾಣಿ ಆಗಿರುವುದರಿಂದ 'ಸೋಷಿಯಲೈಸಿಂಗ್' ಸಾಯಲು ಸಾಧ್ಯವೇ ಇಲ್ಲ. ಸೋಷಿಯಲೈಸಿಂಗ್ ಗೆ ಹೊಸ ಮಾರ್ಗ ಸಿಗುತ್ತದೆ. ಲಿಪ್ ಸ್ಟಿಕ್ ಕೂಡ ಕಮ್ ಬ್ಯಾಕ್ ಮಾಡುತ್ತದೆ'' ಎಂಬ ಭರವಸೆ ಕವಿತಾ ಆಂಗ್ರೆ ರವರಿಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+