ಭಾರತದ ಚಿನ್ನದ ಆಮದು ಕುಸಿತ: 2009ರ ನಂತರ ಅತ್ಯಂತ ಕಡಿಮೆ

ನವದೆಹಲಿ, ಜನವರಿ 05: ಜಗತ್ತಿನ ಎರಡನೇ ಅತಿ ದೊಡ್ಡ ಚಿನ್ನದ ಆಮದುದಾರ ದೇಶ ಭಾರತವು ದಶಕದಲ್ಲೇ ಅತಿ ಕಡಿಮೆ ಚಿನ್ನದ ಆಮದನ್ನು ದಾಖಲಿಸಿದೆ. 2009ರ ನಂತರ ಭಾರತವು ದಶಕದಲ್ಲೇ ಅತಿ ಕಡಿಮೆ ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ವಿಶ್ವ ಗೋಲ್ಡ್ ಕೌನ್ಸಿಲ್ ಮಾಹಿತಿಯ ಪ್ರಕಾರ ವಿದೇಶಿ ಮಾರುಕಟ್ಟೆಯಲ್ಲಿನ ಖರೀದಿಯು ಕಳೆದ ವರ್ಷದಲ್ಲಿ 275.5 ಟನ್‌ಗಳಿಗೆ ಇಳಿದಿದೆ. ಇದು 2009 ರ ನಂತರ ದಾಖಲಾದ ಅತ್ಯಂತ ಕಡಿಮೆ ಪ್ರಮಾಣವಾಗಿದೆ.

ಆದರೆ ಕಳೆದ ಡಿಸೆಂಬರ್‌ನಲ್ಲಿ ಚಿನ್ನದ ಆಮದು ಪ್ರಮಾಣವು ಶೇಕಡಾ 18ರಷ್ಟು ಏರಿಕೆ ಕಂಡು 55.4 ಟನ್‌ಗಳಿಗೆ ತಲುಪಿದೆ ಎನ್ನಲಾಗಿದ್ದು, ಅಧಿಕೃತ ಅಂಕಿ-ಅಂಶಗಳು ಹೊರಬೀಳಬೇಕಿದೆ.

Covid-19 Impact:Indias Gold Imports To Lowest Since 2009

ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸಲು ಲಾಕ್‌ಡೌನ್ ಸೇರಿದಂತೆ ಆರ್ಥಿಕತೆ ಹಿಂಜರಿತವು ಚಿನ್ನದ ಆಮದು ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಚಿಲ್ಲರೆ ಗ್ರಾಹಕರಿಂದ ಬೇಡಿಕೆ ಕಡಿಮೆಯಾಗಿದ್ದರೂ, ಲೋಹವು ಹೂಡಿಕೆದಾರರಿಗೆ ಆಶ್ರಯ ತಾಣವಾಗಿದೆ. ಆಗಸ್ಟ್‌ನಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದ ಚಿನ್ನದ ಭವಿಷ್ಯವು 2020 ರಲ್ಲಿ ಸುಮಾರು ಶೇಕಡಾ 30ರಷ್ಟು ಏರಿತು, ಇದು ಒಂಬತ್ತು ವರ್ಷಗಳಲ್ಲಿ ಅತಿದೊಡ್ಡ ಜಿಗಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+