ಕೊರೊನಾ ಪರಿಣಾಮ: ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯ
ನವದೆಹಲಿ, ಆಗಸ್ಟ್ 24: ದೇಶದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ಪರಿಣಾಮ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರಿದ್ದು, ಕೇಂದ್ರ ಸರ್ಕಾರದ ಆರ್ಥಿಕ ಗುರಿ ಸಾಧನೆ ಕಷ್ಟಸಾಧ್ಯವಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
Recommended Video
ತಮ್ಮನ ಅರ್ಹತೆ ಬಗ್ಗೆ ಮಾತನಾಡಿದ Priyanka Vadra... | Oneindia Kannada
2024-25ರ ವೇಳೆಗೆ ದೇಶವನ್ನು 350 ಲಕ್ಷ ಕೋಟಿ ಆರ್ಥಿಕತೆಯನ್ನಾಗಿ ರೂಪಿಸುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರವು ತನ್ನ ದೂರದ ಗುರಿಯನ್ನು ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
2019-20ರಲ್ಲಿ ಜಿಡಿಪಿ ಬೆಳವಣಿಗೆ 11 ವರ್ಷಗಳ ಕನಿಷ್ಠ ಮಟ್ಟವಾದ ಶೇಕಡಾ 5ಕ್ಕೆ ಇಳಿಕೆಯಾಗಿದೆ. ಲಾಕ್‌ಡೌನ್‌ದಿಂದಾಗಿ ಆರ್ಥಿಕತೆಯ ಬೆಳವಣಿಗೆ ಮತ್ತಷ್ಟು ಮಂದಗತಿಯಲ್ಲಿ ಸಾಗಿದೆ. ಜಿಡಿಪಿ ಮತ್ತು ತೆರಿಗೆ ಅನುಪಾತವು ಸದ್ಯ ಇರುವ ಶೇ. 16ರಿಂದಲೂ ಇಳಿಕೆ ಕಾಣಲಿದೆ.

ಸದ್ಯದ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಧ್ಯಮಾವಧಿಗೆ ಪ್ರಸಕ್ತ ಹಣಕಾಸು ವರ್ಷಕ್ಕೆ ಆರ್ಥಿಕ ಬೆಳವಣಿಗೆ ದರ, ತೆರಿಗೆ ಸಂಗ್ರಹ, ವಿತ್ತೀಯ ಕೊರತೆ ಹಾಗೂ ಹಣದುಬ್ಬರ ದರದಲ್ಲಿ ಪರಿಷ್ಕರಣೆ ಮಾಡಲಿದೆ.












Click it and Unblock the Notifications