ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಎಂಐಗೆ ವಿನಾಯಿತಿ: ಆರ್‌ಬಿಐ ಮಹತ್ವದ ಘೋಷಣೆಗಳ ಜಾರಿ ಹೇಗೆ?

By ಅನಿಲ್ ಆಚಾರ್
|
Google Oneindia Kannada News

ನವದೆಹಲಿ, ಮಾರ್ಚ್ 27: ಇಎಂಐ ಕಟ್ಟಲು ಮೂರು ತಿಂಗಳ ವಿನಾಯಿತಿ, ರೆಪೋ ದರ ಹಾಗೂ ರಿವರ್ಸ್ ರೆಪೋ ದರ, ಕ್ಯಾಶ್ ರಿಸರ್ವ್ ರೇಷಿಯೋ (ಸಿಆರ್ ಆರ್) ಭಾರೀ ಇಳಿಕೆ... ಊಹೆಗೂ ಮೀರಿದ ಶುಕ್ರವಾರ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಇಂತಹ ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡಿದೆ.

ಕೊರೊನಾವೈರಸ್ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ಕೇಂದ್ರ ಬ್ಯಾಂಕ್‌ ಈ ನಿರ್ಧಾರಗಳನ್ನು ತನ್ನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ತೆಗೆದುಕೊಂಡಿದೆ. ಆರ್‌ ಬಿಐನ ಗೌರ್ನರ್ ಶಕ್ತಿಕಾಂತ್ ದಾಸ್ ಅಧ್ಯಕ್ಷರಾಗಿರುವ ಈ ಸಮಿತಿಯ ಸಭೆ ಮುಂದಿನ ತಿಂಗಳ (ಏಪ್ರಿಲ್) ಮೊದಲ ವಾರದಲ್ಲಿ ನಡೆಯಬೇಕಿತ್ತು.

ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ

"ಹಣಕಾಸು ನೀತಿ ಮಂಡಳಿ ಸಭೆಯು ಏಪ್ರಿಲ್ ನಲ್ಲಿ ನಡೆಯಬೇಕಿತ್ತು. ಅದನ್ನು ಮುಂಚಿತವಾಗಿಯೇ ಮಾಡಿದ್ದು, 4-2ರ ಬಹುಮತದಲ್ಲಿ ರೆಪೋ ದರವನ್ನು 75 ಬೇಸಿಸ್ ಪಾಯಿಂಟ್ ಇಳಿಸಲು ನಿರ್ಧರಿಸಲಾಗಿದೆ. ಆ ಮೂಲಕ ರೆಪೋ ದರವನ್ನು 4.4%ಗೆ ತರಲಾಗಿದೆ (ವಾಣಿಜ್ಯ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ನಿಂದ ಪಡೆದ ಸಾಲಕ್ಕೆ ನೀಡುವ ಬಡ್ಡಿ ದರ ನಿರ್ಧಾರ ಆಗುವುದು ರೆಪೋ ದರದ ಮೇಲೆ)," ಎಂದು ಆರ್‌ಬಿಐ ಗೌರ್ನರ್ ಶಕ್ತಿಕಾಂತ ದಾಸ್ ಶುಕ್ರವಾರದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬ್ಯಾಂಕ್‌ಗಳಿಗೆ ಉಳಿತಾಯ

ಬ್ಯಾಂಕ್‌ಗಳಿಗೆ ಉಳಿತಾಯ

ಕ್ಯಾಶ್ ರಿಸರ್ವ್ ರೇಷಿಯೋದಲ್ಲಿ ಮುಂದಿನ ಒಂದು ವರ್ಷ ಕಾಲ 100 ಬೇಸಿಸ್ ಪಾಯಿಂಟ್ಸ್ ಕಡಿತದಂತಹ ಮಹತ್ವ ಘೋಷಣೆಯೂ ಆರ್‌ಬಿಐ ಕಡೆಯಿಂದ ಹೊರಬಿತ್ತು. ಕ್ಯಾಶ್ ರಿಸರ್ವ್ ರೇಷಿಯೋ ಅಂದರೆ, ವಾಣಿಜ್ಯ ಬ್ಯಾಂಕ್ ಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಳಿ ಕಡ್ಡಾಯವಾಗಿ ಠೇವಣಿ ಇಡಬೇಕಾದ ಮೊತ್ತ. ಇದನ್ನು ಕಡಿಮೆ ಮಾಡಿದರೆ. ವಾಣಿಜ್ಯ ಬ್ಯಾಂಕ್ ಗಳ ಬಳಿ ನಗದು ಉಳಿಯುತ್ತದೆ. ಅದನ್ನು ಸಾಲ ನೀಡುವುದಕ್ಕೆ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ಕೊರೊನಾ ಹಿನ್ನೆಲೆಯಲ್ಲಿ ಆರ್‌ಬಿಐ ತೆಗೆದುಕೊಂಡ ನಿರ್ಧಾರದಿಂದ ಬ್ಯಾಂಕ್ ಗಳ ಬಳಿ 1,37,000 ಕೋಟಿ ನಗದು ಉಳಿಯುತ್ತದೆ.

ಬಳಲಿದ ಆರ್ಥಿಕತೆಗೆ ಆಕ್ಸಿಜನ್

ಬಳಲಿದ ಆರ್ಥಿಕತೆಗೆ ಆಕ್ಸಿಜನ್

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಲಿಕ್ವಿಡಿಟಿ ಅಡ್ಜಸ್ಟ್ ಮೆಂಟ್ ಫೆಸಿಲಿಟಿ (ಎಲ್‌ಎಎಫ್) 90 ಬೇಸಿಸ್ ಪಾಯಿಂಟ್ ಕಡಿತ ಮಾಡಿ, 4 ಪರ್ಸೆಂಟ್ ಗೆ ಇಳಿಸಲಾಗಿದೆ. 3,74,000 ಕೋಟಿ ರುಪಾಯಿ ನಗದನ್ನು ವ್ಯವಸ್ಥೆಯೊಳಗೆ ತರುವ ಪ್ರಯತ್ನ ಮಾಡಲಾಗಿದೆ.

ಇಎಂಐ ಚಿಂತೆ ಬೇಕಿಲ್ಲ

ಇಎಂಐ ಚಿಂತೆ ಬೇಕಿಲ್ಲ

ಯಾವುದೇ ಬ್ಯಾಂಕ್ ಗಳಿಂದ ಪಡೆದ ಸಾಲಕ್ಕೆ (ಟರ್ಮ್ ಲೋನ್) ಮೂರು ತಿಂಗಳ ಇಎಂಐ ಮರುಪಾವತಿಯಿಂದ ವಿನಾಯಿತಿ ನೀಡಲು ಬ್ಯಾಂಕ್ ಗಳಿಗೆ ಅವಕಾಶ ನೀಡಲಾಗಿದೆ. ಇಎಂಐ ಅಂದರೆ, ಅಸಲು ಹಾಗೂ ಬಡ್ಡಿ ಮೊತ್ತ ಎರಡೂ ಒಳಗೊಂಡಿರುತ್ತದೆ. ನಗರ ಪ್ರದೇಶಗಳಲ್ಲಿ ಬದುಕುವ ಜನರಿಗೆ ಇಎಂಐ ಹೊಸತೇನಲ್ಲ. ಅದರ ಹೊಂದಾಣಿಕೆಗಾಗಿ ನಡೆಸುವ ಅಷ್ಟೂ ಕಸರತ್ತುಗಳಿಗೆ ಮೂರು ತಿಂಗಳ ಕಾಲ ವಿನಾಯಿತಿ ಸಿಗಲಿದೆ.

ಸಣ್ಣ ಉದ್ದಿಮೆದಾರರಿಗೆ ವಿನಾಯಿತಿ

ಸಣ್ಣ ಉದ್ದಿಮೆದಾರರಿಗೆ ವಿನಾಯಿತಿ

ಉದ್ಯಮಿಗಳು, ವ್ಯಾಪಾರಿಗಳ ವರ್ಕಿಂಗ್ ಕ್ಯಾಪಿಟಲ್ (ವ್ಯವಹಾರ ನಡೆಸಲು ಬೇಕಾದ ಬಂಡವಾಳ) ಸಾಲ ಪಡೆದಿದ್ದಲ್ಲಿ ಅಂದರೆ, ಓವರ್ ಡ್ರಾಫ್ಟ್ ಮತ್ತಿತರ ಸಾಲದ ಮೇಲಿನ ಬಡ್ಡಿ ದರ ಪಾವತಿಯಿಂದ ವಿನಾಯಿತಿ ನೀಡಬಹುದು. ಮೂರು ತಿಂಗಳ ನಂತರ ಈ ಇಎಂಐಗಳನ್ನು ಪಾವತಿಸಬೇಕು.

ಹಣ ಇಟ್ಟವರಿಗೆ ಚಿಂತೆ ಬೇಕಿಲ್ಲ

ಹಣ ಇಟ್ಟವರಿಗೆ ಚಿಂತೆ ಬೇಕಿಲ್ಲ

ಹೌಸಿಂಗ್ ಲೋನ್, ವಾಹನ ಸಾಲದಂಥ ದೀರ್ಘಾವಧಿ ಸಾಲವನ್ನು ಪಡೆದವರಿಗೂ ಬಡ್ಡಿಯಲ್ಲಿ ವಿನಾಯಿತಿ ಸಿಗಲಿದೆ. ಜತೆಗೆ, ಯಾವುದೇ ಬ್ಯಾಂಕ್ ನಲ್ಲಿ ಹಣ ಇಟ್ಟಿರುವ ಗ್ರಾಹಕರು ಅದರ ಸುರಕ್ಷತೆ ಬಗ್ಗೆ ಚಿಂತೆ ಮಾಡುವ ಅಗತ್ಯವೂ ಇಲ್ಲ ಎಂದು ಆರ್‌ಬಿಐ ಹೇಳಿದೆ. ಷೇರು ಮಾರ್ಕೆಟ್ ನಲ್ಲಿನ ಮಾರಾಟವು ಒತ್ತಡ ಹೆಚ್ಚಿಸುತ್ತದೆ. ಆದ್ದರಿಂದ ಲಾಂಗ್ ಟರ್ಮ್ ರೆಪೋ ಆಪರೇಷನ್ (ಎಲ್ ಟಿಆರ್ ಒ) ಫ್ಲೋಟಿಂಗ್ ದರದಲ್ಲಿ 1 ಲಕ್ಷ ಕೋಟಿ ರುಪಾಯಿಗೆ ಮೂರು ವರ್ಷದ ಅವಧಿಗೆ ಹರಾಜು ಆಯೋಜಿಸಲಾಗುವುದು ಎಂದು ಆರ್‌ಬಿಐ ಹೇಳಿದೆ. ಈ ಎಲ್ಲಾ ಕ್ರಮಗಳು ಕೊರೊನಾದಿಂದ ಕಂಗಾಲಾದ ಭಾರತೀಯರಿಗೆ, ಅದರಲ್ಲೂ ಮಧ್ಯಮ ವರ್ಗದವರಿಗೆ ಒಂದಷ್ಟು ನೆಮ್ಮದಿ ನೀಡಲಿವೆ.

English summary
Due to Corona effect, India suffering from major economic crisis. Here is the major announcement by RBI governor Shaktikanta Das.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X