9 ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ಕೊಟ್ಟ ಕಾಗ್ನಿಜೆಂಟ್

ಬೆಂಗಳೂರು, ಜುಲೈ 31: ಭಾರತದ ಪ್ರಮುಖ ಐಟಿ ಸಂಸ್ಥೆ, ಯುಎಸ್ ಮೂಲದ ಕಾಗ್ನಿಜೆಂಟ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಕಳೆದ ಮೂರು ತಿಂಗಳಿನಲ್ಲಿ ಸುಮಾರು 9000 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿರುವುದು ಬೆಳಕಿಗೆ ಬಂದಿದೆ.

ಕೊರೊನಾ ಆರ್ಥಿಕ ಸಂಕಷ್ಟ ಪರಿಸ್ಥಿತಿಯಲ್ಲಿ ಉದ್ಯೋಗ ಕಡಿತ ಮಾಡದಂತೆ ಪ್ರಧಾನಿ ಮೋದಿ ಕೂಡಾ ಐಟಿ ಸಂಸ್ಥೆಗಳಿಗೆ ಮನವಿ ಮಾಡಿದ್ದರು. ಆದರೆ ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ಕಾಗ್ನಿಜೆಂಟ್‌ ತನ್ನದೇ ಕಾನೂನು ಪಾಲಿಸುವಂತಿದೆ. 18 ಸಾವಿರಕ್ಕೂ ಅಧಿಕ ಮಂದಿಗೆ ಯಾವುದೇ ಪ್ರಾಜೆಕ್ಟ್ ನೀಡದೆ ಬೆಂಚ್ ನಲ್ಲಿರಿಸಲಾಗಿತ್ತು.

ಭಾರತದೆಲ್ಲೆಡೆ ಸುಮಾರು 18 ಸಾವಿರ ಉದ್ಯೋಗಿಗಳಿಗೆ ಸಾಮೂಹಿಕವಾಗಿ ರಾಜೀನಾಮೆ ನೀಡಲು ಕಂಪನಿ ಆಡಳಿತ ಮಂಡಳಿ ಒತ್ತಡ ಹೇರಿದೆ. ಈ ಸುದ್ದಿ ಬಗ್ಗೆ ಕರ್ನಾಟಕ ರಾಜ್ಯ ಐಟಿ/ ಐಟಿಯೇತರ ಉದ್ಯೋಗಿಗಳ ಯೂನಿಯನ್(KITU) ಗರಂ ಆಗಿದ್ದು, ಕಾನೂನು ಸಮರ ಆರಂಭಿಸಿದೆ.

Cognizant may have laid off over 9000 employees globally in three months

ಈಗ ಜಾಗತಿಕವಾಗಿ 9000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮಾರ್ಚ್ 31ರಂತೆ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆ 2,91, 700 ನಷ್ಟಿತ್ತು. ಜೂನ್ 30ರ ವೇಳೆಗೆ 2,81,200 ಆಗಿದೆ. 9,400 ಮಂದಿಯನ್ನು ಕಾರ್ಯಕ್ಷಮತೆ ಆಧಾರದ ಮೇಲೆ ತೆಗೆದು ಹಾಕಲಾಗಿದೆ, 1100 ಮಂದಿ ಸ್ವಯಂ ರಾಜೀನಾಮೆ ನೀಡಿದ್ದಾರೆ ಎಂದು ಸಂಸ್ಥೆ ಸಿಇಒ ಬ್ರಿಯಾನ್ ಹಂಫ್ರೈಸ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+