ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತ್ರೈಮಾಸಿಕ ಲಾಭ ಹಿನ್ನೆಲೆ: ಸಿಪ್ಲಾ ಲಿಮಿಟೆಡ್ ಷೇರುಗಳು ಶೇಕಡಾ 10ರಷ್ಟು ಏರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್‌ 10: ಪ್ರಮುಖ ಔಷಧಿ ತಯಾರಕ ಕಂಪನಿ ಸಿಪ್ಲಾ ಲಿಮಿಟೆಡ್ ಕಂಪನಿಯ ಷೇರುಗಳು ಶೇಕಡಾ 10ರಷ್ಟು ಏರಿಕೆ ಕಂಡಿದೆ. ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 566.04 ಕೋಟಿ ವರದಿಯಾದ ಬಳಿಕ ಷೇರುಪೇಟೆಯಲ್ಲಿ ಭರ್ಜರಿ ವಹಿವಾಟು ನಡೆದಿದೆ.

ಸೋಮವಾರ ಆರಂಭಿಕ ವಹಿವಾಟಿನಲ್ಲಿ ಉತ್ತಮ ಏರಿಕೆ ದಾಖಲಿಸಿರುವ ಸಿಪ್ಲಾ ಲಿಮಿಟೆಡ್ ಶೇಕಡಾ 10ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿ ಮಧ್ಯಾಹ್ನ 12.30ರ ಸುಮಾರಿಗೆ ಬಿಎಸ್‌ಇಯಲ್ಲಿ ಗರಿಷ್ಠ 811.60 ರೂಪಾಯಿಗೆ ಮುಟ್ಟಿದೆ.

ಬಾಟಾ ಇಂಡಿಯಾ ತ್ರೈಮಾಸಿಕ ವರದಿ: 101 ಕೋಟಿ ರೂ. ನಷ್ಟಬಾಟಾ ಇಂಡಿಯಾ ತ್ರೈಮಾಸಿಕ ವರದಿ: 101 ಕೋಟಿ ರೂ. ನಷ್ಟ

ಕಾರ್ಯಾಚರಣೆಯ ಆದಾಯವು ಜೂನ್ ತ್ರೈಮಾಸಿಕದಲ್ಲಿ ಶೇ. 9ರಷ್ಟು ಹೆಚ್ಚಳವಾಗಿ, 4,346.2 ಕೋಟಿ ರೂಪಾಯಿಗೆ ತಲುಪಿದೆ. ಭಾರತದ ವ್ಯವಹಾರವು ವರ್ಷಕ್ಕೆ ಶೇ. 10ರಷ್ಟು (ವೈ-ಒ-ವೈ) ಬೆಳವಣಿಗೆಯನ್ನು 1,608 ಕೋಟಿಗೆ ತೋರಿಸಿದೆ ಮತ್ತು ದಕ್ಷಿಣ ಆಫ್ರಿಕಾ, ಉಪ-ಸಹಾರನ್ ಆಫ್ರಿಕಾ ಮತ್ತು ಸಿಪ್ಲಾ ಗ್ಲೋಬಲ್ ಆಕ್ಸೆಸ್ (ಸಾಗಾ) ವ್ಯವಹಾರವು ಶೇ. 10 ರಷ್ಟು ಹೆಚ್ಚಳಗೊಂಡು 763 ಕೋಟಿಗೆ ತಲುಪಿದೆ.

Cipla Ltd Up 10 Percent After Q1 Net Profit

ಮತ್ತೊಂದೆಡೆ, ಉದಯೋನ್ಮುಖ ಮಾರುಕಟ್ಟೆಗಳು ಶೇ. 64ರಷ್ಟು ವ್ಯಾಪಾರದಲ್ಲಿ ಹೆಚ್ಚಳವನ್ನು ದಾಖಲಿಸಿದವು ಮತ್ತು ಯುರೋಪ್ ಶೇ. 19ರಷ್ಟು ಹೆಚ್ಚಳವನ್ನು 240 ಕೋಟಿಗೆ ತಲುಪಿದೆ.

ಆದಾಗ್ಯೂ, ಉತ್ತರ ಅಮೆರಿಕದ ವ್ಯವಹಾರವು ಶೇ. 9ರಷ್ಟು ವರ್ಷದಿಂದ ವರ್ಷಕ್ಕೆ ಕುಸಿದಿದೆ ಆದರೆ 2021ರ ಮೊದಲ ತ್ರೈಮಾಸಿಕದಲ್ಲಿ ಶೇ. 19ರಷ್ಟು ಅನುಕ್ರಮವಾಗಿ 1,021 ಕೋಟಿಗೆ ಏರಿತು.

English summary
Shares of Cipla Ltd gained as much as 10% after it posted a net profit of Rs. 566.04 crore in quarter ended June, an increase of 26.6% from Rs 447.15 crore a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X