ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಸ್ಟಾರ್ಟ್‌ ಅಪ್‌ಗಳಲ್ಲಿ ಚೀನಾದ ಹೂಡಿಕೆ ಇಳಿಕೆ

|
Google Oneindia Kannada News

ನವದೆಹಲಿ, ಆಗಸ್ಟ್‌ 15: ಭಾರತದೊಂದಿಗಿನ ಗಡಿ ವಿವಾದದ ಬಳಿಕ ಹಾಗೂ ವಿದೇಶಿ ನೇರ ಹೂಡಿಕೆ(ಎಫ್‌ಡಿಐ) ನಿಯಮಗಳಲ್ಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಈ ವರ್ಷ ಭಾರತೀಯ ಉದ್ಯಮಗಳಲ್ಲಿ ಚೀನಾದ ಹೂಡಿಕೆ ಕುಸಿದಿದೆ.

ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶಗಳ ಹೂಡಿಕೆಗೆ ಸರ್ಕಾರದ ಪೂರ್ವ ಅನುಮೋದನೆಯನ್ನು ಕಡ್ಡಾಯಗೊಳಿಸಿದ ನಂತರ ಚೀನಾ ಭಾರತದ ಸ್ಟಾರ್ಟ್‌ ಅಪ್‌ಗಳಲ್ಲಿ ಹಣ ಹೂಡಿಕೆಯನ್ನು ಕಡಿಮೆ ಮಾಡಿದೆ.

ಭಾರತದಲ್ಲಿ 2,000ಕ್ಕೂ ಅಧಿಕ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಇಸ್ರೇಲ್‌ ಕಂಪನಿಭಾರತದಲ್ಲಿ 2,000ಕ್ಕೂ ಅಧಿಕ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ ಇಸ್ರೇಲ್‌ ಕಂಪನಿ

ಚೀನಾದ ಹೂಡಿಕೆದಾರರು ಜನವರಿ ಮತ್ತು ಜುಲೈ ನಡುವೆ ಭಾರತೀಯ ಸ್ಟಾರ್ಟ್‌ಅಪ್‌ಗಳಲ್ಲಿ 166 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಇದು ಹಿಂದಿನ ವರ್ಷದ 197 ಮಿಲಿಯನ್ ಡಾಲರ್‌ಗೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ಡೀಲ್ ಅನಾಲಿಸಿಸ್ ಸಂಸ್ಥೆ ವೆಂಚರ್ ಇಂಟೆಲಿಜೆನ್ಸ್‌ನ ಡೇಟಾ ತೋರಿಸಿದೆ.

Chinese Investment Dips In Indian Startups

ಚೀನಾದ ಹೂಡಿಕೆದಾರರು ಕಳೆದ ವರ್ಷ ಭಾರತೀಯ ಆರಂಭಿಕ ಉದ್ಯಮಗಳಲ್ಲಿ ಒಟ್ಟು 641 ಮಿಲಿಯನ್ ಡಾಲರ್ ಹಣವನ್ನು ಹಾಕಿದ್ದರು. ಹೂಡಿಕೆಯ ಕುಸಿತವು ಏಪ್ರಿಲ್‌ನಲ್ಲಿ ಜಾರಿಗೆ ಬಂದ ನೆರೆಯ ರಾಷ್ಟ್ರಗಳಿಂದ ವಿದೇಶಿ ಹೂಡಿಕೆಗಳ ಸುತ್ತ ಸರ್ಕಾರದ ಕಠಿಣ ನಿಯಮಗಳನ್ನು ಅನುಸರಿಸುತ್ತದೆ. ಈ ಬದಲಾವಣೆಯು ಮುಖ್ಯವಾಗಿ ಚೀನಾದ ಹೂಡಿಕೆಗಳನ್ನು ನಿರ್ಬಂಧಿಸುವ ಗುರಿಯನ್ನು ಹೊಂದಿತ್ತು.

ಚೀನಾದ ದೊಡ್ಡ ಹೂಡಿಕೆದಾರರ ಮುಖ್ಯಸ್ಥರು ಹೆಚ್ಚು ಸ್ಪಷ್ಟತೆ ಬರುವವರೆಗೆ ಭಾರತದಲ್ಲಿ ಮತ್ತಷ್ಟು ಹೂಡಿಕೆ ಮಾಡುವುದಿಲ್ಲ ಎಂದು ಹೇಳಿದರು ಎನ್ನಲಾಗಿದೆ.

English summary
Chinese investments in Indian startups have fallen this year following changes in foreign direct investment (FDI) rules for countries that share a land border with India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X