ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ನಡುವೆ ಆರ್ಥಿಕವಾಗಿ ಮತ್ತೆ ಬಲಿಷ್ಠವಾಗುತ್ತಿದೆ ಚೀನಾ

By ಅನಿಕೇತ್
|
Google Oneindia Kannada News

ಕೊರೊನಾ ವೈರಸ್‌ನ ತವರೂರು ಚೀನಾದ ಆರ್ಥಿಕತೆ ದಾಖಲೆ ಮಟ್ಟದಲ್ಲಿ ಚೇತರಿಕೆ ಕಂಡಿದೆ. 2019ರ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್ ಚೀನಾದಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವೈರಸ್ ಹಬ್ಬಿದ್ದ ವುಹಾನ್ ಪ್ರದೇಶವನ್ನ ಲಾಕ್‌ಡೌನ್ ಮಾಡಲಾಗಿತ್ತು. ಲಾಕ್‌ಡೌನ್ ಬಳಿಕ ಚೀನಾದ ಆರ್ಥಿಕ ಸ್ಥಿತಿ ಸತತವಾಗಿ ಕುಸಿತ ಕಾಣುತ್ತಾ ಬಂದಿತ್ತು.

Recommended Video

Jio 5G, Jio tv+, Jio AR glasses and much more | Oneindia Kannada

ಆದರೆ ಈ ವರ್ಷದ 2ನೇ ತ್ರೈಮಾಸಿಕದಲ್ಲಿ ಚೀನಾ ಆರ್ಥಿಕತೆ ಶೇಕಡ 3.2 ರಷ್ಟು ಏರಿಕೆ ಕಂಡಿದೆ. ವಿಶ್ವದ 2ನೇ ಅತಿದೊಡ್ಡ ಆರ್ಥಿಕತೆ ಚೀನಾದ್ದು. ಆದರೆ ಕೊರೊನಾ ಹೊಡೆತ ಇಡೀ ಚೀನಾವನ್ನು ತತ್ತರಿಸುವಂತೆ ಮಾಡಿತ್ತು. ಇದಾದ ನಂತರ ಈ ವರ್ಷದ ಮೊದಲ 3 ತಿಂಗಳ ಅವಧಿಯಲ್ಲಿ ಚೀನಾ ಆರ್ಥಿಕತೆ ತೀವ್ರವಾಗಿ ಕುಸಿದಿತ್ತು. ಆದರೆ ಬಹುಬೇಗ ಕೊರೊನಾ ವೈರಸ್ ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದ ಚೀನಾದಲ್ಲಿ ಆರ್ಥಿಕ ಚೇತರಿಕೆ ಕಂಡುಬಂದಿದೆ.

ಚೀನಾ ಕಂಪನಿ ಹ್ಯುವೈ ಮೇಲೆ ನಿಷೇಧ ಹೇರಿದ ಯುಕೆಚೀನಾ ಕಂಪನಿ ಹ್ಯುವೈ ಮೇಲೆ ನಿಷೇಧ ಹೇರಿದ ಯುಕೆ

ಏಪ್ರಿಲ್‌ನಿಂದ ಜೂನ್ ನಡುವೆ ಚೀನಾದ ಜಿಡಿಪಿ ಶೇಕಡ 3.2 ರಷ್ಟು ಏರಿಕೆ ಕಂಡಿದೆ. ಡ್ರ್ಯಾಗನ್ ನಾಡು ಚೀನಾ ಜಗತ್ತಿನ ಉತ್ಪಾದನಾ ವಲಯಗಳಿಗೆ ಹಾಟ್‌ಸ್ಪಾಟ್.

ದಾಖಲೆ ಮಟ್ಟದಲ್ಲಿ ಚೇತರಿಕೆ ಕಂಡಿದೆ

ದಾಖಲೆ ಮಟ್ಟದಲ್ಲಿ ಚೇತರಿಕೆ ಕಂಡಿದೆ

ಚೀನಾದಿಂದಲೇ ಜಗತ್ತಿನ ಬಲಿಷ್ಠ ರಾಷ್ಟ್ರಗಳ ಇಂಡಸ್ಟ್ರಿಗೆ ಬೇಕಾಗಿರುವ ವಸ್ತುಗಳು ಪೂರೈಕೆ ಆಗುತ್ತವೆ. ವೈರಸ್ ದಾಳಿ ಆತಂಕದ ಹಿನ್ನೆಲೆಯಲ್ಲಿ ಚೀನಾದಲ್ಲಿನ ಕೈಗಾರಿಕೆಗಳು ಬಾಗಿಲು ಮುಚ್ಚಿದ್ದವು. ಆದರೆ ಮತ್ತೆ ಕಾರ್ಯಾರಂಭ ಮಾಡಿದ ಕೆಲವೇ ತಿಂಗಳಲ್ಲಿ ಚೀನಾದ ಆರ್ಥಿಕ ಸ್ಥಿತಿ ದಾಖಲೆ ಮಟ್ಟದಲ್ಲಿ ಚೇತರಿಕೆ ಕಂಡಿದೆ.

ತಜ್ಞರ ಲೆಕ್ಕಾಚಾರ ಬುಡಮೇಲು..!

ತಜ್ಞರ ಲೆಕ್ಕಾಚಾರ ಬುಡಮೇಲು..!

ಕೊರೊನಾ ಸುನಾಮಿಗೆ ಸಿಲುಕಿ ತತ್ತರಿಸಿದ್ದ ಚೀನಾದಲ್ಲಿ ಆತಂಕ ಶುರುವಾಗಿತ್ತು. ಮತ್ತೆ ಇಡೀ ಚೀನಾ ಬಡತನದ ಸುಳಿಗೆ ಸಿಲುಕುವ ಆತಂಕ ಎದುರಾಗಿತ್ತು. ಆದರೆ ಕೊರೊನಾ ಅಬ್ಬರ ನಿಯಂತ್ರಿಸುವಲ್ಲಿ ಯಶಸ್ವಿಯಾದ ಚೀನಾ ಆರ್ಥಿಕವಾಗಿ ಮತ್ತೆ ಪುಟಿದೆದ್ದಿದೆ. ಇದನ್ನ ಆರ್ಥಿಕ ತಜ್ಞರು ಮೊದಲೇ ಅಂದಾಜಿಸಿದ್ದರು. ಚೀನಾ ಆರ್ಥಿಕತೆ 2020ರ 2ನೇ ತ್ರೈಮಾಸಿಕದಲ್ಲಿ ಶೇಕಡ 2.5ರಷ್ಟು ಚೇತರಿಕೆ ಕಾಣಬಹುದು ಅಂತಾ ಆರ್ಥಿಕ ತಜ್ಞರು ಅಂದಾಜಿಸಿದ್ದರು. ಆದರೆ ತಜ್ಞರ ನಿರೀಕ್ಷೆಯನ್ನೂ ಮೀರಿ ಚೀನಾ ಪ್ರಗತಿ ಸಾಧಿಸಿದೆ. 2020ರ 2ನೇ ತ್ರೈಮಾಸಿಕದಲ್ಲಿ ಚೀನಾ ಜಿಡಿಪಿ ಶೇಕಡ 3.2 ರಷ್ಟು ಏರಿಕೆ ದಾಖಲಿಸಿದೆ.

ಚೀನಾಗೆ ನಡುಕ ಹುಟ್ಟಿಸಿತು ಅಮೆರಿಕಾ ಅಧ್ಯಕ್ಷ ಟ್ರಂಪ್ ತೀರ್ಮಾನಚೀನಾಗೆ ನಡುಕ ಹುಟ್ಟಿಸಿತು ಅಮೆರಿಕಾ ಅಧ್ಯಕ್ಷ ಟ್ರಂಪ್ ತೀರ್ಮಾನ

ಏಕೆ ಹೀಗಾಯ್ತು..?

ಏಕೆ ಹೀಗಾಯ್ತು..?

ಜಗತ್ತಿನಲ್ಲಿ ಅಮೆರಿಕ ಬಿಟ್ಟರೆ ಚೀನಾ ಆರ್ಥಿಕತೆಯೇ ಅತ್ಯಂತ ದೊಡ್ಡದು. ಸದ್ಯದ ಸ್ಥಿತಿ ನೋಡಿದರೆ ಬಲಿಷ್ಠ ರಾಷ್ಟ್ರ ಅಮೆರಿಕವನ್ನ ಹಿಂದಿಕ್ಕುವ ತಾಕತ್ತು ಇರೋದು ಚೀನಾಗೆ ಮಾತ್ರ. ಮೊದಲೇ ಕೊರೊನಾ ದಾಳಿಗೆ ಅಮೆರಿಕ ತತ್ತರಿಸಿದೆ. ಹೀಗಾಗಿ ಅಮೆರಿಕದಲ್ಲೀಗ ಆರ್ಥಿಕ ವಲಯ ಸಂಪೂರ್ಣ ಸ್ತಬ್ಧವಾಗಿದೆ. ಇದರ ಲಾಭ ಪಡೆದಿರುವ ಚೀನಾ ಮತ್ತೆ ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಚೀನಾದಿಂದ ಹೆಚ್ಚು ಸರಕುಗಳು ರಫ್ತಾಗುತ್ತಿವೆ. ಜಗತ್ತಿನಾದ್ಯಂತ ಬಹುಪಾಲು ರಾಷ್ಟ್ರಗಳು ಕೊರೊನಾ ನಿಯಂತ್ರಿಸಲು ಲಾಕ್‌ಡೌನ್ ಹೇರಿವೆ. ಇದು ಚೀನಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಈ ಎಲ್ಲಾ ಕಾರಣಗಳಿಂದ ಚೀನಾ ಜಿಡಿಪಿ ದರದಲ್ಲಿ ಐತಿಹಾಸಿಕ ಪ್ರಗತಿ ದಾಖಲಿಸಿದೆ.

ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?ಸಂಪದ್ಭರಿತ ಟ್ರಿಲಿಯನ್ ಡಾಲರ್ ಜಾಗಕ್ಕಾಗಿ ವರ್ಲ್ಡ್ ವಾರ್..?

ವೈರಸ್ ಗಿಫ್ಟ್ ಕೊಟ್ಟವರ ಮೇಲೆ ಕಣ್ಣು..!

ವೈರಸ್ ಗಿಫ್ಟ್ ಕೊಟ್ಟವರ ಮೇಲೆ ಕಣ್ಣು..!

ಈಗಾಗಲೇ ಕೊರೊನಾ ವೈರಸ್‌ಗೆ ‘ಚೀನಿ ವೈರಸ್' ಅಂತಾ ನಿಕ್ ನೇಮ್ ಇಡಲಾಗಿದೆ. ಇದರ ಬೆನ್ನಲ್ಲೇ ಚೀನಾ ಬೇಕಂತಲೇ ವೈರಸ್ ಹರಡಿದೆ ಅಂತಾ ಅಮೆರಿಕ ಸೇರಿದಂತೆ ವಿಶ್ವದ ದೈತ್ಯ ರಾಷ್ಟ್ರಗಳು ಆರೋಪಿಸುತ್ತಾ ಬಂದಿವೆ. ಇಷ್ಟೆಲ್ಲದರ ಮಧ್ಯೆ ಚೀನಾದಲ್ಲಿ ಆರ್ಥಿಕ ಪ್ರಗತಿ ಐತಿಹಾಸ ಮಟ್ಟದಲ್ಲಿ ದಾಖಲಾಗಿರುವುದು ಸಹಜವಾಗಿಯೇ ಜಗತ್ತಿನ ಕಣ್ಣು ಕುಕ್ಕುತ್ತಿದೆ. ಡ್ರ್ಯಾಗನ್ ನಾಡು ಇಷ್ಟು ಬೇಗ ಚೇತರಿಕೆ ಕಾಣಲು ಕಾರಣವೇನು ಅಂತಾ ಪ್ರಶ್ನಿಸುತ್ತಿವೆ. ಅದರಲ್ಲೂ ಚೀನಾ ವಿರುದ್ಧ ಆರ್ಥಿಕ ಸಮರ ಸಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮುಂದಿನ ದಿನಗಳಲ್ಲಿ ಚೀನಾ ಜೊತೆಗೆ ನೇರಾನೇರ ಸಮರ ಸಾರಿದರೂ ಅಚ್ಚರಿ ಪಡಬೇಕಿಲ್ಲ.

English summary
China reported that the country’s economy grew by 3.2% in the second quarter of the year, compared to a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X