• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭದ್ರತಾ ವೈಫಲ್ಯ, ಚೀನಾ ಮೊಬೈಲ್ ಸಂಸ್ಥೆ ಹೇಳಿದ್ದೇನು?

By Mahesh
|

ನವದೆಹಲಿ,ಅ.27: ಕಳೆದ ಕೆಲವು ದಿನಗಳ ಹಿಂದೆ ಭಾರತೀಯ ವಾಯು ಸೇನೆ ತನ್ನ ಸಿಬ್ಬಂದಿಗಳಿಗೆ ಚೀನಾ ಮೂಲದ ಹ್ಯಾಂಡ್ ಸೆಟ್ ಗಳನ್ನು ಬಳಸದಂಚೆ ಎಚ್ಚರಿಕೆ ನೀಡಿತ್ತು. ಚೀನಾದ ಕ್ಸಿಯೋಮಿ ರೆಡ್ಮಿ 1ಎಸ್ ಮೊಬೈಲ್ ಫೋನ್ ಬಳಸುವುದರಿಂದ ದೇಶದ ಭದ್ರತಾ ವ್ಯವಸ್ಥೆಯ ಗೌಪ್ಯತಾ ಮಾಹಿತಿ ಸೋರಿಕೆಯಾಗುವ ಸಾಧ್ಯತೆಯಿದೆ ಎಂದು ಸಂಶಯ ವ್ಯಕ್ತಪಡಿಸಿತ್ತು. ಈ ಬಗ್ಗೆ ಕೊನೆಗೂ ಎಚ್ಚೆತ್ತುಕೊಂಡ ಚೀನಾ ಕಂಪನಿ ಸುರಕ್ಷತಾ ನಿಯಮಗಳನ್ನು ಬದಲಾಯಿಸಿ ಗ್ರಾಹಕರ ಮಾಹಿತಿ ರಕ್ಷಣೆಗೆ ಮುಂದಾಗಿದೆ.

ಚೀನಾದ ಕ್ಸಿಯೋಮಿ ರೆಡ್ಮಿ ಸ್ಮಾರ್ಟ್ ಫೋನ್ ಬಳಸದೆ ಇರುವಂತೆ ವಾಯುಪಡೆ ವಿಭಾಗ ತನ್ನ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದವರಿಗೆ ತಾಕೀತು ಮಾಡಿತ್ತು, ಈ ಫೋನ್ ಗಳನ್ನು ಬಳಸುವುದರಿಂದ ಭದ್ರತಾ ವಿಷಯಗಳ ಡಾಟಾ ಚೀನಾಕ್ಕೆ ರವಾನೆಯಾಗುವ ಅಪಾಯವಿದೆ ಎಂದು ಎಚ್ಚರಿಸಿತ್ತು. ಅದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿದಿದ್ದ ಕ್ಸಿಯೋಮಿ(ಶಿಯೋಮಿ) ಸಂಸ್ಥೆ ಕೊನೆಗೂ ಉತ್ತರಿಸಿದೆ. [ಇ ಆಡಳಿತ ಸ್ನೇಹಿ ಭಾರತ್ ಫೋನ್ ನೋಡಿ]

ಏನಿದು ಸಮಸ್ಯೆ?: Xiaomi Redmi 1s ನಲ್ಲಿ ಸಂಭಾಷಣೆ ನಡೆಸಿದರೆ ಅದು ಮೊಬೈಲ್ ಬಳಸುತ್ತಿರುವವನ ಹೆಸರು, ಫೋನ್ ಸಂಖ್ಯೆ, ಐಎಂಇಡಿ ಮಾತ್ರವಲ್ಲದೆ ವಿಳಾಸ ಪುಸ್ತಕದಲ್ಲಿನ ಸಂಖ್ಯೆಗಳು ಮತ್ತು ಸಂದೇಶಗಳನ್ನು ಚೀನಾದಲ್ಲಿರುವ ಸರ್ವರ್ ಗಳಿಗೆ ರವಾನಿಸಲಿದೆ ಎಂಬುದನ್ನು ಖ್ಯಾತ ಸೆಕ್ಯೂರಿಟಿ ಸಲ್ಯೂಷನ್ ಕಂಪನಿ ಎಫ್ ಸೆಕ್ಯೂರ್ ಪರೀಕ್ಷೆ ಮೂಲಕ ಸಾಬೀತು ಮಾಡಿತ್ತು.

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ- ಇನ್) ಪ್ರಕಟಿಸಿದ ವರದಿ ಆಧಾರದ ಮೇಲೆ ಇತ್ತೀಚೆಗೆ ವಾಯುಪಡೆ ಅಧಿಕಾರಿಗಳು ಮೇಲ್ಕಂಡ ಎಚ್ಚರಿಕೆ ನೀಡಿದ್ದರು. [ಸುಮನ್ 'ಸ್ಮಾರ್ಟ್' ಫೋನ್ ಸ್ಟೆಥೋಸ್ಕೋಪ್]

ಅಂತಾರಾಷ್ಟ್ರೀಯ ಉಪಾಧ್ಯಕ್ಷ ಹುಗೊ ಬರ್ರಾ ಈ ಹೇಳಿಕೆ ನೀಡಿದ್ದು ನಿಮ್ಮ ಮಾಹಿತಿಯನ್ನು ಬೇರೆ ಸರ್ವರ್ ಗಳಿಗೆ ರವಾನಿಸುತ್ತಿದ್ದೇವೆ. ಅಕ್ಟೋಬರ್ ಕೊನೆಗೆ ಈ ಕಾರ್ಯ ಪೂರ್ಣಗೊಳ್ಳಲಿದ್ದು, ಗ್ರಾಹಕರು ಆತಂಕ ಪಡಬೇಕಾಗಿಲ್ಲ. ಸರ್ವರ್ ಗಳನ್ನು ಶೀಘ್ರದಲ್ಲೆ ಸಿಂಗಪುರ ಮುಂತಾದೆಡೆಗೆ ವರ್ಗಾಯಿಸಲಾಗುತ್ತದೆ ಎಂದಿದ್ದಾರೆ. [ಭಾರತ-ಚೀನಾ ದ್ವಿಪಕ್ಷೀಯ ಸಹಿ ಕಂಡ ಒಪ್ಪಂದ]

ಫ್ಲಿಪ್ ಕಾರ್ಟ್ ಮೂಲಕ ಭಾರತೀಯ ಗ್ರಾಹಕರಿಗೆ ಪರಿಚಯವಾದ ರೆಡ್ಮಿ 1 ಎಸ್ ಮೊಬೈಲ್ ಗಳು ಇ ಕಾಮರ್ಸ್ ಕ್ಷೇತ್ರದಲ್ಲಿ ಹೊಸ ದಾಖಲೆಯನ್ನು ಬರೆದಿದೆ. 7ನೇ ಫ್ಲಾಶ್ ಸೇಲ್ ನಲ್ಲಿ ಸುಮಾರು 90,000 ಹ್ಯಾಂಡ್ ಸೆಟ್ ಗಳನ್ನು ಕ್ಷಣಾರ್ಧದಲ್ಲಿ ಮಾರಾಟ ಮಾಡಿತ್ತು. 4.2 ಸೆಕೆಂಡುಗಳಲ್ಲಿ 40,000ಕ್ಕೂ ಅಧಿಕ ಹ್ಯಾಂಡ್ ಸೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿತ್ತು. ಭಾರತದಲ್ಲಿ ಮುಂದಿನ ಮಾರಾಟ ಅ.28ರಂದು ನಡೆಯಲಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Commenting on an Indian Air Force (IAF) advisory to its personnel against using Chinese 'Xiaomi Redmi 1s' phones, the smartphone maker has said it would ask the Indian authorities to address the issue about security of users' data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more