ಗ್ರೀನ್‌ಪೀಸ್ ಇಂಡಿಯಾ ಭಾರತದಿಂದಲೇ ಔಟ್
ನವದೆಹಲಿ, ನವೆಂಬರ್.07: ವಿದೇಶಿ ಹಣವನ್ನು ಬಳಸಿಕೊಂಡು ದೇಶದ್ರೋಹದ ಚಟುವಟಿಕೆ ನಡೆಸುತ್ತಿದೆ ಎಂಬ ಆರೋಪ ಹೊತ್ತು ಬ್ಯಾಂಕ್ ಖಾತೆ ಕಳೆದುಕೊಂಡಿದ್ದ ಎನ್ ಜಿಒ ಗ್ರೀನ್ ಪೀಸ್ ಇಂಡಿಯಾಕ್ಕೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಗ್ರೀನ್ ಪೀಸ್ ಇಂಡಿಯಾ ಎನ್‌ಜಿಒದ ನೋಂದಣಿಯನ್ನು ತಮಿಳುನಾಡಿನ ರಿಜಿಸ್ಟ್ರಾರ್ ಆಫ್ ಸೊಸೈಟೀಸ್ ರದ್ದು ಮಾಡಿದೆ.
ಗ್ರೀನ್ ಪೀಸ್ ಇಂಡಿಯಾಗೆ ವಿದೇಶದಿಂದ ಬರುವ ದೇಣಿಗೆಯನ್ನು ಪಡೆಯುವ ಅನುಮತಿಯನ್ನು ಕಳೆದ ವರ್ಷವೇ ನಿರ್ಬಂಧಿಸಲಾಗಿತ್ತು. ಕೇಂದ್ರ ಸರ್ಕಾರದ ಆದೇಶದಂತೆ ತಮಿಳುನಾಡಿನಲ್ಲಿ ನೋಂದಣಿಯಾಗಿದ್ದ ಸಂಸ್ಥೆ ತನ್ನ ಅಸ್ತಿತ್ವವನ್ನೆ ಇದೀಗ ಕಳೆದುಕೊಂಡಿದೆ.[ಗ್ರೀನ್ ಪೀಸ್ ಬ್ಯಾಂಕ್ ಖಾತೆ ಮುಟ್ಟುಗೋಲು]

ನಾವೇನು ತಪ್ಪು ಮಾಡಿಲ್ಲ. ಎಲ್ಲ ದಾಖಲೆಗಳು ಸರಿಯಾಗಿವೆ ಎಂದು ಗ್ರೀನ್‌ಪೀಸ್ ಇಂಡಿಯಾ ಹೇಳಿಕೆ ನೀಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಕೆಲಸವನ್ನು ಮೆಚ್ಚಿ ದೇಣಿಗೆ ನೀಡಲಾಗಿತ್ತು. ಆದರೆ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿದೆ ಎಂದು ಗ್ರೀನ್ ಪೀಸ್ ಇಂಡಿಯಾದ ನಿರ್ದೇಶಕಿ ವಿನುತಾ ಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.[ಗ್ರೀನ್ ಪೀಸ್ ಇಂಡಿಯಾ ದೇಣಿಗೆ ಪಡೆಯುವಂತಿಲ್ಲ]
ಗ್ರೀನ್ ಪೀಸ್ ಗೆ ಸೇರಿದ ಐಡಿಬಿಐ ಬ್ಯಾಂಕ್, ಐಸಿಐಸಿಐ ಮತ್ತು ಯೆಸ್ ಬ್ಯಾಂಕ್ ಖಾತೆಗಳನ್ನು ಕಳೆದ ಏಪ್ರಿಲ್ ನಲ್ಲಿಯೇ ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು. ಗುಪ್ತಚರ ದಳ ಗ್ರೀನ್ ಪೀಸ್ ಇಂಡಿಯಾ ಎನ್ ಜಿಒ ದೇಶದ್ರೋಹದ ಕೆಲಸದಲ್ಲಿ ತೊಡಗಿಕೊಂಡಿರುವ ಬಗ್ಗೆ ಸಮಗ್ರ ವರದಿಯೊಂದನ್ನು ನೀಡಿತ್ತು. ಗ್ರೀನ್ ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳೈ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು ಆಕೆಯ ಕಾರ್ಯಚಟುವಟಿಕೆಗಳು ಅನುಮಾನ ಹುಟ್ಟುಹಾಕುವಂತಿದ್ದವು ಎಂದು ಗುಪ್ತಚರ ದಳ ತಿಳಿಸಿತ್ತು.












Click it and Unblock the Notifications