ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ಗೆ ಮತ್ತೊಮ್ಮೆ ಹಿನ್ನಡೆ: ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ದುರ್ಬಳಕೆ?

|
Google Oneindia Kannada News

ನವದೆಹಲಿ, ನವೆಂಬರ್ 7: ಗೂಗಲ್ ಮತ್ತೊಮ್ಮೆ ದೊಡ್ಡ ಹಿನ್ನಡೆಯಾಗಲಿದೆ. ಸಿಸಿಐ ದಂಡವನ್ನು ಗೂಗಲ್‌ ಎದುರಿಸುತ್ತಿದೆ. ಸ್ಮಾರ್ಟ್ ಟಿವಿ ಮಾರುಕಟ್ಟೆಯಲ್ಲಿ ಗೂಗಲ್‌ ತನ್ನ ಹಿಡಿತವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ ಈ ಬಾರಿ ಗೂಗಲ್ ಸಿಸಿಐ (ಭಾರತದ ಸ್ಪರ್ಧಾತ್ಮಕ ಆಯೋಗ) ಕಣ್ಣಿಗೆ ಬಿದ್ದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವರು ಸಿಸಿಐನ ಮಹಾನಿರ್ದೇಶಕರ ಕಚೇರಿ ಈ ವಿಷಯದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಸಿಸಿಐ ತನ್ನ ಸ್ಮಾರ್ಟ್ ಟಿವಿ ಓಎಸ್ ಆಂಡ್ರಾಯ್ಡ್ ಟಿವಿ ಮೂಲಕ ಮಾರುಕಟ್ಟೆಯನ್ನು ಗೂಗಲ್‌ನಿಂದ ದುರುಪಯೋಗಪಡಿಸಿಕೊಂಡಿದೆ ಎಂದು ತನಿಖೆಗೆ ಆದೇಶಿಸಿತ್ತು.

ಕರ್ನಾಟಕದ ಈ ಗ್ರಾಮದಲ್ಲಿ ಮೊಬೈಲ್, ಟಿವಿ ನಿಷೇಧ! ಕರ್ನಾಟಕದ ಈ ಗ್ರಾಮದಲ್ಲಿ ಮೊಬೈಲ್, ಟಿವಿ ನಿಷೇಧ!

ವರದಿಯ ಪ್ರಕಾರ, ಗೂಗಲ್ ವಿರುದ್ಧ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲಾಗಿದೆ. ಅದರೊಂದಿಗೆ ಪರವಾನಗಿ ಒಪ್ಪಂದವನ್ನು ಮಾಡಿಕೊಳ್ಳದ ತಯಾರಕರಿಗೆ ಮಾರುಕಟ್ಟೆ ಪ್ರವೇಶವನ್ನು ಗೂಗಲ್‌ ನಿರ್ಬಂಧಿಸುತ್ತದೆ ಎಂದು ತನಿಖೆಯು ಕಂಡುಹಿಡಿದಿದೆ. ಗೂಗಲ್‌ ಪರವಾನಗಿ ಒಪ್ಪಂದಕ್ಕೆ ಪ್ರವೇಶಿಸಿದ ಟಿವಿ ತಯಾರಕರ ಉತ್ಪನ್ನಗಳಲ್ಲಿ Google Play Storeನ್ನು ಮೊದಲೇ ಸ್ಥಾಪಿಸಲಾಗಿದೆ. ಈ ಗೂಗಲ್‌ನ ಈ ಅನಿಯಂತ್ರಿತತೆಯನ್ನು ಒಪ್ಪಿಕೊಳ್ಳದ ತಯಾರಕರು ತಮ್ಮ ಟಿವಿಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್ ಸೇವೆಯನ್ನು ನೀಡಲು ಸಾಧ್ಯವಾಗುವುದಿಲ್ಲ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಾಗಿ ಸಿಸಿಐ ಶೀಘ್ರದಲ್ಲೇ ವರದಿಯನ್ನು ತೆಗೆದುಕೊಳ್ಳಲಿದ್ದು, ಈ ಆರೋಪಗಳಿಗೆ ಪ್ರತಿಕ್ರಿಯಿಸಲು ಗೂಗಲ್‌ಗೆ ಸಹ ಅವಕಾಶ ನೀಡಲಾಗುತ್ತದೆ.

CCI decision on alleged market dominance abuse by Google in smart TV bossiness

ಪರವಾನಗಿ ಪಡೆದ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮುಂಚೂಣಿಯಲ್ಲಿದೆ

ಮಾರುಕಟ್ಟೆಯ ಪ್ರಾಬಲ್ಯವನ್ನು ನಿರ್ಧರಿಸುವಾಗ ಸಿಸಿಐ, "ಸಂಬಂಧಿತ ಮಾರುಕಟ್ಟೆಗಳನ್ನು" ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದು ಪ್ರಕರಣದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಮಾರುಕಟ್ಟೆಯು ಸಂಪೂರ್ಣ ಸ್ಮಾರ್ಟ್ ಟಿವಿ ಮಾರುಕಟ್ಟೆಯಾಗಿರಬೇಕು ಎಂದು ಗೂಗಲ್ ಹೇಳುತ್ತದೆ. ಇನ್ನೂ ದೂರುದಾರರು ತನಿಖೆಗಾಗಿ ಪರವಾನಗಿ ಹೊಂದಿರುವ ಸ್ಮಾರ್ಟ್ ಟೆಲಿವಿಷನ್ ಮಾರುಕಟ್ಟೆಯನ್ನು ಮಾತ್ರ ಪರಿಗಣಿಸಲು ಸಿಸಿಐಗೆ ವಿನಂತಿಸಿದ್ದಾರೆ. "ಇಡೀ ಸ್ಮಾರ್ಟ್ ಟಿವಿ ಮಾರುಕಟ್ಟೆಯನ್ನು ಪರಿಗಣಿಸಿದರೆ, ಆಂಡ್ರಾಯ್ಡ್ ನಾಯಕತ್ವವನ್ನು ಹೊಂದಿಲ್ಲದಿರಬಹುದು, ಆದರೆ ನಾವು ಪರವಾನಗಿ ಪಡೆದ ಮಾರುಕಟ್ಟೆಯನ್ನು ನೋಡಿದರೆ, ಆಂಡ್ರಾಯ್ಡ್ ಮುಂಚೂಣಿಯಲ್ಲಿದೆ" ಎಂದು ಈ ವಿಷಯದ ಬಗ್ಗೆ ಖಾಸಗಿ ವಕೀಲರು ಸಿಸಿಐಗೆ ತಿಳಿಸಿದ್ದಾರೆ.

ಗೂಗಲ್ ವಕ್ತಾರರು ಸ್ಪಷ್ಟನೆ

ಗೂಗಲ್‌ ವಕ್ತಾರರು, "ಗೂಗಲ್‌ನ ಉಚಿತ ಪರವಾನಗಿ ಮಾದರಿಯಿಂದಾಗಿ ಭಾರತದಲ್ಲಿ ಉದಯೋನ್ಮುಖ ಸ್ಮಾರ್ಟ್ ಟಿವಿ ಉದ್ಯಮವು ಅಭಿವೃದ್ಧಿ ಹೊಂದುತ್ತಿದೆ ಹಾಗೂ Android TV ಹಲವು ಉತ್ತಮ TV OSಗಳಾದ FireOS, Tizen ಮತ್ತು webOSನೊಂದಿಗೆ ಹೊಂದಿಕೊಳ್ಳುತ್ತದೆ. ಆದರೆ, ಸ್ಮಾರ್ಟ್ ಟಿವಿ ಪರವಾನಗಿ ಪ್ರಕ್ರಿಯೆಯು ಯಾವುದೇ ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

English summary
In June 2021, CCI had ordered a probe into the alleged abuse of market dominance by Google’s smart television operating system Android TV after it found prima facie evidence. The commission was acting based on a complaint filed by lawyers of two trusts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X