80G ಅಡಿಯಲ್ಲಿ ನೋಂದಣಿ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ

ನವದೆಹಲಿ, ಏಪ್ರಿಲ್ 01: ಆದಾಯ ತೆರಿಗೆ ಕಾಯಿದೆ, 1961 (ಕಾಯಿದೆ) ನ ಪರಿಚ್ಛೇದ 10(23ಸಿ), 12A ಅಥವಾ 80G ಅಡಿಯಲ್ಲಿ ನೋಂದಣಿ ಅಥವಾ ಅನುಮೋದನೆ ಪಡೆಯಲು ಫಾರ್ಮ್ ನಂ.10ಎ.ಬಿ.ಯನ್ನು ಸಲ್ಲಿಸಲು ಬಿ.ಡಿ.ಟಿ. ಕೊನೆಯ ದಿನಾಂಕವನ್ನು ವಿಸ್ತರಿಸುತ್ತದೆ.

ಆದಾಯ ತೆರಿಗೆ ನಿಯಮಗಳು, 1962 ರ ನಿಯಮ 2ಸಿ ಅಥವಾ 11ಎ.ಎ ಅಥವಾ 17ಎ ಯಲ್ಲಿ ನಿಗದಿಪಡಿಸಿದಂತೆ ಫಾರ್ಮ್ ನಂ.10ಎ.ಬಿ.ಯ ಎಲೆಕ್ಟ್ರಾನಿಕ್ ಫೈಲಿಂಗ್‌ನಲ್ಲಿನ ತೊಂದರೆಗಳನ್ನು ಪರಿಗಣಿಸಿ, ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿ.ಬಿ.ಡಿ.ಟಿ.), ನಮೂನೆ ಸಂಖ್ಯೆ ವಿದ್ಯುನ್ಮಾನ ಫೈಲಿಂಗ್‌ ಗೆ ಕೊನೆಯ ದಿನಾಂಕವನ್ನು ವಿಸ್ತರಿಸುತ್ತದೆ.

ಫಾರ್ಮ್ ನಂ.10ಎಬಿ ನಲ್ಲಿ ಪರಿಛೇದ 10(23ಸಿ), 12ಎ ಅಥವಾ 80ಜಿ ಕಾಯ್ದೆಯ ಅಡಿಯಲ್ಲಿ ನೋಂದಣಿ ಅಥವಾ ಅನುಮೋದನೆಗಾಗಿ ಅರ್ಜಿಯನ್ನು ಸಲ್ಲಿಸಲು ಈ ಮೊದಲು ಇದ್ದ ಕೊನೆಯ ದಿನಾಂಕ 29ನೇ ಸೆಪ್ಟೆಂಬರ್, 2022 ಆಗಿತ್ತು.

CBDT extends last date for filing of Form No.10AB


ಈ ದಿನಾಂಕವನ್ನು ಮುಂದೂಡಲಾಗಿದ್ದು 30ನೇ ಸೆಪ್ಟೆಂಬರ್, 2022 ರವರೆಗೆ ವಿಸ್ತರಿಸಲಾಗಿದೆ. ಈ ನಿಟ್ಟಿನಲ್ಲಿ ಸಿ.ಬಿ.ಡಿ.ಟಿ. ಯು ಸುತ್ತೋಲೆ ನಂ.08/2022 ರಲ್ಲಿ ಎಫ್ 197/59/2022-ಐ.ಟಿ.ಎ-I ಅನ್ನು ದಿನಾಂಕ 31.03.2022 ರಂದು ಹೊರಡಿಸಲಾಗಿದೆ.

ಹೊಸ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ನಿಯಮದಲ್ಲಿ ಹಲವಾರು ಬದಲಾವಣೆಗಳು ಆಗಲಿದೆ. ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಬದಲಾವಣೆಯನ್ನು ಘೋಷಣೆ ಮಾಡಿಲ್ಲ. ಆದರೆ ಆದಾಯ ತೆರಿಗೆ ಸಂಬಂಧಿತ ಹಲವಾರು ಬದಲಾವಣೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಕ್ರಿಪ್ಟೋ ಸ್ವತ್ತುಗಳ ಮೇಲಿನ ಆದಾಯ ತೆರಿಗೆ, ರಿಟರ್ನ್‌ಗಳ ಫೈಲಿಂಗ್, ಇಪಿಎಫ್ ಬಡ್ಡಿಯ ಮೇಲಿನ ಹೊಸ ತೆರಿಗೆ ನಿಯಮಗಳು ಮತ್ತು ಕೋವಿಡ್-19 ಚಿಕಿತ್ಸೆಯ ಮೇಲಿನ ತೆರಿಗೆ ವಿನಾಯಿತಿಗಳು 1 ಏಪ್ರಿಲ್ 2022 ರಿಂದ ಜಾರಿಗೆ ಬರುವ ಕೆಲವು ಪ್ರಮುಖ ಬದಲಾವಣೆಗಳಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+