ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ 100% ಅನುಮತಿ

Posted By:
Subscribe to Oneindia Kannada

ನವದೆಹಲಿ, ಜನವರಿ 10: ಸಿಂಗಲ್ ಬ್ರ್ಯಾಂಡ್ ನಲ್ಲಿ ಶೇ100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ ಡಿಐ)ಗೆ ಅನುಮತಿ ನೀಡಲು ಕೇಂದ್ರ ಸಚಿವ ಸಂಪುಟ ಬುಧವಾರ ನಿರ್ಧಾರ ಕೈಗೊಂಡಿದೆ.

ಭಾರತಕ್ಕೆ ಎಫ್ ಡಿಐ ಹೊಸ ವಿಷಯವೇನಲ್ಲ. ಯುಪಿಎ ಸರ್ಕಾರದ ಕಾಲದಿಂದಲೂ ಎಫ್ ಡಿಐಗೆ ಅವಕಾಶ ನೀಡಲಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐ ಈಗಾಗಲೇ ಹೋಲ್ ಸೇಲ್, ಬ್ಯಾಂಕಿಂಗ್, ವಿಮಾ ಕ್ಷೇತ್ರದಲ್ಲಿ ಜಾರಿಯಲ್ಲಿದೆ.

Cabinet nod for 100% FDI in single-brand retail via automatic route

ಈಗ ಇನ್ನಷ್ಟು ಕ್ಷೇತ್ರಗಳಿಗೆ ವಿಸ್ತರಿಸಲಾಗಿದೆ. ವಿಮಾನಯಾನ ಕ್ಷೇತ್ರ ಸೇರಿದಂತೆ ಅನೇಕ ಕ್ಷೇತಗಳಲ್ಲಿ ಶೇ 49ರಷ್ಟು ಸ್ವಯಂ ಚಾಲಿತ ನೇರ ಹೂಡಿಕೆಗೆ ಅವಕಾಶವಿದೆ.

ಚಿಲ್ಲರೆ ಮಾರುಕಟ್ಟೆ ಎಫ್ ಡಿಐ: ಲಾಭವೋ? ನಷ್ಟವೋ?

ಸಿಂಗಲ್ ಬ್ರ್ಯಾಂಡ್ ನಲ್ಲಿ ಎಫ್ ಡಿಐಗೆ ಅವಕಾಶ ನೀಡಿರುವುದರಿಂದ ಆರ್ಥಿಕ ಪ್ರಗತಿ ಕಾಣಬಹುದು. ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಂಕ್ರಾಂತಿ ವಿಶೇಷ ಪುಟ

ಎಫ್ ಡಿಐ ಮೂಲಕ ಇಲ್ಲಿನ ಮಾರುಕಟ್ಟೆ ಪ್ರವೇಶಿಸುವ ಸಂಸ್ಥೆಗಳ ಉತ್ಪನ್ನ 'ಸಿಂಗಲ್‌ ಬ್ರ್ಯಾಂಡ್‌' ಆಗಿರಬೇಕು. ಅದೇ ಬ್ರ್ಯಾಂಡ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡಬೇಕು ಎಂಬ ಷರತ್ತಿನ ಅಡಿಯಲ್ಲಿ ಹೂಡಿಕೆಗೆ ಅನುಮತಿ ನೀಡಲಾಗಿದೆ. ಇದಲ್ಲದೆ, ರಿಯಲ್‌ ಎಸ್ಟೇಟ್‌ ಕ್ಷೇತ್ರಗಳಲ್ಲಿನ ಎಫ್‌ಡಿಐ ನಿಯಮಾವಳಿಗೆ ಸಡಿಲಿಕೆ ಮಾಡಲಾಗಿದೆ.

ಸಾಲದ ಹೊರೆ ಹೊತ್ತು ಕುಸಿಯುತ್ತಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಸಂಸ್ಥೆ ಮೇಲೆತ್ತಲು ಶೇ 49ರಷ್ಟು ಎಫ್ ಡಿಐ ಅನುಕೂಲಕರ. ಇದಕ್ಕಿಂತ ಹೆಚ್ಚಿನ ಪ್ರಮಾಣದ ಹೂಡಿಕೆಗೆ ಸರ್ಕಾರದ ಅನುಮತಿ ಅಗತ್ಯ.

ದಿನಪತ್ರಿಕೆಗಳ ಮೇಲೆ ಶೇ. 49 ಎಫ್‌ಡಿಐ ಹೂಡಿಕೆಗೆ ಅವಕಾಶ

ದೇಶದ ಚಿಲ್ಲರೆ ಕ್ಷೇತ್ರ, ಮಲ್ಟಿ ಬ್ರ್ಯಾಂಡ್ ರೀಟೈಲ್ ನಲ್ಲಿ ಎಫ್ ಡಿಐ ಜಾರಿಗೊಂಡರೆ ದೇಶದ ಸಣ್ಣ ಉದ್ಯಮಿಗಳ ಬದುಕಿಗೆ ಮಾರಕವಾಗಲಿದೆ. ಸದ್ಯದ ಪರಿಸ್ಥಿತಿ ಮೆಗಾ ಸ್ಟೋರ್ ಗಳಿಗೆ ಮಣೆ ಹಾಕುವುದಿಲ್ಲ. ಮಲ್ಟಿ ಬ್ರ್ಯಾಂಡ್ ರೀಟೈಲ್ ಕ್ಷೇತ್ರವನ್ನು ಬಿಟ್ಟು ಉಳಿದ ಕ್ಷೇತ್ರಗಳಲ್ಲಿ ಎಫ್ ಡಿಐಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಇದರಿಂದ ಹೆಚ್ಚಿನ ಉದ್ಯೋಗವಕಾಶ ಕೂಡಾ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Union Cabinet on Wednesday approved a proposal to allow 100 per cent FDI or foreign direct investment through automatic route in single brand retail.The Cabinet also allowed foreign airlines to invest up to 49 per cent in national carrier Air India under the approval route. This move is expected to expedite the Air India divestment process.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ