ಬರ್ಗರ್ ಕಿಂಗ್ ಇಂಡಿಯಾ IPOಗೆ 156 ಪಟ್ಟು ಬಿಡ್!
ಮುಂಬೈ, ಡಿಸೆಂಬರ್ 04: ಶೀಘ್ರ ಸೇವೆ ಒದಗಿಸುವ ರೆಸ್ಟೋರೆಂಟ್ ಜಾಲವಾದ ಬರ್ಗರ್ ಕಿಂಗ್ ಇಂಡಿಯಾ ಐಪಿಒಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಮೂಲ ಬೆಲೆಗೆ 156 ಪಟ್ಟು ಬಿಡ್ ಆಗಿದೆ.
ಷೇರು ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 810 ಕೋಟಿ ರೂ.ಗಳ ಐಪಿಒ ಗಾತ್ರದ 7.45 ಕೋಟಿ ಇಕ್ವಿಟಿ ಷೇರುಗಳ ವಿರುದ್ಧ 1,166 ಕೋಟಿ ಇಕ್ವಿಟಿ ಷೇರುಗಳಿಗೆ (156.65 ಪಟ್ಟು) ಬಿಡ್ ಪಡೆದಿದೆ.
ಡಿಸೆಂಬರ್ 2 ರಿಂದ 4ರವರೆಗೆ ನಡೆದ ಐಪಿಒ ಬಿಡ್ ಪ್ರಕ್ರಿಯೆಯಲ್ಲಿ ಚಿಲ್ಲರೆ ಹೂಡಿಕೆದಾರರು 3 ನೇ ದಿನದಂದು 68.14 ಬಾರಿ ಬಿಡ್ ಮಾಡಿದ್ದಾರೆ. ಐಪಿಒನ ಎರಡನೆಯ ದಿನ, ಸಂಸ್ಥೆಯು ಸಂಚಿಕೆ ಗಾತ್ರಕ್ಕಿಂತ 9.38 ಪಟ್ಟು, ಮೊದಲ ದಿನದಂದು 3.13 ಪಟ್ಟು ಚಂದಾದಾರಿಕೆಯನ್ನು ಪಡೆಯಿತು.

ಅಮೆರಿಕಾ ಮೂಲದ ಭಾರತೀಯ ಅಂಗಸಂಸ್ಥೆಯಾದ ಬರ್ಗರ್ ಕಿಂಗ್ ಇಂಡಿಯಾ ಲಿಮಿಟೆಡ್ ಒಟ್ಟು 810 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದು, ಪ್ರವರ್ತಕರಿಗೆ ಪ್ರತಿ ಷೇರಿಗೆ 44 ರುಪಾಯಿಯಂತೆ 58.08 ಕೋಟಿ ರುಪಾಯಿ ಹಾಗೂ 58.50 ರುಪಾಯಿ ಪ್ರತಿ ಷೇರಿಗೆ ಎಂಬಂತೆ 92 ಕೋಟಿ ರೂ. ಪೂರ್ವ ಐಪಿಒ ಹಣವನ್ನು ಸಂಗ್ರಹಿಸಿದೆ. ಹೀಗಾಗಿ ಷೇರುಗಳ ಹೊಸ ವಿತರಣೆಯು 600 ಕೋಟಿಯಿಂದ 450 ಕೋಟಿ ರೂಪಾಯಿಗೆ ತಲುಪಿದೆ.
ನವೆಂಬರ್ 2014 ರಲ್ಲಿ ತನ್ನ ಮೊದಲ ರೆಸ್ಟೋರೆಂಟ್ ಅನ್ನು ತೆರೆದ ನಂತರ, ಕಂಪನಿಯು ತನ್ನ ಉತ್ತಮ ಕಾರ್ಯ ನಿರ್ವಹಣೆ ಮೂಲಕ ಹೆಸರುವಾಸಿಯಾಗಿದೆ. 30 ಜೂನ್ 2019 ರ ಹೊತ್ತಿಗೆ, ಇದು 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತ್ತು ಭಾರತದಾದ್ಯಂತ 47 ನಗರಗಳಲ್ಲಿ ಏಳು ಉಪ ಫ್ರ್ಯಾಂಚೈಸ್ಡ್ ಬರ್ಗರ್ ಕಿಂಗ್ ರೆಸ್ಟೋರೆಂಟ್‌ಗಳನ್ನು ಒಳಗೊಂಡಂತೆ 202 ರೆಸ್ಟೋರೆಂಟ್‌ಗಳನ್ನು ಹೊಂದಿತ್ತು.












Click it and Unblock the Notifications