ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇ ವರ್ಷದಲ್ಲಿ ಭಾರತದಾದ್ಯಂತ ಸಂಚರಿಸಲಿವೆ 35 ಹೊಸ ಹೈಡ್ರೋಜನ್, 500 ವಂದೇ ಭಾರತ್ ರೈಲುಗಳು, 58,000 ವ್ಯಾಗನ್‌ಗಳು- ವರದಿ ಓದಿ

|
Google Oneindia Kannada News

ನವದೆಹಲಿ, ಜನವರಿ 20: 2023-24ರ ಕೇಂದ್ರ ಬಜೆಟ್‌ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. 2023 ರ ಬಜೆಟ್ ರೈಲ್ವೆಗೆ ಸಾಕಷ್ಟು ಅನುದಾನ ನೀಡಬಹುದು ಎಂದು ವರದಿಯಾಗಿದೆ. ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ವಂದೇ ಭಾರತ್‌ ರೈಲುಗಳು ಈಗಾಗಲೇ ಸಂಚಾರ ನಡೆಸಿವೆ. ಅತೀ ವೇಗದೊಂದಿಗೆ ಸಂಚರಿಸುವ ಈ ರೈಲುಗಳು ಜನಪ್ರಿಯಗೊಂಡಿವೆ. ಇನ್ನು ಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೊಸ ಹೈಡ್ರೋಜನ್‌ ರೈಲುಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ದೇಶದ ಪ್ರಮುಖ ನಗರಗಳ ನಡುವಿನ ಮಾರ್ಗಗಳಲ್ಲಿ ಹೈ ಸ್ಪೀಡ್‌ ರೈಲುಗಳ ಸಂಚಾರ ಆರಂಭವಾಗಲಿದೆ. ಇದೇ ವರ್ಷದಲ್ಲಿ ಈ ರೈಲುಗಳನ್ನು ಹೊರತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಗಳು ಹೇಳಿವೆ. ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಕೇಂದ್ರ ಬಜೆಟ್‌ ಮಂಡಿಸಲಿದ್ದಾರೆ.

 ಬೆಂಗಳೂರು- ಹುಬ್ಬಳ್ಳಿ ಮಾರ್ಗದಲ್ಲಿ 130 ಕಿಮೀ ವೇಗವಾಗಿ ಚಲಿಸಲಿವೆ ಹೈ ಸ್ಪೀಡ್ ರೈಲುಗಳು- ನೈರುತ್ಯ ರೈಲ್ವೆಯ ಹೊಸ ಯೋಜನೆ ಏನು? ಬೆಂಗಳೂರು- ಹುಬ್ಬಳ್ಳಿ ಮಾರ್ಗದಲ್ಲಿ 130 ಕಿಮೀ ವೇಗವಾಗಿ ಚಲಿಸಲಿವೆ ಹೈ ಸ್ಪೀಡ್ ರೈಲುಗಳು- ನೈರುತ್ಯ ರೈಲ್ವೆಯ ಹೊಸ ಯೋಜನೆ ಏನು?

ಕೇಂದ್ರ ಬಜೆಟ್‌ ಬಗೆಗಿನ ನಿರೀಕ್ಷೆಗಳೇನು?

ಕೇಂದ್ರ ಬಜೆಟ್‌ ಬಗೆಗಿನ ನಿರೀಕ್ಷೆಗಳೇನು?

'ಟೈಮ್ಸ್‌ ಆಫ್‌ ಇಂಡಿಯಾ' ವರದಿಯ ಪ್ರಕಾರ, ಮುಂಬರುವ ಬಜೆಟ್ 2023 ರಲ್ಲಿ, ಸರ್ಕಾರವು 35 ಹೊಸ ಹೈಡ್ರೋಜನ್ ಇಂಧನ ರೈಲುಗಳು ಮತ್ತು ಸುಮಾರು 500 ಹೊಸ ವಂದೇ ಭಾರತ್ ರೈಲುಗಳನ್ನು ಘೋಷಿಸಬಹುದು. ಇದರ ಜೊತೆಗೆ, ಸರ್ಕಾರವು ಸುಮಾರು 4,000 ಹೊಸದಾಗಿ ವಿನ್ಯಾಸಗೊಳಿಸಲಾದ ಆಟೋಮೊಬೈಲ್ ಕ್ಯಾರಿಯರ್ ಕೋಚ್‌ಗಳನ್ನು ಮತ್ತು ಸುಮಾರು 58,000 ವ್ಯಾಗನ್‌ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಹೊರತರುವ ನಿರೀಕ್ಷೆಯಿದೆ ಎಂದು ಹೇಳಬಹುದು.

1.9 ಲಕ್ಷ ಕೋಟಿ ರೂ.ಗಳ ಹಂಚಿಕೆ?

1.9 ಲಕ್ಷ ಕೋಟಿ ರೂ.ಗಳ ಹಂಚಿಕೆ?

ಮುಂಬರುವ 2023-24ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ ಸುಮಾರು 1.9 ಲಕ್ಷ ಕೋಟಿ ರೂ.ಗಳ ಹಂಚಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಏಕೆಂದರೆ ಸರ್ಕಾರವು ತನ್ನ ರೋಲಿಂಗ್ ಸ್ಟಾಕ್ ಅನ್ನು ಆಧುನೀಕರಿಸುವುದು, ಟ್ರ್ಯಾಕ್‌ಗಳ ವಿದ್ಯುದ್ದೀಕರಣ ಮತ್ತು ಮುಂತಾದವುಗಳ ಮೇಲೆ ಗಮನ ಹರಿಸಿದೆ ಎಂದು ವರದಿ ಹೇಳಿದೆ.

 ಹೈಡ್ರೋಜನ್ ರೈಲುಗಳಿಗೆ ಹೆಚ್ಚು ಮಹತ್ವ

ಹೈಡ್ರೋಜನ್ ರೈಲುಗಳಿಗೆ ಹೆಚ್ಚು ಮಹತ್ವ

ಸರ್ಕಾರವು ವಿವಿಧ ಪ್ರಮುಖ ಮಾರ್ಗಗಳಿಗೆ ವಂದೇ ಭಾರತ್ ರೈಲುಗಳನ್ನು ಪ್ರಾರಂಭಿಸಿದೆ. ಆಧುನಿಕ ಮತ್ತು ಸುಧಾರಿತ ರೈಲುಗಳ ಹೊರತಾಗಿ, ಈ ರೈಲುಗಳು ಅವುಗಳ ವೇಗಕ್ಕೆ ಹೆಸರುವಾಸಿಯಾಗಿದೆ. ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ. ಹೆಚ್ಚುವರಿಯಾಗಿ, ರೈಲ್ವೆಯು ಕೆಲವು ಮಾರ್ಗಗಳಲ್ಲಿ ಹೈಡ್ರೋಜನ್ ಇಂಧನ ರೈಲುಗಳನ್ನು ಓಡಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.

ಪ್ರೀಮಿಯರ್ ರೈಲುಗಳ 1,000 ಕೋಚ್‌ ನವೀಕರಣ

ಪ್ರೀಮಿಯರ್ ರೈಲುಗಳ 1,000 ಕೋಚ್‌ ನವೀಕರಣ

ರೋಲಿಂಗ್ ಸ್ಟಾಕ್ ಆಧುನಿಕರಣಗೊಳ್ಳಲಿದೆ. ಸರ್ಕಾರವು ಮೂರು ವರ್ಷಗಳಲ್ಲಿ ಆಧುನಿಕರಣಗೊಳಿಸುವ ಕಾರ್ಯವನ್ನು ಮುಗಿಸಲಿದೆ. ಇದಕ್ಕೆ ಸುಮಾರು 2.7 ಲಕ್ಷ ಕೋಟಿ ರೂ ವೆಚ್ಚವಾಗಲಿದೆ. ಹೊಸ ರೋಲಿಂಗ್ ಸ್ಟಾಕ್ ಜೊತೆಗೆ, ಸರ್ಕಾರವು 100 ವಿಸ್ಟಾಡೋಮ್ ಕೋಚ್‌ಗಳನ್ನು ತಯಾರಿಸಲು ಮತ್ತು ಪ್ರೀಮಿಯರ್ ರೈಲುಗಳ 1,000 ಕೋಚ್‌ಗಳನ್ನು ನವೀಕರಿಸಲು ಯೋಜಿಸಬಹುದು ಎಂದು ವರದಿ ಹೇಳಿದೆ.

ಈಗಿರುವ ವಂದೇ ಭಾರತ್‌ ರೈಲುಗಳು

ಈಗಿರುವ ವಂದೇ ಭಾರತ್‌ ರೈಲುಗಳು

1- ವಾರಣಾಸಿ - ನವದೆಹಲಿ (22435)/ ನವದೆಹಲಿ - ವಾರಣಾಸಿ (22436)
2. ನವದೆಹಲಿ - ಕತ್ರಾ (22439) / ಕತ್ರಾ-ನವದೆಹಲಿ (22440)
3. ಮುಂಬೈ ಸೆಂಟ್ರಲ್- ಗಾಂಧಿನಗರ (20901)/ ಗಾಂಧಿನಗರ -ಮುಂಬೈ ಸೆಂಟ್ರಲ್ (20902)
4. ನವದೆಹಲಿ - ಅಂಬ್ ಅಂಡೌರಾ (22447) / ಅಂಬ್ ಅಂಡೌರಾ - ನವದೆಹಲಿ (22448)
5. ಚೆನ್ನೈ - ಮೈಸೂರು (20607)/ ಮೈಸೂರು- ಚೆನ್ನೈ (20608)
6. ಬಿಲಾಸ್ಪುರ್ ಜಂಕ್ಷನ್ - ನಾಗ್ಪುರ ಜಂಕ್ಷನ್ (20825) /ನಾಗ್ಪುರ - ಬಿಲಾಸ್ಪುರ್ ಜಂಕ್ಷನ್ (20826)
7. ಹೌರಾ-ನ್ಯೂ ಜಲ್ಪೈಗುರಿ (22301) /ಹೊಸ ಜಲ್ಪೈಗುರಿ ಜಂಕ್ಷನ್ - ಹೌರಾ (22302)
8. ಸಿಕಂದರಾಬಾದ್ - ವಿಶಾಖಪಟ್ಟಣಂ (20834) / ವಿಶಾಖಪಟ್ಟಣಂ - ಸಿಕಂದರಬಾ (20833)

ಭಾರತದಲ್ಲಿ ಹೈ ಸ್ಪೀಡ್‌ ರೈಲುಗಳು

ಭಾರತದಲ್ಲಿ ಹೈ ಸ್ಪೀಡ್‌ ರೈಲುಗಳು

1- ವಂದೇ ಭಾರತ್ ಎಕ್ಸ್‌ಪ್ರೆಸ್ - ರೈಲು 18 (22439), 180 ಕಿಮೀ/ಗಂ
2- ಗತಿಮಾನ್ ಎಕ್ಸ್‌ಪ್ರೆಸ್ (12049/12050), 160 ಕಿಮೀ/ಗಂ
3- ನವದೆಹಲಿ - ಭೋಪಾಲ್ ಶತಾಬ್ದಿ ಎಕ್ಸ್‌ಪ್ರೆಸ್ (12002), 150 ಕಿಮೀ/ಗಂ
4- ಮುಂಬೈ - ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್ (12951) ಮತ್ತು ನವದೆಹಲಿ - ಕಾನ್ಪುರ್ ಶತಾಬ್ದಿ ಎಕ್ಸ್‌ಪ್ರೆಸ್ (12034), ಗಂಟೆಗೆ 140 ಕಿಮೀ
5- ನವದೆಹಲಿ - ಹೌರಾ ರಾಜಧಾನಿ ಎಕ್ಸ್‌ಪ್ರೆಸ್ (12302) ಮತ್ತು ನವದೆಹಲಿ - ಸೀಲ್ದಾಹ್ ಡುರೊಂಟೊ ಎಕ್ಸ್‌ಪ್ರೆಸ್ (12260), ಗಂಟೆಗೆ 135 ಕಿಮೀ
6- ಮುಂಬೈ LTT - H.ನಿಜಾಮುದ್ದೀನ್ AC ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22109), 130 km/hr
7- ಎಚ್.ನಿಜಾಮುದ್ದೀನ್ - ಬಾಂದ್ರಾ ಗರೀಬ್ ರಥ (12910), ಗಂಟೆಗೆ 130 ಕಿ.ಮೀ.
8- ಮುಂಬೈ ಸೆಂಟ್ರಲ್ - ಅಹಮದಾಬಾದ್ ಎಸಿ ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ (12932), 130 ಕಿಮೀ/ಗಂ
9- ನವದೆಹಲಿ - ಹೌರಾ ಡುರೊಂಟೊ ಎಕ್ಸ್‌ಪ್ರೆಸ್ (12273),
10- ನವದೆಹಲಿ - ಅಲಹಾಬಾದ್ ಡುರೊಂಟೊ ಎಕ್ಸ್‌ಪ್ರೆಸ್ (12276) ಮತ್ತು
11- ಹೌರಾ - ಆನಂದ್ ವಿಹಾರ್ ಯುವ ಎಕ್ಸ್‌ಪ್ರೆಸ್ (12249), 120 ರಿಂದ 130 ಕಿಮೀ/ಗಂಟೆ
12- ಮಹಾರಾಷ್ಟ್ರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (12908), ಗಂಟೆಗೆ 110 ಕಿ.ಮೀ
13- ಕೋಟಾ - ಹೆಚ್.ನಿಜಾಮುದ್ದೀನ್ ಜನ ಶತಾಬ್ದಿ ಎಕ್ಸ್‌ಪ್ರೆಸ್ (12059), 110 ಕಿಮೀ/ಗಂ

English summary
In the upcoming Budget 2023, the government may announce 35 new hydrogen fueled trains and around 500 new Vande Bharat trains
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X