ಬಿಎಸ್ಎನ್ಎಲ್ 155 ರು ಪ್ರೀಪೇಯ್ಡ್ ಪ್ಯಾಕ್ ಎಲ್ಲರಿಗೂ ಲಭ್ಯ
ಬೆಂಗಳೂರು, ಸೆಪ್ಟೆಂಬರ್ 11: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ ಎನ್ಎಲ್ ನ ಪ್ರೀಪೇಯ್ಡ್ ಪ್ಯಾಕೇಶ್ 155 ರು ಎಸ್ ಟಿವಿ ಈಗ ಎಲ್ಲರಿಗೂ ಲಭ್ಯವಾಗಲಿದೆ. ಈ ಮುಂಚೆ ಸೀಮಿತ ಪ್ರದೇಶಗಳಲ್ಲಿ ಮಾತ್ರ ಲಭ್ಯವಿತ್ತು.
155ರು ಗಳ ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ 17 ದಿನಗಳ ಅವಧಿಗೆ ಪ್ರತಿದಿನಕ್ಕೆ 2ಜಿಬಿಯಂತೆ ಇಂಟರ್ನೆಟ್ ಡೇಟಾ ಸಿಗಲಿದೆ. ಒಟ್ಟಾರೆ, 34 ಜಿಬಿ ಡೇಟಾ ಹೊಂದಬಹುದಾಗಿದೆ. ಈ ಮುಂಚೆ 90 ದಿನಗಳ ಅವಧಿಗೆ ಈ ಯೋಜನೆ ಲಭ್ಯವಿತ್ತು. ಈಗ ಯಾವುದೇ ಮಿತಿ ಇಲ್ಲ. ಇದಲ್ಲದೆ, 14 ರು, 29 ರು, 40 ರು, 57 ರು, 68 ರು, 78 ರು 82 ರು, 85 ರು, 198 ರು ಹಾಗೂ 241 ರುಗಳ ಪ್ರೀಪೇಯ್ಡ್ ಪ್ಯಾಕ್ ಗಳ ಡೇಟಾ ಬದಲಾಯಿಸಲಾಗಿದೆ.
ಜಿಯೋದ 149 ರು ಹಾಗೂ 198 ರು ಪ್ಯಾಕೇಜ್ ಗಳಿಗೆ ಪೈಪೋಟಿ ನೀಡಲು ಬಿಎಸ್ ಎನ್ಎಲ್ 155 ರು ಹಾಗೂ 198ರು ಗಳ ಪ್ಯಾಕ್ ಘೋಷಿಸಿತ್ತು. ಇದಲ್ಲದೆ, 57 ರುಗಳ ಪ್ಯಾಕ್ ನಲ್ಲಿ ಪ್ರತಿದಿನ 1 ಜಿಬಿ ಡೇಟಾ ಲಭ್ಯವಾಗಲಿದ್ದು, 21 ದಿನಗಳ ವ್ಯಾಲಿಡಿಟಿ ಹೊಂದಿದೆ.

40 ರು ಗಳ ಬಿಎಸ್ ಎನ್ಎಲ್ ಪ್ರೀಪೇಯ್ಡ್ ಪ್ಯಾಕ್ ನಲ್ಲಿ 5 ದಿನಗಳ ಅವಧಿಗೆ 1 ಜಿಬಿ ಡೇಟಾ ಸಿಗಲಿದೆ. 68 ರು, 78 ರು ಹಾಗೂ 82ರು ಗಳಲ್ಲಿ ಕ್ರಮವಾಗಿ 2 ಜಿಬಿ, 4ಜಿಬಿ ಡೇಟಾ, ಕ್ರಮವಾಗಿ 5,3 ಹಾಗೂ 4 ದಿನಗಳ ವ್ಯಾಲಿಡಿಟಿ ಇದೆ












Click it and Unblock the Notifications