499 ರು ಗೆ ಫೀಚರ್ ಫೋನ್ ಹೊರ ತಂದ ಬಿಎಸ್ಎನ್ಎಲ್
ಬೆಂಗಳೂರು, ಡಿಸೆಂಬರ್ 26: ಭಾರತ್ ಸಂಚಾರ್ ನಿಗಮ್ ನಿಯಮಿತ (ಬಿಎಸ್ಎನ್ಎಲ್) ಹಾಗೂ ಡೆಟೆಲ್ ಸಂಸ್ಥೆ ಜತೆಗೂಡಿ ಡೆಟೆಲ್ ಡಿ 1 ಹೆಸರಿನಲ್ಲಿ ಅತಿ ಕಡಿಮೆ ಬೆಲೆಗೆ ಫೀಚರ್ ಫೋನ್ ಪರಿಚಯಿಸುತ್ತಿವೆ.
ಕೇವಲ 499 ರು ಗಳಿಗೆ ಸಿಗಲಿರುವ ಈ ಫೀಚರ್ ಫೋನ್ ನ ಮೊದಲ ರೀಚಾರ್ಜ್ ವ್ಯಾಲಿಡಿಟಿ 365 ದಿನಗಳ ವರೆಗೂ ಇರಲಿದೆ. ಟಾಕ್ ಟೈಮ್ 103 ರು ತನಕ ಸಿಗಲಿದೆ.

ಬಿಎಸ್ಎನ್ಎಲ್ ನಿಂದ ಬಿಎಸ್ಎನ್ಎಲ್ ಗೆ 0.15 ಪೈಸೆ ಪ್ರತಿ ನಿಮಿಷದಂತೆ ಕರೆ ದರಗಳಿವೆ. ಬೇರೆ ಸಂಸ್ಥೆಗಳ ಮೊಬೈಲ್ ಕರೆಗೆ 0.40 ಪೈಸೆ/ನಿಮಿಷ ದರ ನಿಗದಿಯಾಗಿದೆ. ಬಿಎಸ್ಎನ್ಎಲ್ ಗ್ರಾಹಕರಿಗೆ 28 ದಿನಗಳ ರಿಂಗ್ ಬ್ಯಾಕ್ ಆಫರ್ ಕೂಡಾ ನೀಡಲಾಗಿದೆ.
1.44 ಇಂಚು ಒಂದೇ ಬಣ್ಣದ ಡಿಸ್ಪ್ಲೇ, 650 ಎಂಎಎಚ್ ಬ್ಯಾಟರಿ, ಟಾರ್ಚ್ ಲೈಟ್, ಫೋನ್ ಬುಕ್, ಎಫ್ಎಂ ರೇಡಿಯೋ, ಸ್ಪೀಕರ್ ಸೌಲಭ್ಯಗಳಿವೆ.
ಸ್ಮಾರ್ಟ್ ಫೋನ್ ಗಳ ಕಾಲದಲ್ಲೂ ಫೀಚರ್ ಫೋನ್ ಗಳಿಗೆ ಮಾರುಕಟ್ಟೆ ಮೌಲ್ಯ ಇರುವುದು ಭಾರತದಲ್ಲಿ ಮಾತ್ರ, ಆರಂಭದಲ್ಲಿ ಫೋನ್ ಬಳಕೆ ಮಾಡಲು ಇಂಥ ಫೋನ್ ಉಪಯುಕ್ತ ಎಂದು ಬಿಎಸ್ ಎನ್ಎಲ್ ನ ವಕ್ತಾರರು ಹೇಳಿದ್ದಾರೆ.












Click it and Unblock the Notifications